Saturday, April 19, 2025
Google search engine

Homeರಾಜ್ಯವಿಮಾನ ನಿಲ್ದಾಣ ಮೇಲ್ಛಾವಣಿ ಕುಸಿತಕ್ಕೆ ಮೋದಿ ಸರ್ಕಾರವೇ ಕಾರಣ: ಕಾಂಗ್ರೆಸ್ ಆರೋಪ

ವಿಮಾನ ನಿಲ್ದಾಣ ಮೇಲ್ಛಾವಣಿ ಕುಸಿತಕ್ಕೆ ಮೋದಿ ಸರ್ಕಾರವೇ ಕಾರಣ: ಕಾಂಗ್ರೆಸ್ ಆರೋಪ

ದೆಹಲಿ: ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ ೧ ರ ಮೇಲ್ಛಾವಣಿ ಕುಸಿತಕ್ಕೆ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಕಾಂಗ್ರೆಸ್ ದೂಷಿಸಿದೆ.

ಭ್ರಷ್ಟ, ಅಸಮರ್ಥ ಮತ್ತು ಸ್ವಾರ್ಥಿ ಸರ್ಕಾರದ ಕ್ರಮಗಳಿಂದಾಗಿ ಸಂತ್ರಸ್ತರು ಈ ಸ್ಥಿತಿ ಅನುಭವಿಸ ಬೇಕಾಯಿತು ಎಂದು ಹೇಳಿದ ಕಾಂಗ್ರೆಸ್, ಕೇಂದ್ರದ ಭ್ರಷ್ಟಾಚಾರ ಮತ್ತು ಕ್ರಿಮಿನಲ್ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದಿದೆ. ದೆಹಲಿಯಲ್ಲಿ ಭಾರೀ ಮಳೆಯ ನಡುವೆ ಟರ್ಮಿನಲ್ ೧ ರ ಮೇಲ್ಛಾವಣಿ ಕುಸಿದು ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದು, ಐವರು ಗಾಯಗೊಂಡಿದ್ದಾರೆ. ಪ್ರಧಾನಿ ಮೋದಿಯವರ ಆಡಳಿತದಲ್ಲಿ ಭಾರತವು ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಹೊಂದಿದೆ ಎಂಬ ಮೋದಿಯವರ ಹೇಳಿಕೆಗಳಿಗೆ ಈ ಅಪಘಾತ ಕಪ್ಪು ಚುಕ್ಕಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕಳೆದ ೧೦ ವರ್ಷಗಳ ಮೋದಿ ಸರ್ಕಾರದ ಅವಧಿಯಲ್ಲಿ ಕಳಪೆ ಮೂಲಸೌಕರ್ಯಗಳು ಕಾರ್ಡ್ಗಳ ಗೋಪುರದಂತೆ ಕುಸಿಯಲು ಭ್ರಷ್ಟಾಚಾರ ಮತ್ತು ಕ್ರಿಮಿನಲ್ ನಿರ್ಲಕ್ಷ್ಯವೇ ಕಾರಣ ಎಂದು ಖರ್ಗೆ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಬರೆದಿದ್ದಾರೆ.

RELATED ARTICLES
- Advertisment -
Google search engine

Most Popular