Saturday, April 19, 2025
Google search engine

Homeಅಪರಾಧಶಾಲೆ ಬಳಿಯ ಪೊದೆಯಲ್ಲಿ ಮಹಿಳೆಯ ನಗ್ನ ಮೃತದೇಹ ಪತ್ತೆ: ಅತ್ಯಾಚಾರ ಶಂಕೆ

ಶಾಲೆ ಬಳಿಯ ಪೊದೆಯಲ್ಲಿ ಮಹಿಳೆಯ ನಗ್ನ ಮೃತದೇಹ ಪತ್ತೆ: ಅತ್ಯಾಚಾರ ಶಂಕೆ

ಆಂಧ್ರಪ್ರದೇಶ: ಇಲ್ಲಿನ ಶಾಲೆಯ ಬಳಿಯ ಪೊದೆಯೊಂದರಲ್ಲಿ ಮಹಿಳೆಯ ಬೆತ್ತಲೆ ಮೃತದೇಹ ಪತ್ತೆಯಾಗಿದ್ದು, ಮಹಿಳೆಯನ್ನು ಕೊಲ್ಲುವ ಮೊದಲು ಅತ್ಯಾಚಾರ ಎಸಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಆಂಧ್ರಪ್ರದೇಶದ ಬಪ್ತಾಲಾ ಜಿಲ್ಲೆಯಲ್ಲಿರುವ ಬಾಲಕಿಯರ ಪ್ರೌಢಶಾಲೆಯ ಬಳಿಯ ಪೊದೆಗಳಲ್ಲಿ ಬಟ್ಟೆ ಇಲ್ಲದೆ 21 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ.

ಮಹಿಳೆಯ ಕುಟುಂಬದ ಸದಸ್ಯರ ಹೇಳಿಕೆಯಂತೆ ಬಾಪಟ್ಲಾ ಜಿಲ್ಲೆಯ ಎಪುರುಪಾಲೆಂ ಗ್ರಾಮದ ಮಹಿಳೆ ಬೆಳಿಗ್ಗೆ 5:30 ರಿಂದ 5:45 ರ ನಡುವೆ ಮನೆಯಿಂದ ಹೊರಹೋಗಿದ್ದು ಆ ಬಳಿಕ ಹಿಂತಿರುಗಲಿಲ್ಲ ಇದರಿಂದ ಗಾಬರಿಗೊಂಡ ಮನೆಮಂದಿ ಹುಡುಕಲು ಹೋದಾಗ ಮೃತದೇಹ ಪೊದೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹತ್ಯೆಯ ತನಿಖೆಗಾಗಿ ಐದು ತಂಡಗಳನ್ನು ರಚಿಸಲಾಗಿದೆ ಮತ್ತು ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ ಅದರಂತೆ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸುವುದಾಗಿ ಹೇಳಿದ್ದಾರೆ.

ಇನ್ನು ಘಟನೆ ನಡೆದ ವಿಚಾರ ಗೊತ್ತಾಗುತ್ತಿದ್ದಂತೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಗ್ರಾಮಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ವಂಗಲಪುಡಿ ಅನಿತಾ ಅವರಿಗೆ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಗ್ರಾಮಕ್ಕೆ ಆಗಮಿಸಿದ ಅನಿತಾ ಮೃತ ಮಹಿಳೆಯ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ ನೀಡಿದ್ದು, ಜೊತೆಗೆ ಪ್ರಕರಣದಲ್ಲಿ ಭಾಗಿಯಾದವರನ್ನು ನಲವತ್ತೆಂಟು ಗಂಟೆಗಳ ಒಳಗಾಗಿ ಬಂಧಿಸಬೇಕು, ಯಾವುದೇ ಒತ್ತಡಕ್ಕೆ ಮಣಿಯಲು ಅವಕಾಶ ಇಲ್ಲ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular