Saturday, April 19, 2025
Google search engine

Homeರಾಜ್ಯಚನ್ನಪಟ್ಟಣ ಉಪಚುನಾವಣೆ: ಅಭ್ಯರ್ಥಿ ಯಾರಾಗಬೇಕು ಅಂತ ಬಿಜೆಪಿ-ಜೆಡಿಎಸ್ ನಾಯಕರು ಶೀಘ್ರದಲ್ಲಿ ತೀರ್ಮಾನ: ವಿಜಯೇಂದ್ರ

ಚನ್ನಪಟ್ಟಣ ಉಪಚುನಾವಣೆ: ಅಭ್ಯರ್ಥಿ ಯಾರಾಗಬೇಕು ಅಂತ ಬಿಜೆಪಿ-ಜೆಡಿಎಸ್ ನಾಯಕರು ಶೀಘ್ರದಲ್ಲಿ ತೀರ್ಮಾನ: ವಿಜಯೇಂದ್ರ

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹಾಲಿ ಶಾಸಕರಾಗಿದ್ರೂ ಚನ್ನಪಟ್ಟಣದಲ್ಲಿ ಸ್ಪರ್ಧೆಗೆ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ ಮಾಡಿದ್ದಾರೆ.

ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿ ಇಂದು ಶುಕ್ರವಾರ ಜಗನ್ನಾಥ ಭವನದಲ್ಲಿ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಮಾತಾಡಿದ ವಿಜಯೇಂದ್ರ, ಡಿಕೆಶಿ ಅವರು ಈಗಾಗಲೇ ಶಾಸಕರು ಇದ್ದಾರೆ. ಆದರೂ ಚನ್ನಪಟ್ಟಣದಲ್ಲಿ ಸ್ಪರ್ಧೆಯ ಅಭಿಲಾಷೆ ವ್ಯಕ್ತಪಡಿಸಿದ್ದಾರೆ .ಇದು ಅವರ ಪಕ್ಷದ ತೀರ್ಮಾನ. ಆದರೂ ಜನರ ಮನದಾಳದಲ್ಲಿ ಏನಿದೆ ಅನ್ನೋದು ಇನ್ನೂ ನಿಗೂಢವಾಗಿದೆ. ಬೆಂಗಳೂರು ಗ್ರಾಮೀಣ ಕ್ಷೇತ್ರದಲ್ಲಿ ತಮ್ಮನ್ನು ಸೋಲಿಸೋರೇ ಇಲ್ಲ ಅಂತ ಅಂದುಕೊಂಡಿದ್ರು. ಆದರೆ ಜನರ ತೀರ್ಪು ಏನಿತ್ತು ಅಂತ ಎಲ್ರೂ ನೋಡಿದ್ದೀರಿ ಎಂದು ತಿರುಗೇಟು ನೀಡಿದ್ದಾರೆ.

ಇದೇ ವೇಳೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಯಾರಾಗಬೇಕು ಅಂತ ನಾವು ಮತ್ತು ಜೆಡಿಎಸ್ ನಾಯಕರು ಅತೀ ಶೀಘ್ರದಲ್ಲೇ ತೀರ್ಮಾನ ಮಾಡುತ್ತೇವೆ ಅಂತ ವಿಜಯೇಂದ್ರ ತಿಳಿಸಿದರು.

RELATED ARTICLES
- Advertisment -
Google search engine

Most Popular