Saturday, April 19, 2025
Google search engine

Homeಸ್ಥಳೀಯದೇಶದ ಆರ್ಥಿಕ ಬೆಳವಣಿಗೆಯು ಸಂಖ್ಯಾಶಾಸ್ತ್ರದ ಮೇಲೆ ನಿಂತಿದೆ: ಧನುಷ್

ದೇಶದ ಆರ್ಥಿಕ ಬೆಳವಣಿಗೆಯು ಸಂಖ್ಯಾಶಾಸ್ತ್ರದ ಮೇಲೆ ನಿಂತಿದೆ: ಧನುಷ್

ಮೈಸೂರು:  ಸಂಖ್ಯಾ ಶಾಸ್ತ್ರದ ವಿಚಾರದಲ್ಲಿ ಪ್ರೊ ಪ್ರಶಾಂತ್ ಚಂದ್ರ ಲೋಬಿಸ್ ಅವರ ಕೊಡುಗೆ ಬಹು ಮುಖ್ಯವಾಗಿದೆ. ದೇಶದ ಅರ್ಥಿಕತೆ ಬೆಳವಣಿಗೆಯು ಸಂಖ್ಯಾಶಾಸ್ತ್ರದ ಮೇಲೆ ನಿಂತಿದೆ  ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳಾದ ಧನುಷ್ ಅವರು ತಿಳಿಸಿದರು.

ಪ್ರೊ ಪ್ರಶಾಂತ್ ಚಂದ್ರ ಮಹಾಲನೋಬಿಸ್ ಅವರ ಜನ್ಮದಿನದ ಪ್ರಯುಕ್ತ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ವತಿಯಿಂದ ಸಾಂಖ್ಯಿಕ ದಿನಾಚರಣೆಯನ್ನು ನಗರದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಆರ್ಥಿಕತೆ ಬದಲಾವಣೆಗೆ ಸಂಖ್ಯಾ ಶಾಸ್ತ್ರ ಹೇಗೆ ಪರಿಣಾಮವನ್ನು ಬೀರುತ್ತದೆ ಮತ್ತು ಸರ್ಕಾರ ಮತ್ತು ಖಾಸಗಿ ವಲಯಗಳಲ್ಲಿ ಸಂಖ್ಯಾ ಶಾಸ್ತ್ರವು ಕಾರ್ಯ ನಿರ್ವಹಿಸಲು ಹೆಚ್ಚಿನ ಪರಿಣಾಮಗಳ ಬಗ್ಗೆ ತಿಳಿಸಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾ ಅಧಿಕಾರಿಗಳಾದ ಜೆ ಮಹೇಂದ್ರ ಅವರು ಮಾತನಾಡಿ ಸರ್ಕಾರಿ ಇಲಾಖೆಗಳಲ್ಲಿ ನಡೆಯುವ ಪ್ರತಿಯೊಂದು ಕಾರ್ಯದಲ್ಲಿಯೂ ಕೂಡ ಸಂಖ್ಯೆಗಳು ಒಳಗೊಂಡಿರುತ್ತದೆ. ಸಂಖ್ಯಾ ಅಂಶಗಳು ಪ್ರತಿಯೊಂದು ಇಲಾಖೆಗಳಲೂ ಸಹ ತನ್ನ ಮೂಲ ಅಂಶಗಳನ್ನು ನೀಡುತ್ತದೆ. ಸರ್ಕಾರಿ ಇಲಾಖೆಗಳಲ್ಲಿ ಯಾವುದೇ ಕಾರ್ಯಗಳು ನಡೆಯಬೇಕಾದರೆ ಸಾಂಖ್ಯಿಕ ಅಂಶಗಳು ಪ್ರಮುಖವಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಂದು ಇಲಾಖೆಗಳಲ್ಲಿಯೂ ಕೂಡ ಸಾಂಖ್ಯಿಕ ವಿಭಾಗದ ಕಾರ್ಯವು ಅತ್ಯಂತ ಮುಖ್ಯವಾದದ್ದು ನಮ್ಮ ಇಲಾಖೆಗೆ ಒಳಪಡುವ ಪ್ರತಿಯೊಬ್ಬರೂ ಕೂಡ ಯಾವುದೇ ಸಮಸ್ಯೆಗಳಿದ್ದರೂ ಕೂಡ ಧೈರ್ಯವಾಗಿ ಮುನ್ನುಗ್ಗಿ ಎಂದರು.

ಪ್ರೊ. ಪ್ರಶಾಂತ್ ಚಂದ್ ಮಹಾಲನೋಬಿಸ್ ಅವರ ವಿಚಾರಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿದರು. ಪ್ರಮುಖವಾಗಿ ಜಿಲ್ಲಾ ಸಂಬಂಧಿತ ಇಲಾಖೆಗಳು, ಅರಣ್ಯ ಇಲಾಖೆ, ಆರೋಗ್ಯ ಇಲಾಖೆ , ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬರೂ ಕೂಡ ಪ್ರಮುಖವಾದ ಪಾತ್ರವನ್ನು ವಹಿಸುತ್ತಾರೆ ಎಂದು ತಿಳಿಸಿದರು.

ಸಹಾಯಕ ನಿರ್ದೇಶಕರಾದ ದಿವ್ಯ ಅವರು ಮಾತನಾಡಿ ಎಲ್ಲಾ ಸರ್ಕಾರಿ ಇಲಾಖೆಗಳಿಗೆ ಈ ಸಾಂಖ್ಯಿಕ ಇಲಾಖೆಯು ತಾಯಿ ಬೇರು ಇದಂತೆ ಯಾವುದೇ ಇಲಾಖೆಯು ತನ್ನ ಕಾರ್ಯವನ್ನು ನಿರ್ವಹಿಸಲು ನಮ್ಮ ಇಲಾಖೆಯು ಮೂಲ ಅಂಶವಾಗಿರುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಕಾರ್ಯ ವೈಖರಿಯ ಬಗ್ಗೆ ವಿಚಾರಗಳನ್ನು ಹಂಚಿಕೊಂಡರು. ಕೆಲವು ಇಲಾಖೆಗಳಲ್ಲಿ ಸಂಖ್ಯೆಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿಯ ಕಾರ್ಯಗಳು ನಡೆಯುವುದರ ಬಗ್ಗೆ ತಿಳಿಸಿದರು. ವೃದ್ದಾಪ್ಯ ವೇತನ , ವಿಧವಾ ವೇತನ ಮತ್ತು ಇನ್ನಿತರ ಸರ್ಕಾರಿ ಯೋಜನೆಗಳಲ್ಲಿ ಕಂಡು ಬರುವ ವಿವಿಧ ಲೋಪ ದೋಷಗಳನ್ನು ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು.

ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕರಾದ ದಾಕ್ಷಾಯಣಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿ ವರ್ಗದವರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular