Saturday, April 19, 2025
Google search engine

Homeಅಪರಾಧಮಂಡ್ಯ: ರೈಲಿಗೆ ಸಿಲುಕಿ ವೃದ್ಧೆಯ ದಾರುಣ ಸಾವು

ಮಂಡ್ಯ: ರೈಲಿಗೆ ಸಿಲುಕಿ ವೃದ್ಧೆಯ ದಾರುಣ ಸಾವು

ಮಂಡ್ಯ: ಹಳಿ ದಾಟುವ ವೇಳೆ ರೈಲಿಗೆ ಸಿಲುಕಿ ವೃದ್ಧೆ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲ್ಲೂಕಿನ ಹನಕೆರೆ ಬಳಿ ನಡೆದಿದೆ.

ಹೊನ್ನಗಳ್ಳಿ ಮಠದ ನಿಂಗಮ್ಮ (70) ಮೃತಪಟ್ಟ ವೃದ್ದೆ.

ಮಂಡ್ಯಕ್ಕೆ ತೆರಳುವ ಮಾರ್ಗದಲ್ಲಿ ಹನಕೆರೆ ಬಳಿ ರೈಲ್ವೆ ಗೇಟ್ ಹಾಕಲಾಗಿತ್ತು. ರೈಲ್ವೆ ಗೇಟ್ ಬಳಿ ದಾಟುವ ವೇಳೆ ತಿರುಪತಿ ಎಕ್ಸ್’ಪ್ರೆಸ್ಸ್ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ರೈಲು ವೇಗವಾಗಿ ಬಂದು ಡಿಕ್ಕಿ ಹೊಡೆದ ರಭಸಕ್ಕೆ 100 ಮೀಟರ್ ದೂರ ಮಹಿಳೆ ದೇಹ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ‌.

ಸ್ಥಳಕ್ಕೆ ಮಂಡ್ಯ ರೈಲ್ವೇ ಹೊರಠಾಣೆ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹನಕೆರೆ ಬಳಿ 20 ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ದಾರಿಯಾಗಿದ್ದು, ಮೇಲ್ಸುತುವೆ ನಿರ್ಮಿಸುವ ಬಗ್ಗೆ ಹಲವು ವರ್ಷಗಳ ಬೇಡಿಕೆ ಇದ್ದರೂ ಹಲವು ಕಾರಣಗಳಿಂದ ನೆರವೇರದೇ ಇರುವುದು ಸಾರ್ವಜನಿಕರಿಗೆ ತೀವ್ರ ಅನಾನುಕೂಲವಾಗಿದೆ.

ಇದರಿಂದಾಗಿ ಅಪಘಾತಗಳಿಗೆ ಆಹ್ವಾನ ನೀಡಿದಂತಾಗಿದೆ‌.

RELATED ARTICLES
- Advertisment -
Google search engine

Most Popular