Wednesday, April 16, 2025
Google search engine

Homeರಾಜ್ಯಸುದ್ದಿಜಾಲಜನರ ಸೇವೆ ಮಾಡಲು ಸರ್ಕಾರ ಸದಾ ಸಿದ್ದ: ಡಿಸಿಎಂ ಡಿ.ಕೆ. ಶಿವಕುಮಾರ್

ಜನರ ಸೇವೆ ಮಾಡಲು ಸರ್ಕಾರ ಸದಾ ಸಿದ್ದ: ಡಿಸಿಎಂ ಡಿ.ಕೆ. ಶಿವಕುಮಾರ್

ರಾಮನಗರ: ಸರ್ಕಾರದ ಅಧಿಕಾರಿಗಳು, ಸಿಬ್ಬಂದಿಗಳು ಸಾರ್ವಜನಿಕರ ಸೇವೆ ಮಾಡುವರು, ಈ ಸೇವೆ ಮಾಡಲೇಂದೇಅವರು ಈ ಕ್ಷೇತ್ರವನ್ನುಆಯ್ದುಕೊಂಡಿದ್ದಾರೆ, ಆ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುವಂತೆರಾಜ್ಯದ ಉಪ ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವಡಿ.ಕೆ. ಶಿವಕುಮಾರ್‌ಅವರು ಕಿವಿ ಮಾತು ಹೇಳಿದರು.

ಅವರು ಜೂ.೨೬ರ ಬುಧವಾರ ಚನ್ನಪಟ್ಟಣತಾಲ್ಲೂಕಿನ ಬೇವೂರು ಗ್ರಾಮದಶ್ರೀ ಸಿದ್ದರಾಮೇಶ್ವರ ವಿದ್ಯಾ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರಿ ಕಚೇರಿಗಳು ದೇವಾಲಗಳಿದ್ದಂತೆ.ಅಧಿಕಾರಿಗಳು ನೊಂದಜನರಿಗೆ ಸಹಾಯ ಮಾಡಬೇಕು.ಅವರ ಸಮಸ್ಯೆ, ಅಹವಾಲುಗಳಿಗೆ ಸ್ಪಂದಿಸಬೇಕು, ಜನ ಪ್ರತಿನಿಧಿಯಾಗಿಆಯ್ಕೆಯಾಗಿರುವ ನಾನು ಕೂಡಒಬ್ಬ ಸರ್ಕಾರಿ ನೌಕರನಿದ್ದಂತೆ, ಅಂತೆಯೇ ಜನರಿಂದ ಆಯ್ಕೆಯಾದ ಪ್ರತಿನಿಧಿಗಳೆಲ್ಲರೂ ಸರ್ಕಾರಿ ನೌಕರರೇ. ಜನರ ಸೇವೆ ಮಾಡಲು ಅವರು ಈ ಆಯ್ಕೆ ಮಾಡಿದ್ದಾರೆ. ಅವರ ಕುಂದುಕೊರತೆಗಳನ್ನು ನಿವಾರಿಸಲು ಈ ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಾಲ, ಸೌಲಭ್ಯ, ನಿವೇಶನ, ವಸತಿ, ರಸ್ತೆ, ಸ್ಮಶಾನ, ಅಂತರ್ಜಲ ಹೆಚ್ಚಿಸುವ ಬೇಡಿಕೆ, ಪಿಂಚಣಿ, ಬರ ಪರಿಹಾರಕ್ಕಾಗಿ, ಪೋಡಿ, ಖಾತೆ ಬದಲಾವಣೆಕುರಿತಾಗಿ ಇದೂವರೆಗೂ ಸುಮಾರು ಮೂರು ಸಾವಿರಜನರುಅರ್ಜಿ ಸಲ್ಲಿಸಿದ್ದಾರೆ.ಇದನ್ನು ಅಧಿಕಾರಿಗಳು ಪರಿಶೀಲಿಸಿ ಅವರ ಸಮಸ್ಯೆಗೆ ಪರಿಹಾರ ನೀಡಬೇಕು.ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರುಕುಂದುಕೊರತೆ ಪರಿಹರಿಸಲು ಲಂಚ ಪಡೆಯುತ್ತಿರುವ ಕುರಿತುಕರೆ ಬಂದರೆ ಅವರನ್ನು ಕೂಡಲೇ ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೈತರಿಗೆಯಾವುದೇ ವೇತನ, ಪಿಂಚಣಿ ಸೌಲಭ್ಯವಿಲ್ಲ, ಅವರಿಗೆ ನಿವೃತ್ತಿಇರುವುದಿಲ್ಲ. ಅವರುತಮ್ಮ ಸಮಸ್ಯೆಯ ಪರಿಹಾರಕ್ಕಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ರೈತರು ಈ ಕಾರ್ಯಕ್ರಮಕ್ಕೆ ಆಗಮಿಸಲು ಯಾವುದೇ ಸಂಕೋಚ ಬೇಡಅಥವಾತಾವೇಖುದ್ದುತಾಲ್ಲೂಕುಕಚೇರಿಗೆ ತೆರಳಿ ತಮ್ಮ ಸಮಸ್ಯೆಯಕುರಿತುಅರ್ಜಿ ನೀಡಬಹುದಾಗಿದೆ, ಅಧಿಕಾರಿಗಳು ಈ ಅರ್ಜಿಗಳನ್ನು ಪರಿಶೀಲಿಸಿ ತಮ್ಮ ಸಮಸ್ಯೆಗೆ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ನೀಡುತ್ತಾರೆಎಂದರು.

ಜನರಿಗೆ ಹಲವು ನಿಗಮಗಳಿಂದ ಒಂದು ಲಕ್ಷ ರೂ.ಗಳ ವರೆಗೆ ಸಾಲ ಸೌಲಭ್ಯ ನೀಡುವಅವಕಾಶವಿದೆ. ಸಬ್ಸಿಡಿರೂಪದಲ್ಲಿ ಸಾಲ ನೀಡಲುಅವಕಾಶವಿದೆ.ಜನರಅಭಿವೃದ್ಧಿಗಾಗಿ ಸರ್ಕಾರ ಸದಾ ಬದ್ಧ. ಜನರು ಈ ಅವಕಾಶವನ್ನು ಸದುಪಯೋಗಪಡೆದುಕೊಳ್ಳಬೇಕು ಎಂದು ಹೇಳಿದರು. ನಿವೇಶನ ಹಂಚಿಕೆ ಮಾಡಲು ಸ್ಥಳ ಗುರುತಿಸಲಾಗುತ್ತಿದೆ.ಸರ್ಕಾರಿ ಸ್ಥಳ ಸಿಗದಿದ್ದರೆ ಖಾಸಗಿಯಾಗಿಖರೀದಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ.ವಿದ್ಯಾವಂತಯುವಕರಿದ್ದಾರೆ, ಅಂತರ್ಜಲವಿದೆ, ಹಲವು ಬೆಳೆ ಬೆಳೆಯುತ್ತಿದ್ದಾರೆ. ಹೈನುಗಾರಿಕೆಯಿದೆ ಇದನ್ನೆಲ್ಲ ಉಪಯೋಗಿಸಿಕೊಂಡು ಜನರುಅಭಿವೃದ್ಧಿಯಾಗಬೇಕು. ಸರ್ಕಾರದ ವತಿಯಿಂದ ಪಂಚ ಗ್ಯಾರಂಟಿಯೋಜನೆಯಡಿ ಹಲವು ಸೌಲಭ್ಯ ನೀಡಲಾಗುತ್ತಿದೆ.ತಮ್ಮ ಮನೆ ಬಾಗಿಲಿಗೆ ಸರ್ಕಾರದ ಬಂದಿದೆ ಎಂದರು.

ಅರ್ಜಿ ಪರಿಶೀಲಿಸಿ ಕಾನೂನು ಬದ್ಧವಾಗಿ ಪರಿಹರಿಸಲಾಗುವುದು.ಜಿಲ್ಲೆಯಲ್ಲಿ ಸಿಎಸ್‌ಆರ್ ಮಾದರಿಯಲ್ಲಿ ಹಲವು ಶಾಲೆಗಳ ನಿರ್ಮಾಣವಾಗಿದೆ.ಖಾಸಗಿಯವರ ನೆರವಿನಿಂದಲೂ ಈ ಶಾಲೆಗಳ ನಿರ್ಮಾಣಕ್ಕೆ ಸಹಕಾರವಿದೆ.ಇದೊಂದುಐತಿಹಾಸಿಕ ಕೆಲಸವಾಗಿದೆ. ೧೫೦-೨೦೦ ಕೋಟಿ ರೂ.ಗಳ ವಿಶೇಷ ಅನುದಾನದಿಂದ ವಿವಿಧರೀತಿಯಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದುಎಂದು ತಿಳಿಸಿದರು. ರಾಜ್ಯ ಸರ್ಕಾರದಕೊಡುಗೆ ಏನು ಎಂಬುದು ಈಗಾಗಲೇ ಜನರಿಗೆ ತಿಳಿದಿದೆ. ಜನರ ಸೇವೆ ಮಾಡಲುಜನಸ್ಪಂದನಕಾರ್ಯಕ್ರಮವನ್ನುಆಯೋಜಿಸಲಾಗಿದೆ. ಜನರ ಆರ್ಶೀವಾದ ಇರಲಿ, ಅವರ ಸೇವೆಗೆ ಸರ್ಕಾರ ಸದಾ ಬದ್ಧವಾಗಿರುತ್ತದೆ. ಅರ್ಜಿ ಸಲ್ಲಿಸುವವರುಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿಯನ್ನು ಪಡೆದುಕೊಳ್ಳಬೇಕು.ಜನರಿಂದ ಅಹವಾಲುಗಳನ್ನು ಸ್ವೀಕರಿಸಿ ಸಾಧ್ಯವಾದ ಸ್ಥಳದಲ್ಲೇ ಬಗೆಹರಿಸುವಯತ್ನ ಮಾಡಲಾಗುವುದುಎಂದರು.

ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ ಅವರು ಮಾತನಾಡಿ, ಜನಸ್ಪಂದನಕಾರ್ಯಕ್ರಮ ವಿಶಿಷ ಕಾರ್ಯಕ್ರಮವಾಗಿದೆ. ಅಪರೂಪದಲ್ಲಿಅಪರೂಪಕಾರ್ಯಕ್ರವಿದು.ಜನರಲ್ಲಿ ಹಲವಾರು ಸಮಸ್ಯೆಗಳಿವೆ ಅವುಗಳನ್ನು ಇಂತಹಜನಸ್ಪಂದನಕಾರ್ಯಕ್ರಮದಲ್ಲಿ ಪರಿಹರಿಸಲಾಗುವುದು. ಜನರ ಸಮಸ್ಯೆಗಳನ್ನು ಬಗೆಹರಿಸುವ ಹೊಣೆ ನಮ್ಮದುಎಂದರು. ಹೋಬಳಿ ಮಟ್ಟದಲ್ಲಿಯೇಜನರ ಸಮಸ್ಯೆಗಳನ್ನು ಸ್ವೀಕರಿಸಿ, ಬಗೆಹರಿಸಲಾಗುವುದು. ಜನರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಉಪಮುಖ್ಯಮಂತ್ರಿಗಳು ಜನಸ್ಪಂದನಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಸರ್ಕಾರ ನುಡಿದಂತೆ ನಡೆದಿದೆಎಂದು ತಿಳಿಸಿದರು.

ಸರ್ಕಾರ ಅಸ್ವಿತ್ವಕ್ಕೆ ಬಂದಕೂಡಲೇ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆತಂದಿದೆ.ಜನರು ಪಂಚ ಗ್ಯಾರಂಟಿಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ನಿಮ್ಮ ಮನೆ ಬಾಗಿಲಿಗೆ ಬಂದು ಸಮಸ್ಯೆ ಬಗೆಹರಿಸುತ್ತಿದೆ.ಸಾರ್ವಜನಿಕರು ಈ ಕಾರ್ಯಕ್ಕೆ ಅಹವಾಲುಗಳನ್ನು ಸಲ್ಲಿಸಿ ತಮ್ಮ ಸಮಸ್ಯೆಗೆ ಸ್ಥಳದಲ್ಲಿಯೇ ಪರಿಹಾರ ಪಡೆದುಕೊಳ್ಳುವಂತೆ ತಿಳಿಸಿದರು.

ವಿಧಾನ ಪರಿಷ ತ್ ಸದಸ್ಯ ಎಸ್. ರವಿ, ರಾಮೋಜಿಗೌಡ, ಮಾಜಿ ಶಾಸಕ ಎಚ್.ಎಂ. ರೇವಣ್ಣ, ಮಾಜಿ ಶಾಸಕರಾದಅಶ್ವತ್ಥ, ಜಿಲ್ಲಾಧಿಕಾರಿಡಾ.ಅವಿನಾಶ್ ಮೆನನ್‌ ರಾಜೇಂದ್ರನ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಕಾರ್ತಿಕ್‌ರೆಡ್ಡಿ, ಬೇವೂರುಗ್ರಾಮ ಪಂಚಾಯತ್‌ ಅಧ್ಯಕ್ಷ ಮಂಗಳಮ್ಮ, ನಾಗವಾರಗ್ರಾಮ ಪಂಚಾಯತ್‌ ಅಧ್ಯಕ್ಷ ಹರೀಶ್‌ಕುಮಾರ್ ಹಾಗೂ ಇತರೆ ಗಣ್ಯರು ವೇದಿಕೆಯಲ್ಲಿದ್ದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಸ್ವಾಗತಿಸಿದರು.

ಅಪಾರ ಸಾರ್ವಜನಿಕರು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ನೂರಾರು ಅಹವಾಲುಗಳು ಸಲ್ಲಿಕೆಯಾದವು.ಅಲ್ಲಿ ಅಹವಾಲುಗಳನ್ನು ಸ್ವೀಕರಿಸುವುದು ಹಾಗೂ ಅಹವಾಲುಗಳನ್ನು ಸಿದ್ದಪಡಿಸಿಕೊಳ್ಳಲು ನೆರವು ನೀಡಲಾಗುತ್ತಿತ್ತು.

RELATED ARTICLES
- Advertisment -
Google search engine

Most Popular