Monday, April 21, 2025
Google search engine

Homeರಾಜ್ಯತುಮಕೂರಿನಲ್ಲಿ ಐದು ಮಂದಿ ಮೇಲೆ ಹುಚ್ಚುನಾಯಿ ದಾಳಿ: ಓರ್ವ ಬಾಲಕಿ ಸ್ಥಿತಿ ಗಂಭೀರ

ತುಮಕೂರಿನಲ್ಲಿ ಐದು ಮಂದಿ ಮೇಲೆ ಹುಚ್ಚುನಾಯಿ ದಾಳಿ: ಓರ್ವ ಬಾಲಕಿ ಸ್ಥಿತಿ ಗಂಭೀರ

ತುಮಕೂರು: ತುಮಕೂರಿನ ನಗರದ ಗೋಕುಲ ಬಡಾವಣೆಯಲ್ಲಿ 5ಕ್ಕೂ ಹೆಚ್ಚು ಮಂದಿ ಮೇಲೆ ಹುಚ್ಚುನಾಯಿ ದಾಳಿ ಮಾಡಿದ್ದು,  ಓರ್ವ ಬಾಲಕಿಗೆ ಗಂಭೀರ ಗಾಯಗಳಾಗಿದೆ.

ಸಂಜೆ 5 ಗಂಟೆ ಸುಮಾರಿಗೆ ಗೋಕುಲ ಬಡಾವಣೆಯಲ್ಲಿ ಕಾಣಿಸಿಕೊಂಡ ಹುಚ್ಚುನಾಯಿ, ಮನೆ ಮುಂದೆ ಆಟವಾಡುತ್ತಿದ್ದ 9 ವರ್ಷ ಬಾಲಕಿ ಮೇಲೆ ದಾಳಿ ಮಾಡಿದೆ. ಬಾಲಕಿಯ ಕೈ, ಕಾಲಿಗೆ ಕಚ್ಚಿರುವ ಹುಚ್ಚುನಾಯಿ, ಮನೆಯಲ್ಲಿ ಸಾಕಿದ್ದ ಎರಡು ನಾಯಿಗಳ ಮೇಲೆಯೂ ದಾಳಿ ಮಾಡಿದೆ. ಹೊರಗಡೆಯಿಂದ ಬರುತ್ತಿರುವ ನಾಯಿಗಳ ಹಾವಳಿಯಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.

ರಿಂಗ್ ರಸ್ತೆ ಸಮೀಪ ಇರುವ ಹಿನ್ನೆಲೆ, ಬೇರೆ ಕಡೆಯಿಂದ ರಿಂಗ್ ರಸ್ತೆ ಬಳಿ ನಾಯಿಗಳನ್ನ ತಂದು ಬಿಟ್ಟು ಹೋಗುತ್ತಿರುವ ಆರೋಪ ಕೇಳಿ ಬಂದಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಬಿ‌.ವಿ. ಅಶ್ವಿಜಾ, ಗಾಯಗೊಂಡಿದ್ದ ಬಾಲಕಿಯ ಆರೋಗ್ಯ ವಿಚಾರಿಸಿದರು. ಪಾಲಿಕೆ ವತಿಯಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ದಾಳಿ ನಡೆಸಿದ್ದ ಹುಚ್ಚುನಾಯಿಯನ್ನು ಸ್ಥಳೀಯರು ಹೊಡೆದು ಸಾಯಿಸಿದರು. ಬಳಿಕ ಅದನ್ನು ಪ್ರಯೋಗಾಲಯಕ್ಕೆ ಕೊಂಡೊಯ್ದ ಪಶುವೈದ್ಯರು ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular