ಮಂಡ್ಯ: ಡಿಸೇಲ್, ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವ ವಿರುದ್ಧ ಸಚಿವ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ . ಬಿಜೆಪಿಯವರಿಗೆ ಯಾವ ನೈತಿಕತೆ ಹಕ್ಕಿದೆ. ರಾಜಕೀಯ ಮಾಡೋದು ಅವಶ್ಯಕತೆ ಇದ್ಯಾ? ಪೆಟ್ರೋಲ್ 70 ರಿಂದ 100 ಹೋದಾಗ ಏನ್ ಮಾಡ್ತಿದ್ದರೂ. ಮನಮೋಹನ್ ಸಿಂಗ್ 1 ಲಕ್ಷ ಕೋಟಿ ಕೊಟ್ಟು ಸಬ್ಸಿಡಿ ನೀಡಿ ತೈಲ ಬೆಲೆ ಕಡಿಮೆ ಮಾಡಿದ್ರು. ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳದಲ್ಲಿ ಬೆಲೆ ಎಷ್ಟಿದೆ. ರೈತರಿಗೆ ಅನುಕೂಲ ಮಾಡಬೇಕು, ಅಭಿವೃದ್ದಿ ಮಾಡಬೇಕು ಅಂದಾಗ ಬೆಲೆ ಏರಿಕೆಯಾಗುತ್ತೆ. ಟ್ಯಾಕ್ಸ್ ಇಲ್ಲದೆ ಸರ್ಕಾರ ನಡೆಸೋಕೆ ಆಗುತ್ತಾ?. ಆಗ ಎರಡು ಲಕ್ಷ ಕೋಟಿ ಬಜೆಟ್ ಆಗ್ತಿತ್ತು. ಬಿಜೆಪಿಯವರ ರೀತಿ ಅಬ್ನಾರ್ಮಲ್ ಆಗಿ ನಾವು ಬೆಲೆ ಏರಿಕೆ ಮಾಡಿಲ್ಲ. ಇತಿ-ಮಿತಿಯಲ್ಲಿ ಬೆಲೆ ಏರಿಕೆ ಮಾಡಿದ್ದೇವೆ. ಪ್ರತಿಭಟನೆ ಮಾಡ್ಲಿ ಬನ್ನಿ, ಎಷ್ಟು ದಿನ ಮಾಡ್ತರೇ.
ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬ ಆರ್.ಅಶೋಕ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ವಿಪಕ್ಷ ನಾಯಕ ಅಶೋಕ್ ವಿರುದ್ದ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ . ಸರ್ಕಾರದಿಂದ ಚೆಕ್ ಬೌನ್ಸ್ ಆಗಿದ್ಯಾ. ಇಲ್ಲ ನೌಕರರ ಸಂಬಳ ನಿಲ್ಲಿಸಿದ್ಯಾ?. ಸಾರ್ವಜನಿಕರಿಗೆ ಕೊಡುವ ಸೇವೆ ನಿಂತಿದ್ಯಾ. ಸಿದ್ದರಾಮಯ್ಯ ರೀತಿ ಗುಡ್ ಗೌರ್ನಮ್ಮೆಂಟ್ ಕೊಡುವವರು ಮತ್ತೊಬ್ಬರಿಲ್ಲ. ದಿವಾಳಿ ಎಂದರೇ ಏನ್ ಅರ್ಥ. ಅಶೋಕ್ ಗೆ ಯಾರು ವಿಪಕ್ಷ ನಾಯಕ ಸ್ಥಾನ ಕೊಟ್ರೋ. ವಿಪಕ್ಷ ಸ್ಥಾನ ಸಿಎಂಗೆ ಸಮವಾಗಿರುವ ಹುದ್ದೆ. ಆದ್ದರಿಂದ ಆ ಸ್ಥಾನದ ಬಗ್ಗೆ ಗಾಂಭೀರ್ಯತೆ ಇರಬೇಕು. ಮಾತನಾಡುವಾಗ ತೂಕ ಇರಬೇಕು. ಅಶೋಕನ ವಿಚಾರಕ್ಕೆ ಕೌಂಟರ್ ಕೊಡೋದು ಅನವಶ್ಯಕ. ಸಿಎಂ ಹೇಳಿದಂತೆ ಅಶೋಕ್ ತಿಳವಳಿಕೆ, ಮಾಹಿತಿ ಕಡಿಮೆ ಎಂದರು.