Sunday, April 20, 2025
Google search engine

Homeಸ್ಥಳೀಯನಿರಂತರ ಅಭ್ಯಾಸ, ಶ್ರಮವಿದ್ದರೆ ಗೆಲುವು ನಿಶ್ಚಿತ

ನಿರಂತರ ಅಭ್ಯಾಸ, ಶ್ರಮವಿದ್ದರೆ ಗೆಲುವು ನಿಶ್ಚಿತ


ಮೈಸೂರು: ಸಕಾರಾತ್ಮಕ ಮನೋಭಾವನೆ ಇಟ್ಟುಕೊಂಡು ನಿರಂತರ ಶ್ರಮದಿಂದ ಅಭಸಿಸಿದರೆ ಗೆಲುವು ನಿಶ್ಚಿತ ಎಂದು ಪ್ರಸಕ್ತ ಸಾಲಿನ ಯುಪಿಎಸ್‌ಸಿ ಪರೀಕ್ಷೆ ಟಾಪರ್ ಎಂ.ಪೂಜಾ ಅಭಿಪ್ರಾಯಪಟ್ಟರು.
ನಗರದಲ್ಲಿ eನಬುತ್ತಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಸ್ಪರ್ಧಾರ್ಥಿಗಳು ತಮ್ಮಲ್ಲಿರುವ ನಕಾರಾತ್ಮಕ ಗುಣಗಳನ್ನು ತೊಡೆದು ಹಾಕಿ ಪರೀಕ್ಷೆಗಳಿಗೆ ಬೇಕಾದ ಅಗತ್ಯ ಪಠ್ಯ ಕ್ರಮಗಳನ್ನು ಅಭ್ಯಸಿಸಿ ಮತ್ತೆ ಮತ್ತೆ ಮನನ ಮಾಡಿಕೊಳ್ಳಬೇಕು. ಎಸ್‌ಡಿಎ ಮತ್ತು ಪಿಸಿ ಪರೀಕ್ಷೆಗಳಿಂದ ಹಿಡಿದು ಐಎಎಸ್, ಐಪಿಎಸ್ ಪರೀಕ್ಷೆಗಳವರೆಗೆ ಒಂದೇ ರೀತಿಯ ಪಠ್ಯಕ್ರಮಗಳಿರುತ್ತವೆ. ಸ್ಪರ್ಧಾರ್ಥಿಗಳು ತಾವು ಏನು ಓದಬೇಕು ಮತ್ತು ಓದಬಾರದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಅಭಸಿಸಬೇಕು ಎಂದು ಸಲಹೆ ನೀಡಿದರು.
ಪರೀಕ್ಷೆಗಳಲ್ಲಿ ಬಡವ, ಶ್ರೀಮಂತ ಮೇಲು, ಕೀಳು ಎಂಬ ಬೇಧ ಭಾವವಿರುವುದಿಲ್ಲ. ಸಂಪೂರ್ಣ ಮಾಹಿತಿಯ ಅಧಯನವೇ ನಿಮ್ಮನ್ನು ಗೆಲುವಿನತ್ತ ಕೊಂಡೊಯ್ಯುತ್ತದೆ ಎಂದರು.
ಈ ವೇಳೆ ಸ್ಪರ್ಧಾಕಾಂಕ್ಷಿಗಳೊದಿಗೆ ಸಂವಾದ ನಡೆಸಿ, ಪರೀಕ್ಷೆ ಬಗ್ಗೆ ಅವರಲ್ಲಿದ್ದ ಹಲವಾರು ಗೊಂದಲಗಳಗೆ ಪರಿಹಾರ ಸೂಚಿಸಿ ಮನವರಿಕೆ ಮಾಡಿಕೊಟ್ಟರು.
ಶಾಸಕ ಶ್ರೀವತ್ಸ ಮಾತನಾಡಿ, ಯಾವುದೇ ಸ್ಪರ್ಧಾತ್ಮಕ ಹುದ್ದೆಗೂ ಶ್ರಮವಷ್ಠೆ ಮುಖ್ಯವಾಗಿರುತ್ತದೆ. ಬಡತನ ಎದೆಯ ಬೆಂಕಿಗೆ ತುಪ್ಪ ಸುರಿದರೇನಂತೆ ಎಂಬಂತೆ ನೀವು ಕಷ್ಟ ಪಟ್ಟರೆ ಸುಖ ನಿಮ್ಮದಾಗುತ್ತದೆ. ಓದಿನ ವೇಳೆಯಲ್ಲಿ ಬೇರೆ ವಿಷಯಗಳಿಗೆ ಕಿವಿಗೊಡದೆ ಓದಿಗಷ್ಟೆ ಮಹತ್ವ ನೀಡಿ ಸಾಧನೆ ಮಾಡಬೇಕು. ಪರಿಶ್ರಮದ ಜತೆಗೆ ಆತ್ಮ ವಿಶ್ವಾಸದಿಂದ ಓದಿ ಉನ್ನತ ಸಾಧನೆ ಮಾಡಬೇಕು. ಸಾಮಾನ್ಯರು ಸಹ ಸಾಧನೆ ಮಾಡಬಹುದು. ಸ್ವಾಭಿಮಾನ ಆತ್ಮ ವಿಶ್ವಾಸದಿಂದ ಓದಿ ಸಧಢ ಭಾರತ ಕಟ್ಟಬೇಕು ಎಂದು ಹೇಳಿದರು.
ಮೇಯರ್ ಶಿವಕುಮಾರ್ ಮಾತನಾಡಿ, ಬಡತನ ಹಾಗೂ ಅಂಧಕಾರವನ್ನು ಶಿಕ್ಷಣದಿಂದ ಮಾತ್ರ ಹೋಗಲಾಡಿಸಲು ಸಾಧ. ಈ ಸಂಸ್ಥೆಯಲ್ಲಿ ತರಬೇತಿ ಹೊಂದಿದವರು ಇಂದು ಉನ್ನತ ಅಧಿಕಾರಿಗಳಾಗಿzರೆ. ಮುಂದೊಂದು ದಿನ ನೀವು ಸಹ ಅವರ ಸಾಲಿನಲ್ಲಿ ನಿಲ್ಲಬೇಕು ಎಂಬುದು ನಮ್ಮ ಬಯಕೆ ಎಂದರು.
ಇದೇ ವೇಳೆ ಸೇವೆಯಿಂದ ನಿವೃತ್ತಿ ಹೊಂದಲಿರುವ ಲಕ್ಷ್ಮಿಪುರಂ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ.ಸುರೇಶ್ ಹಾಗೂ ೨೦೨೩ರ ಯುಪಿಎಸ್‌ಸಿ ಪರೀಕ್ಷೆ ಟಾಪರ್ ಎಂ.ಪೂಜಾ ಅವರನ್ನು ಸನ್ಮಾನಿಸಲಾಯಿತು.
ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಅಧಯನ ವಿಭಾಗದ ನಿವೃತ್ತ ಪಾಧ್ಯಾಪಕ ಪ್ರೊ.ಹೆಚ್.ಎಂ.ರಾಜಶೇಖರ್, ಜೈನಹಳ್ಳಿ ಸತ್ಯನಾರಾಯಣಗೌಡ, ಎಚ್.ಬಾಲಕೃಷ್ಣ, ಪ್ರೊ.ಬಿ.ಪೂಜಾ, ಉಪಪ್ರಾಂಶುಪಾಲ ಎನ್.ಎಸ್.ಪಶುಪತಿ, ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳಾದ ಸತ್ಯ, ರಮಾನಂದ್, ತಿಮ್ಮರಾಜು, ಎ.ಎಲ.ಉಮೇಶ್, ಶಿವಪ್ರಕಾಶ್ ಎನ್.ಎಂ.ಚಂದ್ರಶೇಖರ್ ಬಾಬು ಎಸ್.ಎಂ.ಕಾಳಿಪ್ರಸಾದ್, ಡಾ.ಎಸ್.ಬಿ.ಎಂ.ಪ್ರಸನ್ನ ಇದ್ದರು.

RELATED ARTICLES
- Advertisment -
Google search engine

Most Popular