Monday, April 21, 2025
Google search engine

Homeಅಪರಾಧಮಂಗಳೂರು: ಪಿಡಬ್ಲ್ಯುಡಿ ಗುತ್ತಿಗೆದಾರನ ಮನೆ ಸದಸ್ಯರನ್ನು ಕಟ್ಟಿ ಹಾಕಿ, ನಗ ನಗದು ದರೋಡೆ

ಮಂಗಳೂರು: ಪಿಡಬ್ಲ್ಯುಡಿ ಗುತ್ತಿಗೆದಾರನ ಮನೆ ಸದಸ್ಯರನ್ನು ಕಟ್ಟಿ ಹಾಕಿ, ನಗ ನಗದು ದರೋಡೆ

ಮಂಗಳೂರು: ನಗರದ ಹೊರವಲಯದಲ್ಲಿರುವ ಉಳಾಯಿಬೆಟ್ಟು ಎಂಬಲ್ಲಿ ಪಿಡಬ್ಲ್ಯುಡಿ ಗುತ್ತಿಗೆದಾರರೊಬ್ಬರ ಮನೆಗೆ ನುಗ್ಗಿದ ದರೋಡೆಕೋರರ ತಂಡವೊಂದು ಮನೆಗೆ ನುಗ್ಗಿ ಚಾಕು ತೋರಿಸಿ ಮನೆಮಂದಿಯನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ ನಗ ನಗದನ್ನು ದೋಚಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಉಳಾಯಿಬೆಟ್ಟಿ ನಲ್ಲಿರುವ ಪಿಡಬ್ಲ್ಯುಡಿ ಕಂಟ್ರಾಕ್ಟರ್ ಪದ್ಮನಾಭ ಕೋಟ್ಯಾನ್ ಎಂಬವರ ಫಾರ್ಮ್ ಹೌಸ್ ಮನೆಗೆ ಸುಮಾರು ಏಳು ಎಂಟು ಮಂದಿ ದರೋಡೆಕೋರರ ತಂಡ ಶುಕ್ರವಾರ ರಾತ್ರಿ ಸುಮಾರು ಎಂಟು ಗಂಟೆಯ ಸುಮಾರಿಗೆ ಮನೆಯೊಳಗೆ ಪ್ರವೇಶಿಸಿ ಮನೆ ಮಂದಿಗೆ ಚಾಕು ತೋರಿಸಿ ಬೆದರಿಸಿ ಬಳಿಕ ಮನೆಮಂದಿಯನ್ನು ಕಟ್ಟಿಹಾಕಿ ಮನೆಯಲ್ಲಿದ್ದ ನಗ ನಗದು ದೋಚಿ ಪರಾರಿಯಾಗಿದ್ದಾರೆ,

ಪದ್ಮನಾಭ ಕೋಟ್ಯಾನ್ ನೀಡಿದ ದೂರಿನಲ್ಲಿ ದರೋಡೆಕೋರರು ಪ್ಯಾಂಟ್ ಶರ್ಟ್ ಧರಿಸಿದ್ದು ಮುಖಕ್ಕೆ ಮಾಸ್ಕ್ ಧರಿಸಿ ರಾತ್ರಿ ಸುಮಾರು ಎಂಟು ಗಂಟೆಯ ವೇಳೆಗೆ ಮನೆಯೊಳಗೆ ನುಗಿ ಮನೆಯಲ್ಲಿದ್ದವರಿಗೆ ಚಾಕು ತೋರೊಸಿ ಬೆದರಿಸಿ ಬಳಿಕ ಕುಟುಂಬ ಸದಸ್ಯರನ್ನು ಕಟ್ಟಿಹಾಕಿ ಮನೆಯಲ್ಲಿದ್ದ ಕಪಾಟುಗಳನ್ನು ಜಾಲಾಡಿ ನಗ ನಗದು ದೋಚಿ, ಬಳಿಕ ಪದ್ಮನಾಭ್ ಅವರ ವಾಹನವನ್ನು ದರೋಡೆಕೋರರು ತೆಗೆದುಕೊಂಡು ಹೋಗಿದ್ದು ಮನೆಯಿಂದ ಕೆಲ ದೂರದಲ್ಲಿ ಬಿಟ್ಟು ಹೋಗಿರುವುದಾಗಿ ದೂರು ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

RELATED ARTICLES
- Advertisment -
Google search engine

Most Popular