Saturday, April 19, 2025
Google search engine

Homeರಾಜ್ಯನೆಲ, ಜಲ, ಭಾಷೆಯಲ್ಲಿ ರಾಜಕೀಯ ಮಾಡಬಾರದು : ಮುಖ್ಯಮಂತ್ರಿ ಸಿದ್ದರಾಮಯ್ಯ

ನೆಲ, ಜಲ, ಭಾಷೆಯಲ್ಲಿ ರಾಜಕೀಯ ಮಾಡಬಾರದು : ಮುಖ್ಯಮಂತ್ರಿ ಸಿದ್ದರಾಮಯ್ಯ

ನವದೆಹಲಿ : ರಾಜ್ಯಕ್ಕೆ ಸಿಗಬೇಕಾದ ಅನುದಾನದ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ೩ ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಇಂದು ಶುಕ್ರವಾರ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ರಾಜ್ಯದ ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ತಿಳಿಸಿದರು.

ರಾಜ್ಯಕ್ಕೆ ಬರಬೇಕಿರುವ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ರಾಜ್ಯದಿಂದ ಆಯ್ಕೆಯಾದ ಸಂಸದರ ಜೊತೆ ಚರ್ಚಿಸಿದ್ದೇವೆ. ಕೇಂದ್ರ ಸಚಿವರನ್ನು ಭೇಟಿ ಮಾಡಿ ನಾವು ಚರ್ಚೆ ಮಾಡಿದ್ದೇವೆ. ಪಕ್ಷಭೇದ ಮರೆತು ಕರ್ನಾಟಕದ ಒಳಿತಿಗಾಗಿ ನಿಲ್ಲುವ ಪ್ರಯತ್ನ ಮಾಡುತ್ತಿದ್ದೇವೆ.ರಾಜ್ಯದ ಯೋಜನೆಗಳನ್ನು ಸಂಸತ್ ಸದಸ್ಯರ ಗಮನಕ್ಕೆ ತರಲಾಗಿದೆ ಎಂದರು.

ಕೇಂದ್ರದ ಮೇಲೆ ಒತ್ತಡ ಹಾಕಿ ಮಂಜೂರು ಮಾಡಿಸಲು ಹೇಳಿದ್ದೇವೆ. ರಾಜ್ಯದ ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಕೀಯ ಮಾಡಬಾರದು. ಪಕ್ಷಭೇದ ಮರೆತು ಪ್ರಯತ್ನ ಮಾಡುತ್ತಿದ್ದೇವೆ. ಕೇಂದ್ರ ಮಂತ್ರಿಗಳು ಉತ್ತರದ ರೂಪದಲ್ಲಿ ಪತ್ರ ಕೊಟ್ಟಿದ್ದಾರೆ. ಬಿಜೆಪಿ ತನ್ನ ನಿಲುವುಗಳನ್ನ ಪ್ರಸ್ತಾಪಿಸಿದ್ದಾರೆ. ಅದರಲ್ಲಿ ಅನೇಕ ಸುಳ್ಳುಗಳಿವೆ ಎಂದರು.

ಉದಾಹರಣೆಗೆ ಮಹದಾಯಿ ಕುಡಿಯುವ ನೀರಿನ ಯೋಜನೆ.. ಮಹದಾಯಿ ಯೋಜನೆ ಬಗ್ಗೆ ಕೋರ್ಟ್ ನಲ್ಲಿ ಕೇಸ್ ಇದೆ ಅಂದಿದ್ದಾರೆ. ಗೆಜೆಟ್ ನೋಟಿಫಿಕೇಶನ್ ಆಗಿದೆ. ಅದಕ್ಕೆ ಪರಿಸರ ಅನುಮತಿ ಬೇಕಿದೆ ಅಷ್ಟೇ. ಮಹದಾಯಿ ಯೋಜನೆ ಈಗ ಕೇಂದ್ರ ಸರ್ಕಾರದ ಮುಂದೆ ಇದೆ. ಕೋರ್ಟ್ ಅಲ್ಲಿ ಕೇಸ್ ಇದೆ ಅಂತ ನೆಪ ಹೇಳಿದ್ದಾರೆ.ಪರಿಸರ ಅನುಮತಿ ಕೊಡಬೇಕೆಂದು ಕೇಂದ್ರದ ಬಳಿ ಕೇಳಿದ್ದೇವೆ ಎಂದರು. ೫೩೦೦ ಕೋಟಿ ರೂಪಾಯಿ ಕೊಡುವುದಾಗಿ ನಿರ್ಮಲ ಸೀತಾರಾಮನ್ ಒಪ್ಪಿಕೊಂಡಿದ್ದಾರೆ ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡುವ ಒತ್ತಾಯವಿದೆ ಇದಕ್ಕೆ ಸಂಸದ ಬಸವರಾಜ್ ಬೊಮ್ಮಾಯಿ ಕೂಡ ಬೆಂಬಲಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

೨೦೧೮ರಿಂದಲೂ ಮೇಕೆದಾಟು ಯೋಜನೆ ಪೆಂಡಿಂಗ್ ಇದೆ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗು ಅನುಕೂಲವಾಗಲಿದೆ. ತಮಿಳುನಾಡಿನವರು ನ್ಯಾಯಾಲಯದಲ್ಲಿ ಕೇಸ್ ಹಾಕಿದ್ದಾರೆ. ಆದರೆ ಯೋಜನೆಗೆ ಯಾವುದೇ ತಡೆ ನೀಡಿಲ್ಲ. ಅದನ್ನು ಕೂಡ ನಾವು ಕೇಂದ್ರ ಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಹೆಚ್ಚುವರಿ ನೀರು ಸಂಗ್ರಹಿಸಲು ಮೇಕೆದಾಟು ಅವಶ್ಯವಾಗಿದೆ. ೨೦೨೨ ರಲ್ಲಿ ೪೯೦ ಟಿಎಂಸಿ ಹೆಚ್ಚುವರಿ ನೀರು ಹರಿದುಹೋಗಿದೆ. ಹೆಚ್ಚುವರಿ ನೀರು ಬಳಸಿಕೊಳ್ಳಲು ಎರಡು ರಾಜ್ಯಗಳಿಗೆ ಸಹಾಯಕವಾಗಲಿದೆ. ಕೃಷ್ಣ ನೀರು ಹಂಚಿಕೆ ವಿಚಾರವಾಗಿ ಗೆಜೆಟ್ ನೋಟಿಫಿಕೇಶನ್ ಆಗಿಲ್ಲ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular