Sunday, April 20, 2025
Google search engine

Homeರಾಜ್ಯಪ್ರಸಿದ್ಧ ಮುಳ್ಳಯ್ಯನಗಿರಿ, ಎತ್ತಿನಭುಜ ಟ್ರಿಕ್ಕಿಂಗ್ ನಿಷೇಧ!

ಪ್ರಸಿದ್ಧ ಮುಳ್ಳಯ್ಯನಗಿರಿ, ಎತ್ತಿನಭುಜ ಟ್ರಿಕ್ಕಿಂಗ್ ನಿಷೇಧ!

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಪ್ರಸಿದ್ಧ ಪ್ರಾಕೃತಿಕ ತಾಣ ಮುಳ್ಳಯ್ಯನಗಿರಿ ಹಾಗೂ ಎತ್ತಿನಭುಜದಲ್ಲಿ ಚಾರಣಕ್ಕೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ. ಮುಂಗಾರು ಸಮಯದಲ್ಲಿ ಚಿಕ್ಕಮಗಳೂರಿನ ಸೌಂದರ್ಯ ದುಪಟ್ಟಾಗಿರುತ್ತದೆ.

ಸದ್ಯ ಚಿಕ್ಕಮಗಳೂರಿನಲ್ಲಿ ಜೋರು ಮಳೆ, ಗಾಳಿ ಪ್ರಾರಂಭವಾಗಿದೆ. ಈ ಸಮಯದಲ್ಲಿ ಚಾರಣಕ್ಕೆ ಹೋಗುವುದು ಅಪಾಯ. ಆದರೂ ಕೂಡ ಜನರು ಈ ಪ್ರದೇಶದಲ್ಲಿ ಚಾರಣಕ್ಕೆ ತೆರಳುತ್ತಿದ್ದು, ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮೂಡಿಗೆರೆ ವಲಯ ಅರಣ್ಯ ಇಲಾಖೆ ತಾತ್ಕಾಲಿಕವಾಗಿ ಚಾರಣ ನಿಷೇಧಿಸಿದೆ.

ನೆರೆ ಜಿಲ್ಲೆ ಅಲ್ಲದೇ ರಾಜ್ಯದ ಮೂಲೆ ಮೂಲೆಯಿಂದ ಪ್ರವಾಸಿಗರು ಚಿಕ್ಕಮಗಳೂರಿಗೆ ಆಗಮಿಸುತ್ತಾರೆ. ಪ್ರಕೃತಿಕ ಸಂದರ್ಯದಿಂದ ಸಮೃದ್ಧಿವಾಗಿರುವ ಕಾಫಿನಾಡಿಗೆ ಸೊಬಗಿಗೆ ಪ್ರವಾಸಿಗರು ಫಿದಾ ಆಗಿದ್ದು ದಿನದಿಂದ ದಿನಕ್ಕೆ ಸಂಖ್ಯೆ ಹೆಚ್ಚುತ್ತಲೇ ಇದೆ.

RELATED ARTICLES
- Advertisment -
Google search engine

Most Popular