ಮದ್ಯ ಮತ್ತು ಮಾದಕ ದ್ರವ್ಯ ನಿಷೇಧ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ
ವರದಿ: ಎಡತೊರೆ ಮಹೇಶ್
ಎಚ್.ಡಿ.ಕೋಟೆ: ಸಮಾಜದಲ್ಲಿ ಮದ್ಯ ಮತ್ತು ಮದ್ಯವ್ಯಸನಿಗಳ ಸಂಖ್ಯೆ ಹೆಚ್ಚಾದರೆ, ಅಪರಾಧಗಳ ಸಂಖ್ಯೆ ಹೆಚ್ಚುತ್ತದೆ ಎಂದು ವೃತ್ತ ನಿರೀಕ್ಷಕ ಶಬ್ಬೀರ್ ಹುಸೇನ್ ತಿಳಿಸಿದರು.
ಪಟ್ಟಣದಲ್ಲಿ ಪೋಲಿಸ್ ಇಲಾಖೆ ಮತ್ತು ಸೇಂಟ್ ಮೇರಿಸ್ ಸಮುದಾಯ ಆರೋಗ್ಯ ಕೇಂದ್ರದ ಸಹಕಾರದಲ್ಲಿ ನಡೆದ ಮದ್ಯ ಮತ್ತು ಮಾದಕ ದ್ರವ್ಯ ನಿಷೇದ ಮತ್ತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನೆಗಳಲ್ಲಿ ಮದ್ಯ ಮತ್ತು ಮಾದಕ ದ್ರವ್ಯ ವ್ಯಸನಿಗಳಿದ್ದರೇ, ಕುಟುಂಬದಲ್ಲಿ ಕಲಹ ಉಂಟಾಗುತ್ತದೆ. ತಂದೆ, ತಾಯಿ ಮತ್ತು ಮಕ್ಕಳ ಸಂಬಂದ ಹಾಳಾಗುತ್ತದೆ. ಎಲ್ಲರ ಮದ್ಯೆ ಇರಬೇಕಾದ ಪ್ರೀತಿ, ವಿಶ್ವಾಸ ಮತ್ತು ಗೌರವ ಇರುವುದಿಲ್ಲ. ಆರೋಗ್ಯ ಕೆಡುತ್ತದೆ. ಆರೋಗ್ಯ ಸುಧಾರಣೆಗೆ ಹಣ ಬೇಕಾಗುತ್ತದೆ. ಹಣ ಇಲ್ಲ ಎಂದರೆ ಪ್ರಾಣ ಬಿಡಬೇಕಾಗುತ್ತದೆ. ಒಟ್ಟಾರೆ ಮದ್ಯ ಮತ್ತು ಮಾದಕ ದ್ರವ್ಯ ವ್ಯಸನಿಯಾದರೆ, ಎಲ್ಲರಿಗೂ ಕಷ್ಟ. ಇದು ಸಮಾಜಕ್ಕೆ ಕಂಟಕಪ್ರಾಯವೂ ಹೌದು. ಹಾಗಾಗಿ ಯಾರೂ ಮದ್ಯ ಮತ್ತು ಮಾದಕ ದ್ರವ್ಯ ವ್ಯಸನಿಗಳಾಗಬಾರದು ಎಂದರು.
ಸೇಂಟ್ ಮೇರಿಸ್ ಆಸ್ಪತ್ರೆಯ ಹಿರಿಯ ವೈದ್ಯೆ ಡಾ. ಅಮಿತ್ ಲೋಬೋ ಮಾತನಾಡಿ, ಇಂದಿನ ಸಮಾಜದಲ್ಲಿ ಯುವಸಮೂಹ, ಮದ್ಯ ಮತ್ತು ಮಾದಕ ವ್ಯಸನಿಗಳಾಗುತ್ತಿರುವುದು ಸೇರಿದಂತೆ ಕಳ್ಳಸಾಗಾಣೆ ಚಟುವಟಿಕೆಗಳಲ್ಲಿ ತೊಡಗುವುದು ವಿಷಾದನೀಯ. ಹಾಗಾಗಿ ಪೋಷಕರು ಮಕ್ಕಳೊಂದಿಗೆ ಸ್ನೇಹತರ ರೀತಿ ಇರಬೇಕು. ಒಂಟಿಯಾಗಿ ಇರಲಿಕ್ಕೆ ಬಿಡಬಾರದು. ಮಕ್ಕಳು ಮನೆಯಿಂದ ಹೊರಗೆ ಹೋಗಿ ಪುನಃ ಮನೆಗೆ ಬರುವ ತನಕ ಹೊರಗಡೆ ಶಾಲಾ, ಕಾಲೇಜು ಮತ್ತು ಬೇರೆ ಕಡೆ ಯಾವ ಚಟುವಟಿಕೆಯಲ್ಲಿ ತೊಡಗಿರುತ್ತಾರೆ ಎಂಬಿತ್ಯಾದಿ ಗಮನ ಹರಿಸಬೇಕು ಎಂದರು.
ಸೇಂಟ್ ಮೇರಿಸ್ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಮತ್ತು ಸೇಂಟ್ ಮೇರಿಸ್ ಕಾಲೇಜ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳು, ಮದ್ಯ ಮತ್ತು ಮಾದಕ ದ್ರವ್ಯ ವ್ಯಸನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕ ಪ್ರಪ್ರದರ್ಶಿಸಿದರು ಮತ್ತು ಪಟ್ಟಣದ ಹುಣಸೂರು-ಬೇಗೂರು ರಸ್ತೆಯಲ್ಲಿ ಮೆರವಣಿಗೆ ನಡೆಸಿ, ಘೋಷಣೆ ಕೂಗಿದರು.
ಸೇಂಟ್ ಮೇರಿಸ್ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯೆ ಡಾ. ಹಿಲ್ದಾ ಆರ್ ಲೋಬೋ, ಆಡಳಿತಾಧಿಕಾರಿ ಸಿಸ್ಟರ್ಗಳಾದ ಸಂತನ್ ರೋಡ್ರಿಗಸ್, ಅರುಣಾಕುಮಾರಿ, ಮೇರಿ ಮೆಂಡೊನ್ಸ್, ರಸ್ಕಿನ್ಸಾ, ಎಸ್ಐಗಳಾದ ಪ್ರಕಾಶ್, ಸುರೇಶ್ನಾಯಕ್, ಎಎಸ್ಐ ಸುಬಾನ್ ಪೊಲೀಸ್ ಮಾದೇವಸ್ವಾಮಿ ಯೋಗೇಶ್ ಮತ್ತು ಪೋಲಿಸ್ ಸಿಬ್ಬಂದಿ ಹಾಜರಿದ್ದರು.