Saturday, April 19, 2025
Google search engine

Homeರಾಜ್ಯಪದ್ಮಶ್ರೀ ಪುರಸ್ಕೃತ ಕೆ.ಎಸ್‌ ರಾಜಣ್ಣ, ಗೌರವ ಡಾಕ್ಟರೇಟ್ ಪಡೆದ ಮೀರಾ ಶಿವಲಿಂಗಯ್ಯರಿಗೆ ನಾಗರಿಕ ಅಭಿನಂದನೆ

ಪದ್ಮಶ್ರೀ ಪುರಸ್ಕೃತ ಕೆ.ಎಸ್‌ ರಾಜಣ್ಣ, ಗೌರವ ಡಾಕ್ಟರೇಟ್ ಪಡೆದ ಮೀರಾ ಶಿವಲಿಂಗಯ್ಯರಿಗೆ ನಾಗರಿಕ ಅಭಿನಂದನೆ

ಮಂಡ್ಯ: ಮಂಡ್ಯ ಜಿಲ್ಲಾ ನಾಗರಿಕ ಅಭಿನಂದನ ಸಮಿತಿ ವತಿಯಿಂದ ಪದ್ಮಶ್ರೀ ಪುರಸ್ಕೃತ ಕೆ.ಎಸ್‌ ರಾಜಣ್ಣ ಹಾಗೂ ಗೌರವ ಡಾಕ್ಟರೇಟ್ ಪಡೆದಿರುವ ಮೀರಾ ಶಿವಲಿಂಗಯ್ಯ ಅವರಿಗೆ ನಾಗರಿಕ ಅಭಿನಂದನ ಸಮಾರಂಭ ನಡೆಯಿತು.

ಮಂಡ್ಯದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಕುಮಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು, ಸೇವೆ ಮಾಡಿರುವವರನ್ನು ಗುರುತಿಸುವುದು ಒಳ್ಳೆಯ ಮನಸ್ಸಿನಿಂದ ಮಾತ್ರ ಸಾಧ್ಯ. ಮಹಾಭಾರತದಲ್ಲಿ ದ್ರೋಣಚಾರ್ಯರು ಒಳ್ಳೆಯದನ್ನು ಗುರುತಿಸುವುದು ಒಳ್ಳೆಯ ಮನಸ್ಸಿನಿಂದ ಮಾತ್ರ ಸಾಧ್ಯ. ಕೆಟ್ಟದ್ದನ್ನು ಕೆಟ್ಟವರು ಗುರುತಿಸುತ್ತಾರೆ ಎಂದು ಹೇಳಿದ್ದಾರೆ. ಹಾಗಾಗಿ ಮಂಡ್ಯ ಜಿಲ್ಲಾ ನಾಗರಿಕ ಅಭಿನಂದನ ಸಮಿತಿ ಒಳ್ಳೆಯ ಮನಸ್ಸಿನಿಂದ ಈ ಕಾರ್ಯಕ್ರಮ ಮಾಡುತ್ತಿರುವುದಕ್ಕೆ ಅಭಿನಂದನೆ‌ ಸಲ್ಲಿಸಿದರು.

ಈ ಇಬ್ಬರು ಸಾಧಕರು ತಮ್ಮ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಇವರಿಬ್ಬರು ಅಪರೂಪದ ಅಪರಂಜಿಗಳಾಗಿದ್ದು, ಮಂಡ್ಯದ ಮಾಣಿಕ್ಯಗಳಾಗಿದ್ದಾರೆ‌. ಪ್ರಸ್ತುತ ಪ್ರಶಸ್ತಿ ಗೌರವ ಸನ್ಮಾನಗಳನ್ನು ಹರಸಿಕೊಂಡು ಹೋಗುವವರೇ ಜಾಸ್ತಿಯಾಗಿದ್ದಾರೆ. ಆದರೆ ಎಲೆ ಮರೆ ಕಾಯಿಯಂತೆ ಕೆಲಸ ಮಾಡಿ ಇಂತಹ ಪ್ರಶಸ್ತಿಗೆ ಭಾಜನರಾಗಿರುವುದು ಅಭಿನಂದನೆ. ರಾಜಣ್ಣ ಅವರು ಮಂಡ್ಯ ಮಾತ್ರವಲ್ಲ ಇಡೀ ಕರ್ನಾಟಕಕ್ಕೆ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ‌‌‌. ರಾಜಣ್ಣ ಅವರು ಇತರರಿಗೆ ಮಾರ್ಗದರ್ಶಕರಾಗಿದ್ದಾರೆ. ಇಂತಹವರು ಹತ್ತಾರು ಮಂದಿ ಹುಟ್ಟಿ ಬರಲಿ ಎಂದು ಆಶಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ‌.ಎಸ್.ರಾಜಣ್ಣ ಮತ್ತು  ಗೌರವರೇಟ್ ಪಡೆದಿರುವ ಡಾ. ಮೀರ ಶಿವಲಿಂಗಯ್ಯ ಅವರಿಗೆ ನಾಗರಿಕ ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES
- Advertisment -
Google search engine

Most Popular