Saturday, April 19, 2025
Google search engine

HomeUncategorizedರಾಷ್ಟ್ರೀಯಇದೇ ತಿಂಗಳ ಜೂನ್ 29ರಿಂದ ಅಮರನಾಥ ಯಾತ್ರೆ ಪ್ರಾರಂಭ

ಇದೇ ತಿಂಗಳ ಜೂನ್ 29ರಿಂದ ಅಮರನಾಥ ಯಾತ್ರೆ ಪ್ರಾರಂಭ

ಶ್ರೀನಗರ: ಇದೇ ತಿಂಗಳ 29 ರಿಂದ ಅಮರನಾಥ ಯಾತ್ರೆ ಪ್ರಾರಂಭವಾಗಲಿದೆ ಎಂದು ಅಮರನಾಥ್‌ ಟ್ರಸ್ಟ್‌ ಬೋರ್ಡ್‌ ತಿಳಿಸಿದೆ. ಜಮ್ಮು ಕಾಶ್ಮೀರದ ಉಪರಾಜ್ಯಪಾಲರಾದ ಮನೋಜ್‌ ಸಿನ್ಹಾ ನಿನ್ನೆ ತಮ ಪ್ರಥಮ ಪೂಜೆ ಸಲ್ಲಿಸುವ ಮೂಲಕ ಅಮರನಾಥ ಯಾತ್ರೆಗೆ ವಿದ್ಯುಕ್ತ ಚಾಲನೆ ನೀಡಿದರು.

ಈ ಬಾರಿ ಯಾತ್ರಾರ್ಥಿಗಳ ಪ್ರಯಾಣ, ಸುರಕ್ಷತೆ ಪ್ರತಿಯೊಂದರ ಬಗ್ಗೆಯೂ ತೀವ್ರವಾಗಿ ಕಾಳಜಿ ವಹಿಸಲಾಗಿದೆ. ಯಾತ್ರೆ ನಡೆಯುವ ಮಾರ್ಗದಲ್ಲಿ ಯಾವುದೇ ದುರ್ಘಟನೆಗಳು ಸಂಭವಿಸದಂತೆ ಬಿಗಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮನೋಜ್‌ ಸಿನ್ಹಾ ಹೇಳಿದರು.

ಜಮ್ಮು ಕಾಶ್ಮೀರ ರಾಜ್ಯದ ಅನಂತನಾಗ್‌ ಜಿಲ್ಲೆಯ ಪಹಲ್‌ಗಾಮ್‌ ಮಾರ್ಗ ಮತ್ತು ಗಂಡೇರ್‌ಬಾಲ್‌ ಜಿಲ್ಲೆಯ ಬಲ್ಟಾಲ್‌ ಮಾರ್ಗದಿಂದ ಅಮರನಾಥ ತಲುಪಬಹುದಾಗಿದೆ. ಹಿಂದೂಗಳ ಪವಿತ್ರ ಪುಣ್ಯಕ್ಷೇತ್ರಗಳ ಪೈಕಿ ಒಂದಾಗಿರುವ ಅಮರನಾಥ ದೇಗುಲವನ್ನು ಸಂದರ್ಶಿಸಲು ಪ್ರತಿ ವರ್ಷ ಲಕ್ಷಾಂತರ ಭಕ್ತಾದಿಗಳು ಕಾಲ್ನಡಿಗೆಯಲ್ಲಿ ಯಾತ್ರೆ ಮಾಡುತ್ತಾರೆ.

RELATED ARTICLES
- Advertisment -
Google search engine

Most Popular