ರಾಮನಗರ: ಜಿಲ್ಲೆ ಹಾಗೂ ತಾಲ್ಲೂಕಿನ ಸಾರ್ವಜನಿಕರು ತಮ್ಮ ಹಲವು ಸಮಸ್ಯೆಗಳ ಪರಿಹಾರಕ್ಕೆ ಇಂದಿಲ್ಲೀ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಕಲ್ಪಿಸಿಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯದ ಉಪ ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಅವರು ಜೂ.೨೪ರ ಸೋಮವಾರ ಚನ್ನಪಟ್ಟಣ ತಾಲ್ಲೂಕಿನ ಅಕ್ಕೂರು ಹೊಸಹಳ್ಳಿಯ ಎಚ್.ಕೆ.ವೀರಣ್ಣಗೌಡ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದಜನಸ್ಪಂದನಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾರ್ವಜನಿಕರು ತಮ್ಮ ಅಹವಾಲುಗಳ ಪರಿಹಾರಕ್ಕಾಗಿಬೆಂಗಳೂರಿಗೆ ಬರುವುದನ್ನುತಡೆಗಟ್ಟುವ ನಿಟ್ಟಿನಲ್ಲಿಗ್ರಾಮಮಟ್ಟದಲ್ಲಿಯೇಅವರ ಅಹವಾಲುಗಳನ್ನು ಪರಿಹರಿಸಲುಜನಸ್ಪಂದನಕಾರ್ಯಕ್ರಮವನ್ನುಆಯೋಜಿಸಲಾಗಿದೆ.ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡದೇಇಂತಹಜನಸ್ಪಂದನಕಾರ್ಯಕ್ರಮದಲ್ಲಿತಮ್ಮ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳುವಂತೆ ತಿಳಿಸಿದ ಅವರು, ಸ್ಥಳೀಯ ಆಡಳಿತದ ಅಧಿಕಾರಿಗಳು ಹಾಗೂ ಸಿಬ್ಬಂದಿಜನಸ್ಪಂದನಕಾರ್ಯಕ್ರಮದಕುರಿತು ಕರಪತ್ರಗಳನ್ನು ಮನೆ ಮನೆಗಳಿಗೆ ತಲುಪಿಸಿದ್ದಾರೆ.ಹಾಗಾಗಿ ಈ ಕಾರ್ಯಕ್ರಮದಉದ್ದೇಶ ಪ್ರತಿಯೊಬ್ಬರಿಗೂ ತಿಳಿದಿದೆ ಎಂದರು.
ನಿವೇಶನ, ವಸತಿ ಇಲ್ಲದವರು ಜನಸ್ಪಂದ ನಕಾರ್ಯಕ್ರಮದಲ್ಲಿ ಅರ್ಜಿ ಸಲ್ಲಿಸಿದ್ದಲ್ಲೀ, ಅವುಗಳನ್ನು ಕ್ರೂಢೀಕರಿಸಿ ಪ್ರತಿಯೊಬ್ಬ ಬಡವರಿಗೂ ನಿವೇಶನ ಹಾಗೂ ವಸತಿ ನೀಡುವಯತ್ನ ಮಾಡಲಾಗುವುದು, ಸಮಾಜದ ಎಲ್ಲಾ ಸಮುದಾಯದಜನರೂ ಸಹ ಅಭಿವೃದ್ಧಿಯಾಗಬೇಕೆಂಬುದೇ ಸರ್ಕಾರದ ಆಶಯವಾಗಿದೆಎಂದರು. ರೈತರಿಗೆ ಹಸು, ಹಂದಿ, ಕುರಿಗಳನ್ನು ಖರೀದಿಸಲು ಕಷ್ಟವಾದಲ್ಲಿಜನಸ್ಪಂದನ ಕಾರ್ಯಕ್ರಮದಲ್ಲಿ ಅರ್ಜಿಸಲ್ಲಿ ಸಬಹುದಾಗಿದೆ, ಅವರಿಗೆಅಗತ್ಯಆರ್ಥಿಕ ನೆರವು ನೀಡಲಾಗುದು, ಇ-ಖಾತೆಯ ಸಮಸ್ಯೆ, ಮಾಸಾಶನ, ಪೋಡಿ, ಕಂದಾಯ, ಸರ್ಕಾರದಪಂಚ ಗ್ಯಾರಂಟಿ ಯೋಜನೆಗಳ ಸಮಸ್ಯೆಗಳಿಗೆ ಅಧಿಕಾರಿಗಳು ಪರಿಹಾರನೀಡಲಿದ್ದಾರೆ, ಒಂದು ವೇಳೆ ಪರಿಹಾರ ನೀಡಲುಹಣ ಕೇಳಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದುಎಂದುಎಚ್ಚರಿಕೆ ನೀಡಿದರು.
ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕೃತವಾದ ಅರ್ಜಿಗಳನ್ನು ಅಧಿಕಾರಿಗಳು ತ್ವರಿತವಾಗಿ ವಿಲೇವಾರಿ ಮಾಡಬೇಕು. ಸ್ವೀಕೃತವಾದ ಅರ್ಜಿಗಳಿಗೆ ಕಾನೂನು ಚೌಕಟ್ಟಿನಲ್ಲಿ ಪರಿಹಾರ ನೀಡಲು ಸಾಧ್ಯವಾಗದಿದ್ದರೆ.ಸಮಸ್ಯೆಯಕುರಿತುಸ್ಪಷ್ಟವಾದ ಉತ್ತರ ನೀಡಬೇಕು.ಒಟ್ಟಾರೆಅರ್ಜಿಯನ್ನುತ್ವರಿತವಾಗಿ ವಿಲೇವಾರಿ ಮಾಡುವಂತೆ ನಿರ್ದೇಶನ ನೀಡಿದರು. ವಿಧಾನ ಪರಿಷತ್ ಸದಸ್ಯರಾದಎಸ್. ರವಿ, ಮಾಜಿ ಶಾಸಕರಾದಎಚ್.ಎಂ. ರೇವಣ್ಣ ಮಾತನಾಡಿದರು.
ಜಿಲ್ಲಾಧಿಕಾರಿಡಾ.ಅವಿನಾಶ್ ಮೆನನ್‌ರಾಜೇಂದ್ರನ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಅಧಿಕಾರಿ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಕಾರ್ತಿಕ್‌ರೆಡ್ಡಿ, ಸ್ಥಳೀಯ ಗ್ರಾಮ ಪಂಚಾಯಿತಿಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಇತರೆಗಣ್ಯರು ವೇದಿಕೆಯಲ್ಲಿದ್ದರು.
ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನೂರಾರು ಸಂಖ್ಯೆಯ ಸಾರ್ವಜನಿಕರು ಈ ಸಂದರ್ಭದಲ್ಲಿ ಅಹವಾಲುಗಳನ್ನು ಸಲ್ಲಿಸಿದರು.