Monday, April 21, 2025
Google search engine

Homeರಾಜ್ಯಗೋಡೆ ಕುಸಿದು ನಾಲ್ವರ ಸಾವು ಪ್ರಕರಣ: ಸ್ಥಳಕ್ಕೆ ಯು.ಟಿ. ಖಾದರ್ ಭೇಟಿ

ಗೋಡೆ ಕುಸಿದು ನಾಲ್ವರ ಸಾವು ಪ್ರಕರಣ: ಸ್ಥಳಕ್ಕೆ ಯು.ಟಿ. ಖಾದರ್ ಭೇಟಿ

ಮಂಗಳೂರು: ಕುತ್ತಾರಿನ ಮದನಿ ನಗರದಲ್ಲಿ ಇಂದು ಬುಧವಾರ ಮುಂಜಾನೆ ಒಂದೇ ಕುಟುಂಬದ ನಾಲ್ವರು ಗೋಡೆ ಕುಸಿದು ಸಾವನ್ನಪ್ಪಿದ್ದು, ಸ್ಪೀಕರ್ ಯು.ಟಿ. ಖಾದರ್ ಹಾಗೂ ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅಧಿಕಾರಿಗಳೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಸ್ಪೀಕರ್ ಯು.ಟಿ. ಖಾದರ್, ಸರ್ಕಾರದಿಂದ ಹೆಚ್ಚಿನ ಪರಿಹಾರಕ್ಕೆ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದ್ದಾರೆ. ಇಂಥಹ ದುರ್ಘಟನೆಗಳಲ್ಲಿ ಪರಿಹಾರ ನೀಡುವುದಕ್ಕೆ ಸರ್ಕಾರದ ಮಾನದಂಡ ಮತ್ತು ನಿಯಮಗಳಿವೆ. ಮನೆ ಕುಸಿತಗೊಂಡಿದೆ. ಅದಕ್ಕೂ ಸರ್ಕಾರದ ಪರಿಹಾರವಿದೆ. ಆದರೆ, ಈ ದುರಂತವನ್ನು ವಿಶೇಷವಾಗಿ ಪರಿಗಣಿಸಿ ಸರ್ಕಾರದ ಕಡೆಯಿಂದ ಹೆಚ್ಚಿನ ಸಹಾಯ ಮಾಡುವುದಕ್ಕೆ ಪ್ರಯತ್ನಿಸಲಾಗುವುದು. ಪರಿಹಾರ ಸೇರಿ ಎಲ್ಲ ವಿಚಾರಗಳ ಬಗ್ಗೆ ಜಿಲ್ಲಾಧಿಕಾರಿ ಜತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

RELATED ARTICLES
- Advertisment -
Google search engine

Most Popular