Saturday, April 19, 2025
Google search engine

Homeರಾಜ್ಯಸುದ್ದಿಜಾಲಶ್ರೀಗಂಧ ಲಯನ್ ಸಂಸ್ಥೆಯಿಂದ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮ

ಶ್ರೀಗಂಧ ಲಯನ್ ಸಂಸ್ಥೆಯಿಂದ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮ

ತಾಂಡವಪುರ: ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಮೈಸೂರಿನ ಶ್ರೀಗಂಧ ಲಯನ್ ಸಂಸ್ಥೆಯಿಂದ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲಯನ್ ಸಂಸ್ಥೆಯ ರಾಜ್ಯಪಾಲರಾದ ಕೃಷ್ಣೆಗೌಡರು ಗ್ರಾಮೀಣ ಭಾಗದ ಮಹಿಳೆಯರಿಗೆ ಸಂಸ್ಥೆಯಿಂದ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮ ಕೊಡುವ ಮೂಲಕ ಮಹಿಳೆಯರು ಸ್ವಉದ್ಯೋಗ ಮಾಡುವ ಮೂಲಕ ಮಹಿಳೆಯರು ತಮ್ಮ ಮನೆಯ ಆರ್ಥಿಕ ಹೊಣೆಯನ್ನು ನಿಭಾಯಿಸಲು ಸಹಕಾರಿ ಆಗಲಿದ್ದು, ಮಹಿಳೆಯರು ಶ್ರಮಪಟ್ಟು ತರಬೇತಿ ಪಡೆದುಕೊಂಡರೆ ಸ್ವಂತ ದುಡಿಮೆ ಮಾಡುವ ಮೂಲಕ ತಮ್ಮ ಕಾಲ ಮೇಲೆ ತಾವು ನಿಂತುಕೊಂಡು ಸಂಸಾರವನ್ನು ನಿಭಾಯಿಸಿಕೊಂಡು ಹೋಗುವ ಮೂಲಕ ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ಮಹಿಳೆಯರಿಗೆ ಕರೆ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ ಶಿವಣ್ಣನವರು ಮಾತನಾಡಿ ಲಯನ್ ಸಂಸ್ಥೆಯ ಅಧ್ಯಕ್ಷರಾದ ಜ್ಯೋತಿ ಮಂಜುನಾಥ ರವರ ಕನಸು ಮಹಿಳೆಯರು ಸ್ವಂತ ದುಡಿಮೆಯಲ್ಲಿ ಸಂಸಾರವನ್ನು ನಿಭಾಯಿಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂಬುವುದು ಅವರ ಆಸೆಯಾಗಿದ್ದು, ಆದ್ರಿಂದ ಅವರು ಗ್ರಾಮೀಣ ಭಾಗದ ಮಹಿಳೆಯರಿಗೆ ನಮ್ಮ ಸಂಸ್ಥೆಯಿಂದ ಏನಾದರೂ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ನಮ್ಮ ತಾಂಡವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಕೊಡಿಸುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಮುಂದಾಗಿದ್ದಾರೆ.

ಅವರ ಕನಸನ್ನು ನನಸು ಮಾಡಲು ಮಹಿಳೆಯರು ಶ್ರಮಪಟ್ಟು ತರಬೇತಿಯನ್ನು ಪಡೆದು ದುಡಿಮೆ ಮಾಡಿದರೆ ಆರ್ಥಿಕವಾಗಿ ಮಹಿಳೆಯರು ಮುಂದೆ ಬರುವ ಜೊತೆಗೆ ಅವರ ಕನಸನ್ನು ನನಸು ಮಾಡಿದಂತಾಗುತ್ತದೆ ಈ ಪ್ರಯೋಜನವನ್ನು ಮಹಿಳೆಯರು ಪಡೆದುಕೊಳ್ಳಿ ಎಂದು ತಿಳಿಸಿದ ಶಿವಣ್ಣನವರು ಇನ್ನು ಮುಂದೆಯೂ ಸಹ ಲಯನ್ಸ್ ಸಂಸ್ಥೆಯವರು ಇದೇ ರೀತಿ ಬೇರೆ ಬೇರೆ ಗ್ರಾಮಗಳನ್ನು ಸಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಮಹಿಳೆಯರಿಗೆ ಆಸರೆಯಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.

ಲಯನ್ ಸಂಸ್ಥೆಯ ಸಿದ್ದೇಗೌಡರು ಮಾತನಾಡಿ ಇಂತಹ ತರಬೇತಿ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುವುದಕ್ಕೆ ತುಂಬಾ ಹೆಮ್ಮೆಯಾಗುತ್ತದೆ. ಮಹಿಳೆಯರು ಈ ಪ್ರಯೋಜನವನ್ನು ಪಡೆದುಕೊಳ್ಳಬೇಕು ನಾನು ಕೂಡ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಕೊಡಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರಿನ ಶ್ರೀಗಂಧ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಜ್ಯೋತಿ ಮಂಜುನಾಥ್ ರವರು ಮಾತನಾಡಿ ಮಹಿಳೆಯರು ಧೈರ್ಯವಾಗಿ ತಮ್ಮ ಮುಜುಗರವನ್ನು ಬಿಟ್ಟು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತರಬೇತಿಯನ್ನು ಪಡೆದುಕೊಂಡರೆ ಮಹಿಳೆಯರು ಸ್ವಂತ ದುಡಿಮೆಯಿಂದ ಆರ್ಥಿಕವಾಗಿ ಮುಂದೆ ಬರಲು ಸಾಧ್ಯ ಎಂದು ಹೇಳಿದರು .

ಕಾರ್ಯಕ್ರಮದಲ್ಲಿ ಗೌರ್ನರ್ ಕೃಷ್ಣೇಗೌಡ ಲಯನ್ ಸಂಸ್ಥೆಯ ಅಧ್ಯಕ್ಷ ಜ್ಯೋತಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾಗಮ್ಮ, ಉಪಾಧ್ಯಕ್ಷರಾದ ಬಿ ಶಿವಣ್ಣ ,ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಟಿ ಪಿ ಮಹೇಶ್ , ಉಪಾಧ್ಯಕ್ಷರಾದ ಮಾಲೆಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಪ್ರಕಾಶ್ ರಾಮಚಂದ್ರ, ಲಯನ್ ಸಂಸ್ಥೆಯ ಶ್ರೀನಿವಾಸ್, ಲಯನ್ ಸಂಸ್ಥೆಯ ಸಿದ್ದೇಗೌಡ, ಲಕ್ಷ್ಮಿಕಾಂತ್ , ಮಂಜುನಾಥ್ ಗ್ರಾಮ ಪಂಚಾಯತ್ ಸದಸ್ಯ ಮಧು ಪಾಟೀಲ್ ಸಂಘದ ಕಾರ್ಯದರ್ಶಿ ರಾಧಾ ,ಮುಖಂಡರಾದ ಟಿ ಎಸ್ ರವಿ, ಮರಿಸ್ವಾಮಿ, ಪಾಂಡು ಗುತ್ತಿಗೆದಾರ ಮಹದೇವಸ್ವಾಮಿ ಶಿವಣ್ಣ ಲಯನ್ ಸಂಸ್ಥೆಯ ಕಾರ್ಯದರ್ಶಿ ಸುಮಾ ಖಜಾಂಚಿ ವಾಣಿ ಗುರುದತ್ ಅಡಕನಹಳ್ಳಿ ರವಿ ಹಾಗೂ ಸಂಘದ ನಿರ್ದೇಶಕರು ಮಹಿಳೆಯರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

RELATED ARTICLES
- Advertisment -
Google search engine

Most Popular