Saturday, April 19, 2025
Google search engine

Homeರಾಜ್ಯಸುದ್ದಿಜಾಲಕಮಲಶಿಲೆ ದೇವಸ್ಥಾನದ ಗೋಶಾಲೆಗೆ ನುಗ್ಗಿದ ಕಳ್ಳರ ಬಂಧನ

ಕಮಲಶಿಲೆ ದೇವಸ್ಥಾನದ ಗೋಶಾಲೆಗೆ ನುಗ್ಗಿದ ಕಳ್ಳರ ಬಂಧನ

ಮಂಗಳೂರು: ಕಮಲಶಿಲೆ ದೇವಸ್ಥಾನ ಗೋಶಾಲೆಯ ಬಳಿ ದನ ಕಳವಿಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಶಂಕರ ನಾರಾಯಣ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಬಜ್ಪೆಯ ವಾಜೀದ್ ಜೆ.(೨೬) ಹಾಗೂ ಫೈಝಲ್(೪೦) ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿ ಕೊಳ್ಳಲಾಗಿದೆ. ಇವರು ಜೂ.೧೬ರಂದು ಬೆಳಗಿನ ಜಾವ ಕಮಲಶಿಲೆ ದೇವಸ್ಥಾನ ಗೋಶಾಲೆಯ ಬಳಿ ದನ ಕಳವು ಮಾಡಲು ಬಂದಿರುವುದಾಗಿ ದೇವಸ್ಥಾನದ ಸೆಕ್ಯೂರಿಟಿ ಗಾರ್ಡ್ ರಾಜು ನೀಡಿದ ದೂರಿನಂತೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಶಂಕರನಾರಾಯಣ ಪೊಲೀಸ್ ಠಾಣಾ ಎಸ್ಸೈಗಳಾದ ನಾಸೀರ್ ಹುಸೇನ್ ಮತ್ತು ಶಂಭು ಲಿಂಗಯ್ಯ ಎಂ.ಇ. ಹಾಗೂ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸಿದರು. ಆರೋಪಿಗಳನ್ನು ನ್ಯಾಯಾ ಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ೧೫ ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

RELATED ARTICLES
- Advertisment -
Google search engine

Most Popular