ಮಂಗಳೂರು( ದಕ್ಷಿಣ ಕನ್ನಡ): ಭೀಕರ ರಸ್ತೆ ಅಪಘಾತ ನಡೆದಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ -ಉಜಿರೆ ಕಾಲೇಜು ರಸ್ತೆಯಲ್ಲಿಂದು ನಡೆದಿದೆ. ಬೆಂಝ್ ಕಾರು ಡಿವೈಡರಿಗೆ ಹೊಡೆದ ಕಾರಣ ಕಾರು ಛಿದ್ರ ಛಿದ್ರವಾಗಿದ್ದು, ವಾಹನ ಚಾಲಕ ಮೃತಪಟ್ಟಿದ್ದಾರೆ.
ಮೃತರನ್ನು ಪ್ರಜ್ವಲ್ ಎಂದು ಗುರುತಿಸಲಾಗಿದೆ.
ಅತಿಯಾದ ವೇಗದಲ್ಲಿ ಬಂದ ಕಾರು ನಿಯಂತ್ರಣ ಕಳೆದುಕೊಡು ಡಿವೈಡರ್ ಗೆ ಡಿಕ್ಕಿಹೊಡೆದು ಮಗುಚಿ ಬಿದ್ದಿದೆ ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಸ್ಥಳೀಯರು ಕೂಡಲೇ ಪ್ರಜ್ವಲ್ ಅನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತ ಪಟ್ಟಿದ್ದಾರೆ.