ಮಂಗಳೂರು (ದಕ್ಷಿಣ ಕನ್ನಡ): ಉಪ್ಪಿನಂಗಡಿ ಪೃಥ್ವಿ ಕಾಂಪ್ಲೆಕ್ಸ್ ನಲ್ಲಿರುವ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಅಂಗಡಿಯನ್ನು ಬೆಂಕಿ ಸಂಪೂರ್ಣವಾಗಿ ಆವರಿಸಿದ್ದು, ಪಕ್ಕದಲ್ಲಿನ ಕೆಲವು ಅಂಗಡಿಗಳಿಗೆ ವ್ಯಾಪಿಸಿ ಹಾನಿಯಾಗಿದೆ.

ಪೃಥ್ವಿ ಮಹಲ್ ನಲ್ಲಿನ ಅಂಗಡಿಯೊಂದರ ಮಾಲೀಕರು ರಾತ್ರಿ ತಮ್ಮ ಅಂಗಡಿಗಳನ್ನು ಮುಚ್ಚಿ ಮನೆಗೆ ತೆರಳಿದ್ದ ವೇಳೆ ಅವಘಡ ಸಂಭವಿಸಿದೆ.
ಮೊದಲಿಗೆ ಫ್ಯಾನ್ಸಿ ಅಂಗಡಿಯಿಂದ ಹೊಗೆ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಅವಘಡದ ಶಂಕೆ ವ್ಯಕ್ತವಾಗಿದೆ.
ಅಗ್ನಿ ಶಾಮಕ ದಳದವರು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.