Saturday, April 19, 2025
Google search engine

Homeರಾಜಕೀಯಜಾತಿ ಮತ್ತು ದ್ವೇಷದ ರಾಜಕಾರಣ ಮಾಡುವ ಬದಲು ಭಿಕ್ಷೆ ಬೇಡುವುದು ಲೇಸು-ಸಾ.ರಾ. ಟೀಕೆ

ಜಾತಿ ಮತ್ತು ದ್ವೇಷದ ರಾಜಕಾರಣ ಮಾಡುವ ಬದಲು ಭಿಕ್ಷೆ ಬೇಡುವುದು ಲೇಸು-ಸಾ.ರಾ. ಟೀಕೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಹೊರ ಗುತ್ತಿಗೆ ಆಧಾರದ ಮೇಲೆ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ವಿವಿಧ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರನ್ನು ತೆಗೆದು ಹಾಕಿ ತಮ್ಮ ಸಂಬoಧಿಕರಿಗೆ ನೀಡಿದ್ದಾರೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.

ಪಟ್ಟಣದ ತಾಲೂಕು ಕಛೇರಿ ಆವರಣದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕಳೆದ ೧೫ ವರ್ಷಗಳ ಕಾಲ ಅಧಿಕಾರದಲ್ಲಿದ್ದ ನಾನು ಜಾತಿ ಮತ್ತು ಪಕ್ಷ ರಾಜಕಾರಣ ಮಾಡಿಲ್ಲ ಎಂದರು.

ಮಾಜಿ ಸಚಿವರಾದ ಎಚ್.ವಿಶ್ವನಾಥ್, ಎಸ್.ನಂಜಪ್ಪ ಮತ್ತು ಮಾಜಿ ಶಾಸಕ ಮಂಚನಹಳ್ಳಿ ಮಹದೇವ್ ಅವರ ಅವಧಿಯಲ್ಲಿ ನೇಮಕ ಮಾಡಲಾಗಿದ್ದ ನೌಕರರನ್ನು ಕರ್ತವ್ಯದಿಂದ ತೆಗೆಯುವ ಕೆಲಸಕ್ಕೆ ಕೈ ಹಾಕಿರಲಿಲ್ಲ ಎಂದು ಸ್ಪಷ್ಟಪಡಿಸಿದ ಮಾಜಿ ಸಚಿವರು ನಿಮ್ಮಗೆ ತಾಕ್ಕತ್ತಿದ್ದರೆ ಹೊಸದಾಗಿ ಶಾಲಾ ಕಾಲೇಜು ಮತ್ತು ಇತರ ಉದ್ಯೋಗ ಸೃಷ್ಟಿಸುವ ಯೋಜನೆಗಳನ್ನು ಅನುಷ್ಠಾನ ಮಾಡಿ ಕೆಲಸ ನೀಡಬೇಕು ಇರುವವರನ್ನು ಬದಲಾವಣೆ ಮಾಡಿ ಬಡವರಿಗೆ ತೊಂದರೆ ನೀಡುವ ದಾರಿದ್ರ ರಾಜಕಾರಣ ಮಾಡಬಾರದು ಎಂದು ಸಲಹೆ ನೀಡಿದರು.

ಚಂದಗಾಲು ಆತ್ಮಹತ್ಯೆ ಪ್ರಕರಣದಲ್ಲಿ ತಾವು ಪ್ರವಾಸಿ ಮಂದಿರದಲ್ಲಿ ನ್ಯಾಯ ಸಂದಾನ ಮಾಡಿ ನೀಡಲಾದ ೨ ಲಕ್ಷ ರೂಗಳಲ್ಲಿ ಆರೋಪಿಯಿಂದ ಪಡೆದ ೭೫ ಸಾವಿರ, ಓರ್ವ ಪುರಸಭೆ ಸದಸ್ಯರಿಂದ ೨೫ ಸಾವಿರ ಮತ್ತು ಪೊಲೀಸ್ ಅಧಿಕಾರಿಯಿಂದ ೧ ಲಕ್ಷ ಕೊಡಿಸಲಾಗಿದೆ ಎಂದು ಆರೋಪಿಸಿದ ಸಾ.ರಾ.ಮಹೇಶ್ ೪೮ ಗಂಟೆಗಳ ಕಾಲ ಶವ ಇರಿಸಿಕೊಂಡ ಕಾರಣಕ್ಕಾಗಿ ನಾನು ದೆಹಲಿಯಿಂದ ಬಂದು ಸರ್ಕಾರದಿಂದ ಪರಿಹಾರ ಧನದ ಚೆಕ್‌ಅನ್ನು ಕೊಡಿಸಲಾಯಿತು ಈ ಕೆಲಸವನ್ನು ತಾವೇ ಮಾಡಿದ್ದರೆ ನಾನು ಏತಕ್ಕಾಗಿ ಬರುತ್ತಿದ್ದೆ ಎಂದು ಪ್ರಶ್ನಿಸಿದರು.

ಕಳೆದ ೧೩ ತಿಂಗಳಿನಿoದ ಅಭಿವೃದ್ದಿ ಯೋಜನೆಗಳಿಗಾಗಿ ಸರ್ಕಾರದಿಂದ ಯಾವುದೇ ಹಣ ಮಂಜೂರಾಗಿಲ್ಲ ನನ್ನ ಅಧಿಕಾರವಧಿಯಲ್ಲಿ ಬಂದ ಅನುದಾನಕ್ಕೆ ಗುದ್ದಲಿ ಪೂಜೆ ಮಾಡಲಾಗಿದೆ. ಟೆಂಡರ್ ಕರೆಯದಿದ್ದರೂ ಬಟ್ಟಿಗನಹಳ್ಳಿಯಿಂದ ಮಿರ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಗುದ್ದಲಿ ಪೂಜೆ ಮಾಡಲಾಗಿದೆ. ಈವರೆಗೂ ಆ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿಲ್ಲ ಇದರ ಜತೆಗೆ ಪುರಸಭೆಯ ವಾಣಿಜ್ಯ ಮಳಿಗೆದಾರರಿಂದ ಲಂಚ ಪಡೆದಿರುವುದು ಜಗತ್ ಜಾಹಿರವಾಗಿದೆ ಇಂತಹಾ ರಾಜಕಾರಣ ಮಾಡುವ ಬದಲು ಅರ್ಕೇಶ್ವರಸ್ವಾಮಿ ದೇವಾಲಯದ ಬಳಿ ಬಿಕ್ಷೆ ಬೇಡುವುದು ಲೇಸು ಎಂದು ಟೀಕಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ ಕ್ಷೇತ್ರದಲ್ಲಿ ಜಾತಿ ಮತ್ತು ದ್ವೇಷದ ರಾಜಕಾರಣ ನಡೆಯುತ್ತಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಬಡವರನ್ನು ನೌಕರಿಯಿಂದ ವಜಾಗೊಳಿಸಿರುವ ಬಗ್ಗೆ ಜೂ.೨೬ರಂದು ನಡೆಯುವ ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ ಚರ್ಚಿಸಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಡಿ.ರವಿಶಂಕರ್ ಮತ್ತು ತಾಲೂಕು ಆಡಳಿತದ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿ ಪ್ರತಿಭಟಿಸಲಾಯಿತು. ಅಸಮರ್ಥ ಆಡಳಿತ ನಡೆಸುತ್ತಿರುವ ತಹಶೀಲ್ದಾರ್ ಸಿ.ಎಸ್.ಪೂರ್ಣಿಮರವರಿಗೆ ಮನವಿ ಪತ್ರ ಸಲ್ಲಿಸುವುದಿಲ್ಲ, ಜಿಲ್ಲಾಧಿಕಾರಿಗಳೇ ಬರಬೇಕೆಂದು ಪಟ್ಟು ಹಿಡಿದರು. ಆನಂತರ ಸ್ಥಳಕ್ಕಾಗಮಿಸಿದ ಅಪಾರ ಜಿಲ್ಲಾಧಿಕಾರಿ ಡಾ.ಶಿವರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು.

ಜಿ.ಪಂ. ಮಾಜಿ ಸದಸ್ಯರಾದ ಸಿ.ಜೆ.ದ್ವಾರಕೀಶ್, ಎಂ.ಟಿ.ಕುಮಾರ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್, ಜೆಡಿಎಸ್ ತಾಲೂಕು ಅಧ್ಯಕ್ಷ ಹೆಚ್.ಸಿ.ಕುಮಾರ್, ಪುರಸಭೆ ಸದಸ್ಯರಾದ ಉಮೇಶ್, ಕೆ.ಎಲ್.ಜಗದೀಶ್, ಸಂತೋಷ್‌ಗೌಡ, ನಗರ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರುದ್ರೇಶ್(ಅಯ್ಯ), ಮುಖಂಡರಾದ ಸಿ.ಬಿ.ಲೋಕೇಶ್, ಎಂ.ಎಸ್.ಕಿಶೋರ್, ಬಾಲಾಜಿಗಣೇಶ್, ಅನೀಫ್‌ಗೌಡ, ಕೆ.ಜೆ.ಕುಚೇಲ, ವಿಷ್ಣುವರ್ಧನ್, ಬಿ.ರಮೇಶ್, ಸಾ.ರಾ.ನಾಗೇಶ್, ಬಿ.ಆರ್.ಕುಚೇಲ, ನಂದಿನಿರಮೇಶ್, ಹನಸೋಗೆನಾಗರಾಜು, ಸಿದ್ದಾಪುರಕಾಳಯ್ಯ, ತಾ.ಪಂ. ಮಾಜಿ ಅಧ್ಯಕ್ಷೆ ಭಾಗ್ಯಶಂಕರ್, ಮಾಜಿ ಸದಸ್ಯ ಶ್ರೀನಿವಾಸಪ್ರಸಾದ್, ಮಹಿಳಾ ಘಟಕದ ಪದಾಧಿಕಾರಿಗಳಾದ ದ್ರಾಕ್ಷಾಯಿಣಿ, ಮಿರ್ಲೆಧನಂಜಯ, ರಾಧಾಕೃಷ್ಣ, ರಾಜಲಕ್ಷಿö್ಮ, ರೂಪಸತೀಶ್, ಭಾಗ್ಯಕೃಷ್ಣೇಗೌಡ, ಯುವ ಜೆಡಿಎಸ್ ಅಧ್ಯಕ್ಷ ಡಿ.ಎಸ್.ಯೋಗೀಶ್, ಸೇರಿದಂತೆ ನೂರಾರು ಮಂದಿ ಹಾಜರಿದ್ದರು.

RELATED ARTICLES
- Advertisment -
Google search engine

Most Popular