Saturday, April 19, 2025
Google search engine

Homeರಾಜ್ಯಭ್ರೂಣ ಲಿಂಗ ಪತ್ತೆ : ಮಾಹಿತಿ ನೀಡಿದವರಿಗೆ ₹1 ಲಕ್ಷ ಬಹುಮಾನ; ಆರೋಗ್ಯ ಇಲಾಖೆ

ಭ್ರೂಣ ಲಿಂಗ ಪತ್ತೆ : ಮಾಹಿತಿ ನೀಡಿದವರಿಗೆ ₹1 ಲಕ್ಷ ಬಹುಮಾನ; ಆರೋಗ್ಯ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಭ್ರೂಣ ಹತ್ಯೆ ಕೇಸ್​ಗಳ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಹೆಣ್ಣು ಭ್ರೂಣ ಪತ್ತೆಯಾಗುತ್ತಿದ್ದಂತೆ ಗರ್ಭಪಾತ ಮಾಡಲಾಗುತ್ತಿದೆ. ಹೀಗಾಗಿ ಸದ್ಯ ರಾಜ್ಯದಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ ತಡೆಯಲು ಆರೋಗ್ಯ ಇಲಾಖೆ ಮುಂದಾಗಿದ್ದು, ಹೊಸ ಪ್ಲ್ಯಾನ್‌​ವೊಂದನ್ನು ಮಾಡಿದೆ. ಭ್ರೂಣಲಿಂಗ ಪತ್ತೆ ಹಾಗೂ ಹತ್ಯ ನಡೆಯುತ್ತಿದ್ದರೆ ಈ ಬಗ್ಗೆ ಸಾರ್ವಜನಿಕರು ಇಲಾಖೆಗೆ ಸೂಳಿವು ನೀಡಿದರೆ ಬರೋಬ್ಬರಿ ಒಂದು ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ.

ರಾಜ್ಯದಲ್ಲಿ ಭ್ರೂಣಹತ್ಯೆ ಸಂಪೂರ್ಣ ನೆಲಸಮ ಮಾಡಲು ಆರೋಗ್ಯ ಇಲಾಖೆ ಈ ಮಾಸ್ಟರ್ ಪ್ಲ್ಯಾನ್‌ ಸಿದ್ದವಾಗಿದ್ದು, ಆ ಮೂಲಕ ಭ್ರೂಣಹತ್ಯೆ ಕಿರಾತಕರ ಮಟ್ಟಹಾಕಲು ಹೊಸ ತಂತ್ರರೂಪಿಸಲಾಗಿದೆ. ಭ್ರೂಣಹತ್ಯೆ ಹಾಗೂ ಪತ್ತೆ ಯಾವುದೇ ಭಾಗದಲ್ಲಿ, ಆಸ್ಪತ್ರೆಯಲ್ಲಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಸ್ಪಷ್ಟವಾಗಿ ಆರೋಗ್ಯ ಇಲಾಖೆ ಜಸ್ಟ್ ಮಾಹಿತಿ ನೀಡಿದರೆ ಸಾಕು.

ಸುಳಿವು ನೀಡಿದವರಿಗೆ ಒಂದು ಲಕ್ಷ ರೂ. ಬಹುಮಾನ ಹಣ ನೀಡುವುದರೊಂದಿಗೆ ಮಾಹಿತಿ ನೀಡಿದವರ ಮಾಹಿತಿಯನ್ನ ಕೂಡ ಗೌಪ್ಯವಾಗಿ ಇಡಲಾಗುತ್ತದೆ.

ಈ ಹಿಂದೆ ಕೂಡ ಭ್ರೂಣಹತ್ಯೆ ಕರ್ಮಕಾಂಡವನ್ನ ಮಟ್ಟಹಾಕಲು, ಜನರನ್ನ ಬಳಸಿಕೊಳ್ಳಲು ಸರ್ಕಾರ ಮುಂದಾಗಿತ್ತು. ಭ್ರೂಣಹತ್ಯೆ ಅಥವಾ ಭ್ರೂಣ ಲಿಂಗ ಪತ್ತೆ ಬಗ್ಗೆ ಮಾಹಿತಿ ನೀಡುವವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಮಾಹಿತಿ ತಿಳಿಸುವವರ ಬಗ್ಗೆ ಗೌಪ್ಯತೆ ಕಾಪಾಡ್ತೀವಿ. ಹೆಲ್ಪ್​​ಲೈನ್​ ಮೂಲಕವೇ ಮಾಹಿತಿ ನೀಡಬಹುದು ಅಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರು.

RELATED ARTICLES
- Advertisment -
Google search engine

Most Popular