Tuesday, April 22, 2025
Google search engine

Homeಅಪರಾಧಹುಣಸೂರು: ಶುಂಠಿ ಮಧ್ಯೆ ಬೆಳೆಸಿದ್ದ ಗಾಂಜಾ ಗಿಡ ವಶ, ಆರೋಪಿ ಪರಾರಿ

ಹುಣಸೂರು: ಶುಂಠಿ ಮಧ್ಯೆ ಬೆಳೆಸಿದ್ದ ಗಾಂಜಾ ಗಿಡ ವಶ, ಆರೋಪಿ ಪರಾರಿ

ಹುಣಸೂರು: ಶುಂಠಿ ಬೆಳೆ ನಡುವೆ ಗಾಂಜಾ ಬೆಳೆದಿದ್ದ ಗಿಡವನ್ನು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ನಾಗರಹೊಳೆ ಉದ್ಯಾನದಂಚಿನ ಹನಗೋಡು ಹೋಬಳಿಯ ಕೋಣನಹೊಸಳ್ಳಿ ಅಂಗನವಾಡಿ ಕೇಂದ್ರದ ಮುಂಬಾಗದ ಹೊಲದಲ್ಲಿ ಕದ್ದುಮುಚ್ಚಿ ಬೆಳೆಯಲಾಗಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಡಿವೈಎಸ್‌ಪಿ ಕೆ.ಟಿ.ವಿಜಯ್‌ಕುಮಾರ್ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳ ತಂಡ ದಾಳಿ ನಡೆಸಿ ಸುಮಾರು 5 ಅಡಿ ಎತ್ತರದ 2,190 ಗ್ರಾಂ.ನ ಹಸಿ ಗಾಂಜಾ ಗಿಡವನ್ನು ವಶಕ್ಕೆ ಪಡೆಯಲಾಗಿದೆ.

ಜಮೀನಿನ ಮಾಲಿಕ ಪರಾರಿಯಾಗಿದ್ದು, ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಅಬಕಾರಿ ಇನ್ಸ್ ಪೆಕ್ಟರ್ ನಾಗಲಿಂಗಸ್ವಾಮಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular