Saturday, April 19, 2025
Google search engine

Homeಸ್ಥಳೀಯನೈಋತ್ಯ ರೈಲ್ವೆಯ ಮೈಸೂರು ವಿಭಾಗದಿಂದ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ

ನೈಋತ್ಯ ರೈಲ್ವೆಯ ಮೈಸೂರು ವಿಭಾಗದಿಂದ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ

ಮೈಸೂರು: ನೈಋತ್ಯ ರೈಲ್ವೆಯ ಮೈಸೂರು ವಿಭಾಗವು “ಸ್ವಂತಕ್ಕಾಗಿ ಮತ್ತು ಸಮಾಜಕ್ಕಾಗಿ ಯೋಗ” ಎಂಬ ಈ ವರ್ಷದ ವಿಷಯದೊಂದಿಗೆ ಹೊಂದಿಕೆಯಾಗುವಂತೆ ಅಂತರರಾಷ್ಟ್ರೀಯ ಯೋಗ ದಿನವನ್ನು ಇಂದು ಅತ್ಯಂತ ಉತ್ಸಾಹದಿಂದ ಆಚರಿಸಿತು.

ಜಾಗತಿಕ ಶಾಂತಿ, ಸೌಹಾರ್ದತೆ ಮತ್ತು ಪ್ರಗತಿಯನ್ನು ಉತ್ತೇಜಿಸುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮವನ್ನು ಮೈಸೂರಿನ ಯಾದವಗಿರಿಯಲ್ಲಿರುವ ರೈಲ್ವೆ ಕಲ್ಯಾಣ ಕೇಂದ್ರದಲ್ಲಿ ನಡೆಸಲಾಯಿತು.

ಈ ಆಚರಣೆಯನ್ನು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ   ಶಿಲ್ಪಿ ಅಗರ್ವಾಲ್,  ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 ಬಳಿಕ ಮಾತನಾಡಿದ ಅಗರ್ವಾಲ್, ಯೋಗದ ಹಲವಾರು ಪ್ರಯೋಜನಗಳನ್ನು ವಿವರಿಸಿ, ರೈಲ್ವೆ ನೌಕರರು ಮತ್ತು ಅವರ ಕುಟುಂಬಗಳು ನಿಯಮಿತವಾದ ಯೋಗಾಭ್ಯಾಸವನ್ನು ತಮ್ಮ ಜೀವನದಲ್ಲಿ ಸಂಯೋಜಿಸಿಕೊಳ್ಳಲು ತಿಳಿಸಿದರು.

ಇಂದಿನ ವೇಗದ ಜಗತ್ತಿನಲ್ಲಿ ಯೋಗದ ಪ್ರಸ್ತುತತೆಯನ್ನು ಅವರು ವಿವರಿಸಿ ಸಮಗ್ರವಾದ ಯೋಗಕ್ಷೇಮವನ್ನು ಸಾಧಿಸಲು ನಿರಂತರ ಅಭ್ಯಾಸದ ಅಗತ್ಯವನ್ನು ಒತ್ತಿ ಹೇಳಿದರು. ಈ ಉಪಕ್ರಮವು ತನ್ನ ನೌಕರರು ಮತ್ತು ಅವರ ಕುಟುಂಬಗಳ ಸಮಗ್ರ ಆರೋಗ್ಯದ ಬಗ್ಗೆ ನೈಋತ್ಯ ರೈಲ್ವೆಗೆ ಇರುವ ಬದ್ಧತೆಯನ್ನು ತೋರಿಸಿ ಶಾಂತಿ, ಸಾಮರಸ್ಯ ಮತ್ತು ಪ್ರಗತಿಯ ವಾತಾವರಣವನ್ನು ಪ್ರತಿಬಿಂಬಿಸುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ಮೈಸೂರಿನ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಸಾಮಾನ್ಯ)   ವಿನಾಯಕ್ ನಾಯಕ್ ರವರು ಮತ್ತು ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ (ಮೂಲಸೌಕರ್ಯ ಮತ್ತು ಕಾರ್ಯಾಚರಣೆಗಳು) ವಿಜಯಾ,  ಇತರ ಹಿರಿಯ ಅಧಿಕಾರಿಗಳು ಮತ್ತು ಸರಿಸುಮಾರು 200 ಸಿಬ್ಬಂದಿಗಳೊಂದಿಗೆ ಭಾಗವಹಿಸಿದ್ದರು.

ಒಂದು ಗಂಟೆ ಕಾಲ ನಡೆದ ಈ ಯೋಗ ಕಾರ್ಯಕ್ರಮವನ್ನು ‘ಆರ್ಟ್ ಆಫ್ ಲಿವಿಂಗ್‌’ನ ಪ್ರತಿನಿಧಿಗಳು (ಶಿಕ್ಷಕರು) ನಡೆಸಿಕೊಟ್ಟರು. ಈ ಶಿಕ್ಷಕರು ಸಾಮಾನ್ಯ ಯೋಗದ ಶಿಷ್ಟಾಚಾರದ ಪ್ರಕಾರ ಸರಳ ಆಸನಗಳ ಕಲಿಸುವಿಕೆ ಮೂಲಕ ಭಾಗವಹಿಸುವವರಿಗೆ ಮಾರ್ಗದರ್ಶನ ನೀಡಿ  ಪ್ರತಿಯೊಂದು ಆಸನಕ್ಕೆ ಇರುವ ಅಪಾರ ಪ್ರಯೋಜನಗಳನ್ನು ಮನವರಿಕೆ ಮಾಡಿದರು.

ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿವಿಧ ನಿಲ್ದಾಣಗಳು ಮತ್ತು ಡಿಪೋಗಳಲ್ಲಿ ಇದೇ ರೀತಿಯಲ್ಲಿ ಯೋಗ ಸಂಸ್ಕೃತಿಯ ಮೂಲಕ ಆರೋಗ್ಯ ಮತ್ತು ಯೋಗಕ್ಷೇಮದ ವ್ಯಾಪಕ ಪ್ರಚಾರ ಮಾಡುವ ಮೂಲಕ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.

RELATED ARTICLES
- Advertisment -
Google search engine

Most Popular