ವರದಿ: ಎಡತೊರೆ ಮಹೇಶ್
ಹೆಚ್.ಡಿ.ಕೋಟೆ: ತಾಲ್ಲೂಕಿನ ಹ್ಯಾಂಡ್ ಪೋಸ್ಟ್ ನಲ್ಲಿ ಅಪರಿಚಿತ ವ್ಯಕ್ತಿಯ ಬಲ ಗಾಲಿಗೆ ಗ್ಯಾಂಗ್ರಿನ್ ಆಗಿ ನರಳುತ್ತಿದ್ದು, ವ್ಯಕ್ತಿಯ ನೆರವಿಗೆ ಸ್ಥಳಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಮತ್ತು ತಂಡ ಧಾವಿಸಿದ್ದಾರೆ.
ಮೂಕನಾಗಿರುವ ವ್ಯಕ್ತಿಗೆ ಯಾರು ವಾರಸುದಾರರು ಇಲ್ಲದ ಕಾರಣ ಸದರಿ ವ್ಯಕ್ತಿಯ ಬಲಗಾಲು ಸಂಪೂರ್ಣ ಕೊಳೆತು ನರಳುತ್ತಿದ್ದನು.

ವ್ಯಕ್ತಿಯನ್ನು 108 ತುರ್ತು ವಾಹನದ ಜೊತೆ ಧಾವಿಸಿ ರೋಗಿಯನ್ನು ಸಾರ್ವಜನಿಕ ಆಸ್ಪತ್ರೆ ಕರೆ ತಂದು ಡಾ.ಪ್ರಜ್ವಲ್ ಮತ್ತು ತಂಡದವರಿಂದ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೆ. ಆರ್. ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಪ್ರೇಮ್, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಾದ ರವಿರಾಜ್, ಶಿವು ,ಸಂತೋಷ್, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಇದ್ದರು.