Sunday, April 20, 2025
Google search engine

Homeರಾಜ್ಯಮದ್ಯ ಪ್ರಿಯರಿಗೆ ಸಿಹಿಸುದ್ದಿ : ಜುಲೈ 1ರಿಂದ ಕಡಿಮೆ ಬೆಲೆಗೆ ಸಿಗಲಿದೆ ಮದ್ಯ!

ಮದ್ಯ ಪ್ರಿಯರಿಗೆ ಸಿಹಿಸುದ್ದಿ : ಜುಲೈ 1ರಿಂದ ಕಡಿಮೆ ಬೆಲೆಗೆ ಸಿಗಲಿದೆ ಮದ್ಯ!

ಬೆಂಗಳೂರು: ಮದ್ಯಪ್ರಿಯರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಜುಲೈ ೧ ರಿಂದ ಕರ್ನಾಟಕದಲ್ಲಿ ಪ್ರೀಮಿಯಂ ಮದ್ಯದ ಬೆಲೆಗಳು ಭಾರಿ ಇಳಿಕೆಯಾಗಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದಂತೆ, ರಾಜ್ಯ ಸರ್ಕಾರವು ಕರಡು ಅಧಿಸೂಚನೆ ಹೊರಡಿಸಿದೆ.

ನೆರೆಹೊರೆಯ ರಾಜ್ಯಗಳಲ್ಲಿನ ಮದ್ಯದ ಬೆಲೆಗೆ ಅನುಗುಣವಾಗಿ ಕರ್ನಾಟಕದಲ್ಲೂ ಸೆಮಿ ಪ್ರೀಮಿಯಂ ಮತ್ತು ಪ್ರೀಮಿಯಂ ಬ್ರಾಂಡ್‌ಗಳ ಮದ್ಯದ ಬೆಲೆಯನ್ನು ಪರಿಷ್ಕರಿಸುವುದಾಗಿ ಸರಕಾರ ಬಜೆಟ್‌ನಲ್ಲಿ ಘೋಷಿಸಿತ್ತು. ಈ ಘೋಷಣೆ ಈಗ ಜಾರಿಯಾಗುತ್ತಿದ್ದು, ಹೊರ ರಾಜ್ಯಗಳಲ್ಲಿನ ಮದ್ಯದ ದರಪಟ್ಟಿ ಆಧರಿಸಿ ಹೊಸದಾಗಿ ಬೆಲೆ ನಿಗದಿಪಡಿಸಲಾಗಿದೆ. ಅಬಕಾರಿ ತೆರಿಗೆ ಇಳಿಕೆ ಸಂಬಂಧ ಕರಡು ಅಧಿಸೂಚನೆ ಪ್ರಕಟಿಸಿದೆ.

ಅಧಿಸೂಚನೆಯ ಪ್ರಕಾರ, ಹೊಸ ಬೆಲೆಗಳು ಜುಲೈ ೧ ರಿಂದ ಜಾರಿಗೆ ಬರಲಿವೆ. ಅಬಕಾರಿ ಇಲಾಖೆಯು ೧೬ ವರ್ಗಗಳ ಅತ್ಯಾಧುನಿಕ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಲು ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಜುಲೈ ೧ ರಿಂದ ಬ್ರಾಂಡ್‌ಗಳ ಆಧಾರದ ಮೇಲೆ ಬೆಲೆಗಳು ೧೦೦ ರಿಂದ ೨,೦೦೦ ರೂ.ವರೆಗೆ ಕಡಿಮೆಯಾಗಲಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಬ್ರಾಂಡಿ, ವಿಸ್ಕಿ, ಜಿನ್, ರಮ್ ಮತ್ತು ಬಿಯರ್, ವೈನ್, ಟಾಡಿ ಮತ್ತು ಫೆನ್ನಿ ಹೊರತುಪಡಿಸಿ ಇತರ ಮದ್ಯದ ಬೆಲೆಗಳು ಕಡಿಮೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ನಿಖರವಾದ ಕಡಿತವು ಬ್ರಾಂಡ್ ಮತ್ತು ಪ್ರಮಾಣವನ್ನು ಅವಲಂಬಿಸಿರುತ್ತದೆ.

ನೆರೆಯ ರಾಜ್ಯಗಳಲ್ಲಿನ ಮದ್ಯ ದರಗಳಿಗೆ ಸರಿ ಸಮನಾಗಿ ರಾಜ್ಯದಲ್ಲೂ ಮದ್ಯದ ದರ ಪರಿಷ್ಕರಿಸಲು ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳು- ೧೯೬೮ಕ್ಕೆ ತಿದ್ದುಪಡಿ ತರಲು ಕರಡು ಅಧಿಸೂಚನೆ ಪ್ರಕಟಿಸಲಾಗಿದೆ. ಜುಲೈ ೧ರಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿವೆ. ರಾಜ್ಯದಲ್ಲಿ ಈವರೆಗೆ ೧೮ ಸ್ಲ್ಯಾಬ್‌ಗಳಲ್ಲಿ ಮದ್ಯದ ಮೇಲೆ ಅಬಕಾರಿ ತೆರಿಗೆ ವಿಧಿಸಲಾಗುತ್ತಿತ್ತು. ಈಗ ಸ್ಲ್ಯಾಬ್‌ಗಳ ಸಂಖ್ಯೆಯನ್ನು ೧೬ಕ್ಕೆ ಇಳಿಸಲಾಗಿದೆ. ಸ್ಕಾಚ್ ವಿಸ್ಕಿಯ ಪ್ರೀಮಿಯಂ ಬ್ರಾಂಡ್‌ನ ಬೆಲೆ ಕರ್ನಾಟಕದಲ್ಲಿ ಸುಮಾರು ೭,೦೦೦ ರೂ.ಗಳು, ಆದರೆ ಇತರ ರಾಜ್ಯಗಳಲ್ಲಿ ಇದು ತುಂಬಾ ಕಡಿಮೆಯಾಗಿದೆ.

RELATED ARTICLES
- Advertisment -
Google search engine

Most Popular