ಮೈಸೂರು: ಮುಸಲ್ಮಾನರ ಪವಿತ್ರ ಹಬ್ಬಗಳಲ್ಲಿ ಒಂದಾದತ್ಯಾಗ, ಬಲಿದಾನದ ಸಂಕೇತ ಬಕ್ರೀದ್ ಹಬ್ಬವನ್ನು ನಗರದಲ್ಲಿಗುರುವಾರ ಮುಸಲ್ಮಾನರು ಸಂಭ್ರಮದಿಂದ ಆಚರಿಸಿದರು.
ನಗರದತಿಲಕ್‌ನಗರದಲ್ಲಿರುವಈದ್ಗಾ ಮೈದಾನದಲ್ಲಿಧಾರ್ಮಿಕಗುರು ಹಜರತ್ ಮೌಲಾನಾ ಮಹಮ್ಮದ್‌ಉಸ್ಮಾನ್?ರೀಫ್‌ಅವರ ನೇತೃತ್ವದಲ್ಲಿ ಸಾವಿರಾರು ಮಂದಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಉದಯಗಿರಿ, ಕಲ್ಯಾಣಗಿರಿ, ರಾಜೀವ್‌ನಗರ, ಗೌಸಿಯಾನಗರ, ಮಂಡಿಮೊಹಲ್ಲಾ, ದೇವರಾಜ ಮೊಹಲ್ಲಾ, ಉಸ್ಮಾನಿಯಾ ಬ್ಲಾಕ್, ಎನ್.ಆರ್.ಮೊಹಲ್ಲಾ, ಕೆಸರೆ, ಹಳೆಕೆಸರೆ ಸೇರಿದಂತೆ ವಿವಿಧ ಬಡಾವಣೆಗಳ ಮುಸಲ್ಮಾನರುಈದ್ಗಾ ಮೈದಾನದಲ್ಲಿ ಸಮಾವೇಶಗೊಂಡು, ಸರ್‌ಖಾಜಿ ವಿಶೇ? ಸಂದೇಶ ನೀಡುತ್ತಿದ್ದಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಗುರುವಾರ ಬೆಳಗ್ಗೆ ಸುಮಾರುಅರ್ಧ ಗಂಟೆಗಳ ಕಾಲ ನಡೆದ ಪ್ರಾರ್ಥನೆಯಲ್ಲಿತ್ಯಾಗ, ಬಲಿದಾನದಕುರಿತು ಮತ್ತು ಪ್ರವಾದಿ ಮಹಮ್ಮದ್ ಪೈಗಂಬರ್‌ಕುರಿತಾಗಿ ಕೆಲವು ಸಾಲುಗಳನ್ನು ಹೇಳಿದರು. ನಂತರ, ಏಕಕಾಲದಲ್ಲಿ ಪ್ರಾರ್ಥಿಸಿದ ಬಳಿಕ ಅಂತ್ಯವಾಯಿತು.
ಪ್ರಾರ್ಥನೆ ಬಳಿಕ ಹಿರಿಯರು-ಕಿರಿಯರು, ಮಕ್ಕಳು ಎನ್ನದೆ ಪರಸ್ಪರಅಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ಹೊಸ ಉಡುಪು ಧರಿಸಿ ಸುವಾಸನೆ ಬೀರುವ ಸುಗಂಧದ್ರವ್ಯ ಹಾಕಿಕೊಂಡಿದ್ದಯುವಕರು ಪ್ರಾರ್ಥನೆ ಮುಗಿಯುತ್ತಿದ್ದಂತೆ ಸಂಭ್ರಮಿಸಿದರಲ್ಲದೆ, ಸೆಲ್ಫಿ ಕ್ಲಿಕ್ಕಿಸಿಕೊಂಡರು. ಇದಕ್ಕೂ ಮೊದಲು ಸ್ಥಳೀಯವಾಗಿರುವ ಪ್ರಾರ್ಥನಾ ಮಂದಿರಗಳಲ್ಲಿ ಮುಂಜಾನೆ ಪ್ರಾರ್ಥನೆ ಸಲ್ಲಿಸಿದ್ದರು.
ಬಿಗಿ ಪೊಲೀಸ್ ಬಂದೋಬಸ್ತ್: ಮುಸ್ಲಿಂರ ಪವಿತ್ರ ಹಬ್ಬವಾದ ಬಕ್ರೀದ್‌ಆಚರಣೆ ಹಿನ್ನೆಲೆಈದ್ಗಾ ಮೈದಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ
ಸಾಮೂಹಿಕ ಪ್ರಾರ್ಥನೆಗೆತಂಡೋಪತಂಡವಾಗಿಆಗಮಿಸುತ್ತಿದ್ದರಿಂದ ಕೆಲವು ಮಾರ್ಗಗಳ ಸಂಚಾರ ಬದಲಿಸಲಾಗಿತ್ತು. ಈದ್ಗಾ ಮೈದಾನದ ಸುತ್ತಮುತ್ತಲಿನ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಇದಲ್ಲದೆ, ಸೂಕ್ಷ್ಮ ಪ್ರದೇಶಗಳಾದ ಮಂಡಿಮೊಹಲ್ಲಾ, ತಿಲಕ್‌ನಗರ, ಉದಯಗಿರಿ, ಎನ್.ಆರ್.ಮೊಹಲ್ಲಾ ಸೇರಿಇನ್ನಿತರ ಕಡೆಗಳಲ್ಲಿ ಪೊಲೀಸರನ್ನು ನಿಯೋಜಿಸುವ ಮೂಲಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈದ್ಗಾ ಮೈದಾನದ ಬಳಿ ಎಸಿಪಿಗಳು, ಇನ್ಸ್ಪೆಕ್ಟರ್‌ಗಳು, ಸಬ್ ಇನ್ಸ್ಪೆಕ್ಟರ್‌ಗಳನ್ನು ನಿಯೋಜಿಸಲಾಗಿತ್ತು.
ಖರೀದಿ ಜೋರು: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮಂಡಿ ಮೊಹಲ್ಲಾದ ಸಾಡೇರಸ್ತೆ, ಮೀನಾ ಬಜಾರ್‌ಗಳಲ್ಲಿ ಖರೀದಿಯ ಭರಾಟೆಜೋರಾಗಿತ್ತು. ಮಂಗಳವಾರ ಮತ್ತು ಬುಧವಾರಕುಟುಂಬ ಸಮೇತ ಅಂಗಡಿಗಳಿಗೆ ತೆರಳಿ ಅಗತ್ಯ ವಸ್ತುಗಳು ಹಾಗೂ ಹೊಸ ಬಟ್ಟೆಖರೀದಿ ಮಾಡಿದರು. ವಿಶೇ?ಎಂದರೇ ಸಾಡೇರಸ್ತೆ, ಮೀನಾ ಬಜಾರ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರದಲ್ಲಿ ಪಾಲ್ಗೊಳ್ಳುವ ಮೂಲಕ ತಮಗಿ?ವಾದ ವಸ್ತುಗಳನ್ನು ಖರೀದಿ ಮಾಡಿದರು. ಬಟ್ಟೆ ಅಂಗಡಿಗಳು ಮುಸಲ್ಮಾನರಿಂದಲೇತುಂಬಿದ್ದವು.
ಬಡವರಿಗೆದಾನ ನೀಡಿ ಹಬ್ಬಆಚರಣೆ: ಬಕ್ರೀದ್ ಹಬ್ಬದ ಪ್ರಯುಕ್ತ ಉಳ್ಳವರು ಹೆಚ್ಚು ಕುರಿಗಳನ್ನು ಕತ್ತರಿಸಿ, ಮೂರು ಭಾಗವನ್ನಾಗಿ ಮಾಡಿಒಂದು ಭಾಗವನ್ನುತಾವೇಇಟ್ಟುಕೊಂಡು, ಮತ್ತೊಂದು ಭಾಗ ನೆಂಟರು, ಸಂಂಧಿಕರಿಗೆಕೊಟ್ಟು ಮತ್ತೊಂದು ಭಾಗವನ್ನು ಬಡವರಿಗೆದಾನ ನೀಡಿದರು. ಇನ್ನೂ ಕೆಲವರುಅತಿ ಹೆಚ್ಚು ಬಡವರುಇರುವ ಕಡೆಗಳಿಗೆ ತೆರಳಿ ದಾನ ಮಾಡಿ ಬಕ್ರೀದ್ ಹಬ್ಬವನ್ನು ಆಚರಿಸಿದರು.