ವಿನಯ್ ದೊಡ್ಡಕೊಪ್ಪಲು
ಕೆ.ಆರ್ ನಗರ : ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ಮಡೆ ಹಬ್ಬವು ತಂಬಿಟ್ಟಿನ ಅರತಿಯೊಂದಿಗೆ ಸಾವಿರಾರು ಮಂದಿಯ ಸಮ್ಮುಖದಲ್ಲಿ ಬಾರಿ ಸಂಭ್ರಮ ಮತ್ತು ಪಟಾಕಿಗಳ ಆರ್ಭಟದೊಂದಿಗೆ ವೈಭವ ಯುತವಾಗಿ ಶುಕ್ರವಾರ ರಾತ್ರಿ ನಡೆಯಿತು.
ಗ್ರಾಮದ ಹೊರವಲಯದಲ್ಲಿರುವ ಮಲ್ಲಮ್ಮನ ಕೊಳದ ಬಳಿ ಗ್ರಾಮದ ಮಹಿಳೆಯರು ಗಂಗೆ ಪೂಜೆ ಮಾಡಿ ಕಿಚಡಿ ಅನ್ನದ ಪ್ರಸಾದವನ್ನು ತಯಾರಿಸಿ ತಂಬಿಟ್ಟು ಮಾಡಿ ಅಲ್ಲಿಯೇ ಪ್ರತಿಷ್ಠಾಪಿಸಲಾಗಿದ್ದ ಆದಿ ಶಕ್ತಿ ಮುತ್ತು ತಾಳಮ್ಮ ದೇವರಿಗೆ ಮಹಿಳೆಯರು ಮತ್ತು ಗ್ರಾಮಸ್ಥರು ಪೂಜೆ ಸಲ್ಲಿಸಿದರು. ನಂತರ ಹಬ್ಬಕ್ಕಾಗಿ ಕರೆಸಲಾಗಿದ್ದ ಕೆ.ಆರ್.ನಗರದ ಮಧುವನಹಳ್ಳಿಯ ಗುಡ್ದೆದೇವರುಗಳ ತಂಡದವರು ನಡೆಸಿ ಕೊಟ್ಟ ದೇವರ ವಿವಿಧ ಭಕ್ತಿಯ ಹಾಡಿನ ಮೂಲಕ ಮನೆಸೂರೆಗೊಳ್ಳುವ ನೃತ್ಯದ ನಂತರ ಗ್ರಾಮದ ಕನ್ನಂಬಾಡಮ್ಮ, ಮುತ್ತುತಾಳಮ್ಮ,ಬಂದಂತೆಯಮ್ಮ, ಹಳಿಯೂರು ದೊಡಮ್ಮ ದೇವತೆಗಳನ್ನು ಬರಮಾಡಿ ಕೊಂಡರು.
ಬಳಿಕ ಮಡೆ ಹಬ್ಬಕ್ಕೆ ಚಾಲನೆ ದೊರೆಯುತ್ತಿದ್ದಂತೆಯೇ ಹಾಜರಿದ್ದ ಸಾವಿರಾರು ಗ್ರಾಮಸ್ಥರು ಮತ್ತು ಮಹಿಳೆಯರು ಉತ್ತಮ ಮಳೆ ಬೆಳೆ ಅಗಲಿ ಗ್ರಾಮಕ್ಕೆ ಒಳಿತಾಗಲಿ ಮತ್ತು ತಮ್ಮ ಹತ್ತಾರು ಇಷ್ಟಾರ್ಥಗಳನ್ನು ಈಡೇರಿಸುವಂತೆ ಆದಿಶಕ್ತಿ ಮುತ್ತುತ್ತಾಳಮ್ಮ ದೇವರಲ್ಲಿ ಪ್ರಾರ್ಥಿಸಿ ಕೊಂಡುಭಕ್ತಿ ಪರವಶವಾದರು.

ಬಳಿಕ ತಂಬಿಟ್ಟಿನ ಆರತಿ ಹೊತ್ತ ಮಹಿಳೆಯರು ಮತ್ತು ಕಳಸ ಹೊತ್ತ ಬಾಲಕಿಯರು ಗ್ರಾಮದ ದೇವರಹಟ್ಟಿ ಮಾರ್ಗವಾಗಿ ಗ್ರಾಮದ ಚೌಡಿ ಬೀದಿಯ ವರಗೆ ಮೆರವಣಿಗೆ ನಡೆಸುವ ವೇಳೆ ಗ್ರಾಮಸ್ಥರು ಆಡು,ಕುರಿಗಳನ್ನು ಬಲಿ ಕೊಟ್ಟು ಮುತ್ತುತಾಳಮ್ಮ ದೇವರಿಗೆ ಆರ್ಶಿವಾದ ಕೋರಿದ ಬಳಿಕ ಚೌಡಿ ಬೀದಿಯಲ್ಲಿ ಗುಡ್ಡೆ ದೇವರ ತಂಡದವರ ನೃತ್ಯದೊಂದಿಗೆ ಮಡೆ ಹಬ್ಬ ಮುಕ್ತಾಯವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ 13 ಕೋಮಿನ ಯಜಮಾನರಲ್ಲಿ ಒಬ್ಬರಾದ ಟಿ.ಪುರುಷೋತ್ತಮ್ ಕಳೆದ 11 ವರ್ಷದ ಹಿಂದೆ ನಡೆದಿದ್ದ ಈ ಹಬ್ಬ ಮುತ್ತುತ್ತಾಳಮ್ಮ ತಾಯಿ ಅನುಗ್ರಹ ದಿಂದ ಈ ಬಾರಿ ಈ ಬಂಡಿ ಮತ್ತು ಮಡೆ ಹಬ್ಬ ಯಶಸ್ವಿಯಾಗಿದ್ದು ಇದಕ್ಕೆ ಸಹಕಾರ ನೀಡಿದ ಗ್ರಾಮಸ್ಥರಿಗೆ ಎಲ್ಲಾ ಕೋಮಿನ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕುಪ್ಪೆ.ಗ್ರಾ.ಪಂ.ಅಧ್ಯಕ್ಷೆ ಸವಿತಾಶ್ರೀನಿವಾಸ್, ಸದಸ್ಯರಾದ ಸಿ.ಬಿ.ಧರ್ಮ, ರೇಖಾಉಮೇಶ್, ಯಜಮಾನರಾದ ಟಿ.ಪುರುಷೋತ್ತಮ್, ಸತ್ಯಪ್ಪ, ಸಿ.ಬಿ.ಸಂತೋಷ್, ತೊ.ಸ್ವಾಮಿಗೌಡ,ಸಿ.ಎಲ್.ಬಸವರಾಜು,ಡಿ.ಕುಮಾರಸ್ವಾಮಿ, ಸಿ.ಆರ್.ಉಮೇಶ್, ಪ.ಸ್ವಾಮಿಗೌಡ, ಸಿ.ಕೆ.ರಾಮಸ್ವಾಮಿ,ಹೆಗ್ಗಡಿರವೀಶ, ಅಪ್ಪಾಜಿಗೌಡ,ಬಡ್ಡಪ್ಪ ,ದೊಡ್ಡಜವರನಾಯಕ, ಮಾಜಿ ಜಿ.ಪಂ.ಅಧ್ಯಕ್ಷ ಸಿ.ಜೆ.ದ್ವಾರಕೀಶ್, ಮುಖಂಡರಾದ ಸಿ.ಬಿ.ಲೋಕೇಶ್, ಧರ್ಮಪಾಲ್, ಸಿ.ಟಿ.ಪಾರ್ಥ, ಡಿ..ಪುನೀತ್, ಸಿ.ಎಚ್.ನವೀನ್, ಸಿ.ಎಸ್.ಗಿರೀಶ್, ಸಿ.ಡಿ.ಪ್ರಭಾಕರ್, ಗಾಂಧಿಮಂಜಣ್ಣ, ಸಿ.ಆರ್.ಪಾರ್ಥ, ಉದಯ ಮಾವತ್ತೂರ್, ಮನುರಾಜಣ್ಣ, ರಮೇಶಮಿಳ್ಳೆ, ದಿಲೀಪ್ ತುಂಡು, ಮೀನ್ ರಾಮಸ್ವಾಮಿ, ಕೋಳಿಮನು, ಚೇತನ್ , ಮಣಿಕಂಠ,ಅರುಣ್ ಕಲ್ಲಹಟ್ಟಿ, ಯಶೋಧಮಹೇಶ್,ಸಿ.ಜಿ.ಜಗನ್ನಾಥ್, ಸಿ.ಬಿ.ಅಶೋಕ್, ವಾಟರ್ ಮ್ಯಾನ್ ಚೆಲುವರಾಜು,ವೆಂಕಟಣ್ಣ, ಬೆಣ್ಣೆ ವೆಂಕಟೇಶ್ ,ಪೊಲೀಸ್ ಧನು,ಅಂಬರೀಷ್, ವೀರುಪಾಕ್ಷ, ಅರ್ಚಕ ಸಿ.ಎಂ
ಮಂಜುನಾಯಕ್, ಶಿಕ್ಷಕರಾದ ಸಿ.ಎಂ.ಸ್ವಾಮಿ,ಪುಟ್ಟಸ್ವಾಮಿ,ಪ್ರಕಾಶ್, ನಿವೃತ್ತ ಶಿಕ್ಷಕ ಸಿ.ಎಲ್.ಕಾಳೇಗೌಡ
ಸೇರಿದಂತೆ ಸಾವಿರಾರು ಮಂದಿ ಹಾಜರಿದ್ದರು
“ಗಮನ ಸೆಳೆದ ಬಡವ- ರೈತರ ಮಕ್ಕಳಿಗೆ ಹೆಣ್ಣು ಕೊಡ್ರಪ್ಪ- ಕೊಡವ್ವ”
ಚಿಕ್ಕಕ್ಕೊಪ್ಪಲು ಗ್ರಾಮದಲ್ಲಿ ಮಡೆ ಹಬ್ಬದ ಪ್ರಯುಕ್ತ ನಡೆದ ತಂಬಿಟ್ಟಿನ ಮೆರವಣಿಗೆ ಮತ್ತು ಗುಡ್ಡದ ತಂಡದ ಹಾಡು ನೃತ್ಯ ಇನ್ನೊಂದೆಡೆ ಜೈಕಾರದ ಪಟಾಕಿಗಳ ಆರ್ಭಟದ ನಡುವೆ ಯುವಕರು ಬಡವರ ಮಕ್ಕಳಿಗೆ ಹೆಣ್ಣು ಕೊಡ್ರಪ್ಪ…ರೈತರ ಮಕ್ಕಳಿಗೆ ಹೆಣ್ಣು ಕೊಡವ್ವ ಆರ್ಶಿವಾದ ಮಾಡವ್ವ ಮುತ್ತುತಾಳಮ್ಮ ಎಂಬ ಘೋಷಣೆ ಹಬ್ಬದಲ್ಲಿ ವಿಶೇಷವಾಗಿ ಗಮನ ಸೆಳೆಯಿತು.