ಮಂಡ್ಯ: ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯಂದು ಸಕ್ಕರೆನಾಡಿನ ಯುವಕ ಯೋಗದಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ.
ಕೆ.ಆರ್.ಪೇಟೆಯ ಯುವಕ ಅಲ್ಲಮ ಪ್ರಭುನಿಂದ ಯೋಗದಲ್ಲಿ ಹಲವು ಪ್ರಶಸ್ತಿ, ಪದಕಗಳನ್ನು ಪಡೆದುಕೊಂಡಿದ್ದಾರೆ.

ಈ ಯುವಕನ ಯೋಗ ಸಾಧನೆಗೆ 2021ರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಲಭಿಸಿದೆ.
ದೆಹಲಿಯಲ್ಲಿ ನಡೆದ ಯೋಗ ಕಾರ್ಯಕ್ರದಲ್ಲಿ ಎಂಟು ನಿಮಿಷ ಶಿರ್ಷಾಸನ ಮಾಡಿ ವಿಶ್ವ ದಾಖಲೆ ಸೃಷ್ಠಿಸಿದ್ದಾರೆ.
ಯೋಗದಲ್ಲಿ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿರೋ ಅಲ್ಲಮ ಪ್ರಭು ಸಾಧನೆಗೆ ಗಣ್ಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.