Monday, April 21, 2025
Google search engine

Homeಅಪರಾಧಉಮಾಪತಿ ಗೌಡಗೆ ಬೆದರಿಕೆ ಹಾಕಿದ್ದ ದರ್ಶನ್ ಅಭಿಮಾನಿ: ಕಂಬಿ ಹಿಂದೆ ನಿಂತು ಕ್ಷೆಮೆಯಾಚನೆ!

ಉಮಾಪತಿ ಗೌಡಗೆ ಬೆದರಿಕೆ ಹಾಕಿದ್ದ ದರ್ಶನ್ ಅಭಿಮಾನಿ: ಕಂಬಿ ಹಿಂದೆ ನಿಂತು ಕ್ಷೆಮೆಯಾಚನೆ!

ಬೆಂಗಳೂರು: ನಟ ದರ್ಶನ್ ಹೇಯ ಕೃತ್ಯದ ವಿರುದ್ಧ ಮಾತನಾಡುತ್ತಿರುವವರ ವಿರುದ್ಧ ಅವರ ಅಭಿಮಾನಿಗಳು ಮಾನಹಾನಿ ಹೇಳಿಕೆ ಮತ್ತು ದಮ್ಕಿ ಹಾಕುತ್ತಿರುವುದನ್ನು ಸಮಾಜಿಕ ಜಾಲತಾಣದಲ್ಲಿ ಕಾಣುತ್ತಿದ್ದೇವೆ. ಈಗ ಅಂತಹದ್ದೆ ಕೆಲಸ ಮಾಡಿ ದರ್ಶನ್ ಅಭಿಮಾನಿಯೊಬ್ಬ ಕಂಬಿ ಹಿಂದೆ ನಿಂತು ಕ್ಷಮಿಸಿ ಕ್ಷಮಿಸಿ ಎಂದು ಅಪಹಪಿಸುತ್ತಿದ್ದಾನೆ.

ನಿರ್ಮಾಪಕ ಉಮಾಪತಿ ಗೌಡಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ದರ್ಶನ್ ಅಭಿಮಾನಿ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ಚೇತನ್ ಬಂಧಿತ ವ್ಯಕ್ತಿಯಾಗಿದ್ದು, ಐಪಿಸಿ ಸೆಕ್ಷನ್ ೫೦೪, ೫೦೬ ಅಡಿ ಎಫ್‌ಐಆರ್ ದಾಖಲಿಸಲಾಗಿದೆ. ಇನ್ನು ಜಾಮೀನಿನ ಮೇಲೆ ದರ್ಶನ್ ಅಭಿಮಾನಿ ಚೇತನ್‌ನನ್ನ ರಿಲೀಸ್ ಮಾಡಲಾಗಿದೆ.

ಸದ್ಯ ಪೊಲೀಸರ ಸಮ್ಮುಖದಲ್ಲಿ ವಿಡಿಯೋದಲ್ಲಿ ಮಾತನಾಡಿರುವ ಚೇತನ್, ಸರ್ ನನ್ನ ಹೆಸರು ಚೇತನ್, ನಟ ದರ್ಶನ್ ಅವರ ಅಭಿಮಾನಿ ಆಗಿದ್ದೇನೆ. ಆವತ್ತು ಅನ್ನಪೂರ್ಣೇಶ್ವರಿ ದೇವಾಸ್ಥಾನ ಹತ್ತಿರ ಹೋಗಿದ್ದೆ. ಈ ವೇಳೆ ಉಮಾಪತಿ ಶ್ರೀನಿವಾಸ್ ಹಾಗೂ ಪ್ರಥಮ್ ಅವರ ಬಗ್ಗೆ ತಪ್ಪಾಗಿ ಮಾತನಾಡಿದ್ದೇನೆ. ಕಾನೂನು ಪ್ರಕಾರ ಏನಿದೆ ಅದಕ್ಕೆ ನಾನು ತಲೆ ಬಾಗುತ್ತೇನೆ. ನನ್ನಿಂದ ಏನೇ ತಪ್ಪಾಗಿದ್ದರೂ ಕ್ಷಮಿಸಿ ಎಂದು ಕೇಳಿಕೊಂಡಿದ್ದಾನೆ.

RELATED ARTICLES
- Advertisment -
Google search engine

Most Popular