ಮಂಡ್ಯ: ಜೆಡಿಎಸ್ ಫ್ಲೆಕ್ಸ್ ನಲ್ಲಿ ಹೆಚ್.ಡಿ ರೇವಣ್ಣ ಫೋಟೊವನ್ನು ನಾಯಕರು ಕೈಬಿಟ್ಟಿದ್ದಾರೆ.
ಸಾಲು ಸಾಲು ಪ್ರಕರಣಗಳ ಆರೋಪ ಎದುರಿಸುತ್ತಿರುವ ಹಿನ್ನಲೆಯಲ್ಲಿ ರೇವಣ್ಣ & ಫ್ಯಾಮಿಲಿ ಪ್ರಕರಣದಿಂದ ಮುಜುಗರಕ್ಕೆ ಒಳಗಾದ್ರ ದಳಪತಿಗಳು ಎಂಬ ಅನುಮಾನ ವ್ಯಕ್ತವಾಗಿದೆ.
ಹೆಚ್ ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾದ ಬಳಿಕ ಸ್ವಾಗತಕೋರಲು ಮಂಡ್ಯ ನಗರದಲ್ಲಿ ಅಳವಡಿಸಿರುವ ಬೃಹತ್ ಜೆಡಿಎಸ್ ಫ್ಲೆಕ್ಸ್ ಗಳಲ್ಲಿ ಮುಜುಗರದಿಂದ ಪಾರಾಗಲು ಜೆಡಿಎಸ್ ನಾಯಕರು ಹೆಚ್ ಡಿ ರೇವಣ್ಣ ಫೋಟೊ ಹಾಕದೇ ಕೈಬಿಟ್ಟಿದ್ದಾರೆ.
ಫ್ಲೆಕ್ಸ್ ಗಳಲ್ಲಿ ಜೆಡಿಎಸ್-ಬಿಜೆಪಿ ನಾಯಕರ ಫೋಟೊ ಮಾತ್ರ ಬಳಕೆ ಮಾಡಲಾಗಿದೆ. ಮಾಜಿ ಸಂಸದೆ ಸುಮಲತಾ, ಹೆಚ್.ವಿಶ್ವನಾಥ್ ಫೋಟೊಗೂ ಸ್ಥಾನ ಕೊಟ್ಟಿದ್ದಾರೆ.
ಮಾಜಿ ಸಚಿವ ಹೆಚ್ ಡಿ ರೇವಣ್ಣ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ.