ಬೆಂಗಳೂರು: ನಾನು ರಾಜಕೀಯ ನಿವೃತ್ತಿಯಾಗೋ ಪ್ರಶ್ನೆಯೇ ಇಲ್ಲ. ಅದೆಲ್ಲವನ್ನು ಕಾಲವೇ ಉತ್ತರಿಸಲಿದೆ. ನಾನು ಈಗ ಪ್ರಜ್ವಲ್, ಸೂರಜ್ ಬಗ್ಗೆ ಯಾವುದೇ ಮಾತನಾಡೋದಿಲ್ಲ ಅಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪ್ರಜ್ವಲ್, ಸೂರಜ್ ಪ್ರಕರಣ ಕೋರ್ಟ್ ನಲ್ಲಿ ಇದೆ. ಹೀಗಾಗಿ ಆ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ನನಗೆ ಕಾನೂನು, ನ್ಯಾಯಾಂಗದ ಮೇಲೆ ನಂಬಿಕೆ, ಗೌರವವಿದೆ. ಯಾವುದೇ ವಿಷಯ ಇದ್ರೂ ನ್ಯಾಯಾಂಗ, ದೇವರ ಮೇಲೆ ನಂಬಿಕೆಯಿದೆ ಎಂದರು.
ಪ್ರಕರಮ ಕೋರ್ಟ್ ನಲ್ಲಿ ಇರುವಾಗ ನಾನು ಏನೂ ಮಾತನಾಡುವುದಿಲ್ಲ. ಮಾಜಿ ಶಾಸಕ ಪ್ರೀತಂ ಗೌಡ ಷಡ್ಯಂತ್ರದ ಬಗ್ಗೆಯೂ ಮಾತನಾಡಲ್ಲ. ನಾನು ರಾಜಕೀಯ ನಿವೃತ್ತಿಯಾಗೋ ಪ್ರಶ್ನೆಯೇ ಇಲ್ಲ. ಎಲ್ಲವನ್ನು ಕಾಲವೇ ಉತ್ತರಿಸಲಿದೆ ಅಂತ ತಿಳಿಸಿದರು.