Saturday, April 19, 2025
Google search engine

Homeಆರೋಗ್ಯಈ ಹಣ್ಣು ಸೇವಿಸದ ಮೇಲೆ ನೀರು ಕುಡಿಯಬಾರದಂತೆ…!

ಈ ಹಣ್ಣು ಸೇವಿಸದ ಮೇಲೆ ನೀರು ಕುಡಿಯಬಾರದಂತೆ…!

ಹಣ್ಣುಗಳಲ್ಲಿ ನೀರಿನ ಅಂಶ ಸಮೃದ್ಧವಾಗಿದೆ. ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯೋದು ಅಷ್ಟು ಒಳ್ಳೆಯದಲ್ಲ. ಏಕೆಂದರೆ ಇದು ದೇಹದ ಪಿಎಚ್ ಮಟ್ಟವನ್ನು ದುರ್ಬಲಗೊಳಿಸುತ್ತೆ ಮತ್ತು ಹೊಟ್ಟೆ ಸೆಳೆತಕ್ಕೆ ಕಾರಣವಾಗುವಾಗ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತೆ.

ಪೇರಳೆ

ಜನರು ಪೇರಳೆಯನ್ನು ಸ್ವಲ್ಪ ಉಪ್ಪಿನೊಂದಿಗೆ ಸೇವಿಸುತ್ತಾರೆ, ನೀವು ಸಹ ಹಾಗೆ ಮಾಡಿ ತಿಂದಾಗ, ನಿಮಗೆ ಬಾಯಾರಿಕೆಯಾಗುತ್ತೆ. ಆದರೆ, ನೀವು ನೀರು ಕುಡಿಯಲೇಬಾರದು ಎಂದು ನೆನಪಿನಲ್ಲಿಡಿ, ಏಕೆಂದರೆ ಅದು ಜೀರ್ಣಕ್ರಿಯೆ ಸಮಸ್ಯೆಗಳಿಗೆ ಕಾರಣವಾಗಬಹುದು.

ಬಾಳೆಹಣ್ಣು

ಬಾಳೆಹಣ್ಣನ್ನು ತಿಂದ ನಂತರ ನೀರು ಕುಡಿಯೋದನ್ನು ತಪ್ಪಿಸಬೇಕು, ಏಕೆಂದರೆ ಇದು ಜೀರ್ಣಕ್ರಿಯೆ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಬಾಳೆಹಣ್ಣು ತಿಂದ ಬಳಿಕ ನೀರನ್ನು ತಪ್ಪಿಯೂ ಸೇವಿಸಬೇಡಿ, ಇದನ್ನ ನೆನಪಿನಲ್ಲಿಡಿ.

ಪಿಯರ್

ಪಿಯರ್ ಹಣ್ಣನ್ನು ಹೆಚ್ಚಿನ ಜನ ಇಷ್ಟಪಟ್ಟು ಸೇವಿಸ್ತಾರೆ. ಆದಾರೆ ಪಿಯರ್ ಸೇವಿಸಿದ ನಂತರ ನೀರು ಕುಡಿಯುತ್ತಿದ್ದರೆ ಹುಷಾರ್, ಅದರ ಸೇವನೆಯಿಂದ ಕೆಮ್ಮು ಮತ್ತು ಶೀತಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಸೇಬು

ಸೇಬು ಹಣ್ಣು ಸೇವಿಸೋದು ಆರೋಗ್ಯಕ್ಕೆ ತುಂಬಾನೆ ಉತ್ತಮ ಅನ್ನೋದು ನಿಜಾ, ಆದರೆ ಸೇಬು ಹಣ್ಣಿನ ಸೇವನೆಯ ನಂತರ ನೀರು ಕುಡಿಯೋದನ್ನು ತಪ್ಪಿಸಬೇಕು. ಇದು ಗ್ಯಾಸ್ ಮತ್ತು ಅಜೀರ್ಣದಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು.

ದಾಳಿಂಬೆ

ದಾಳಿಂಬೆ ಹಣ್ಣು ನೀರಿನ ಅಂಶದಿಂದ ಸಮೃದ್ಧವಾಗಿದೆ, ಮತ್ತು ಅದರ ಸೇವನೆಯ ನಂತರ ನೀರನ್ನು ಕುಡಿದರೆ, ಅದು ಅಸಿಡಿಟಿಗೆ ಕಾರಣವಾಗಬಹುದು ಮತ್ತು ವಾಕರಿಕೆ ಉಂಟುಮಾಡುತ್ತೆ. ಈ ಸಮಸ್ಯೆಗಳನ್ನು ತಪ್ಪಿಸಲು ದಾಳಿಂಬೆ ತಿಂದ ಬಳಿಕ ನೀರು ಕುಡಿಯೋದನ್ನು ತಪ್ಪಿಸಿ.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣನ್ನು ಸೇವಿಸಿದ ಕೂಡಲೇ ನೀರನ್ನು ಸೇವಿಸಿದರೆ, ಅದು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತೆ , ಇದು ದೇಹದಲ್ಲಿ ಆಮ್ಲೀಯತೆಗೆ ಕಾರಣವಾಗುತ್ತೆ . ಹೀಗಾಗಿ, ಕಲ್ಲಂಗಡಿ ಸೇವನೆಯ ನಂತರ ನೀರನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ.

ಪಪ್ಪಾಯಿ

ಪಪ್ಪಾಯಿ ನಾರಿನಂಶದಿಂದ ಸಮೃದ್ಧವಾಗಿರುವ ಶಕ್ತಿಯುತ ಹಣ್ಣು ಮತ್ತು ಉತ್ತಮ ಕರುಳಿನ ಚಲನೆಗೆ ಕಾರಣವಾಗುತ್ತೆ. ಆದರೆ, ಈ ಹಣ್ಣಿನ ಸೇವನೆಯ ನಂತರ ನೀರನ್ನು ಕುಡಿದರೆ, ಇದು ಕೆಲವು ಜನರಲ್ಲಿ ಅತಿಸಾರದಂತಹ ಪರಿಸ್ಥಿತಿಗೆ ಕಾರಣವಾಗಬಹುದು.

RELATED ARTICLES
- Advertisment -
Google search engine

Most Popular