Saturday, April 19, 2025
Google search engine

Homeಅಪರಾಧಬಾಗಲಕೋಟೆಯಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ಇಬ್ಬರ ಸಾವು, ಹಲವರಿಗೆ ಗಾಯ

ಬಾಗಲಕೋಟೆಯಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ಇಬ್ಬರ ಸಾವು, ಹಲವರಿಗೆ ಗಾಯ

ಬಾಗಲಕೋಟೆ : ವಿದ್ಯುತ್ ತಂತಿ ತುಂಡಾಗಿ ಬಿದ್ದು ಶೆಡ್ ನಲ್ಲಿದ್ದ ಇಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ದಾಸರ ಮಡ್ಡಿಯಲ್ಲಿ ಸಂಭವಿಸಿದೆ.

ಸಂತೋಷ ಸುಣಗಾರ (೨೨) ಶೋಭಾ ಹುಲ್ಲಣ್ಣವರ (೩೮) ಸಾವನಪ್ಪಿದ್ದಾರೆ. ಈ ವೇಳೆ ಶ್ರೀಕಾಂತ್, ಮಹೇಶ, ಕಸ್ತೂರಿ ಹಾಗೂ ಸಂಗೀತ ಕಾಮಶೆಟ್ಟಿಗೆ ಗಂಭಿರವಾದ ಗಾಯಗಳಾಗಿದ್ದು, ಅವರನ್ನು ತಕ್ಷಣ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಗಡಿನ ಶೆಡ್ ಮೇಲೆ ಹೈ ಟೆನ್ಶನ್ ತಂತಿ ತುಂಡಾಗಿ ಬಿದ್ದು ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಜಾತ್ರೆ ಸಂಭ್ರಮದ ಮಧ್ಯ ವಿದ್ಯುತ್ ಅಂತ ತುಂಡಾಗಿ ಬಿದ್ದು ಈ ದುರಂತ ಸಂಭವಿಸಿದೆ. ಮೃತ ಸಂತೋಷ್ ಜೊತೆ ಸಂಗೀತ ಕಾಮಶೆಟ್ಟಿ ನಿಶ್ಚಿತಾರ್ಥವಾಗಿತ್ತು. ಜೂನ್ ೨೮ ರಂದು ಸಂತೋಷ್ ಸಂಗೀತ ಹಸೆಮಣೆ ಎರಲಿದ್ದರು.ಆದರೆ ಇದೀಗ ಸಂತೋಷ್ ಮೃತಪಟ್ಟಿದ್ದರಿಂದ ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ವರ್ಷದಿಂದ ವಿದ್ಯುತ್ ತಂತಿ ನೇತಾಡುತ್ತಿದ್ದರು ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ. ವಿಷಯ ತಿಳಿಸಿದರು ಲೈನ್ ದುರಸ್ತಿ ಮಾಡಿಲ್ಲ ಎಂದು ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ ಖಂಡಿಸಿ ಇದೀಗ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

RELATED ARTICLES
- Advertisment -
Google search engine

Most Popular