Monday, April 21, 2025
Google search engine

Homeಅಪರಾಧವಾಲ್ಮೀಕಿ ನಿಗಮದ ಹಗರಣ : 10 ಕೋಟಿ ಜಪ್ತಿ, ಮತ್ತೊಬ್ಬ ಆರೋಪಿ ಬಂಧನ

ವಾಲ್ಮೀಕಿ ನಿಗಮದ ಹಗರಣ : 10 ಕೋಟಿ ಜಪ್ತಿ, ಮತ್ತೊಬ್ಬ ಆರೋಪಿ ಬಂಧನ

ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ನಡೆದಿದ ಎನ್ನಲಾದ ಹಗರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ದಳದ ಪೊಲೀಸರು ಮತ್ತೆ ₹10 ಕೋಟಿ ಜಪ್ತಿ ‌ಮಾಡಿದ್ದಾರೆ.

ಚಿನ್ನಾಭರಣ ಹಾಗೂ ಬಾರ್ ಮಾಲೀಕರ ಅಕೌಂಟ್‌ಗಳಿಂದ ಈಗ ₹10 ಕೋಟಿ ವಶಕ್ಕೆ ‌ಪಡೆಯಲಾಗಿದ್ದು ನಕಲಿ ಅಕೌಂಟ್ ಸೃಷ್ಟಿಸಿದ್ದ ಮತ್ತೊಬ್ಬ ಆರೋಪಿ ಶ್ರೀನಿವಾಸ್ ಎಂಬಾತನನ್ನು ಎಸ್ಐಟಿ ಬಂಧಿಸಿದೆ.

ಇದುವರೆಗೂ ಆರೋಪಿಗಳಿಂದ ₹14 ಕೋಟಿ, ಬ್ಯಾಂಕ್ ಖಾತೆಗಳಿಂದ ₹ 10 ಕೋಟಿ ಹಾಗೂ ₹4 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ‌‌ ಮಾಡಲಾಗಿದೆ.

ಪ್ರಕರಣದಲ್ಲಿ 700 ನಕಲಿ ಖಾತೆಗಳನ್ನು ಸೃಷ್ಟಿಸಲಾಗಿದೆ ಎಂದು ತನಿಖೆಯಿಂದ ಪತ್ತೆಯಾಗಿದ್ದು, ಇದುವರೆಗೂ 187 ನಕಲಿ ಖಾತೆಗಳನ್ನು ಎಸ್‌ಐಟಿ ಪತ್ತೆ ಹಚ್ಚಿದೆ.

ಹೈದರಾಬಾದ್‌ನ ಸಹಕಾರಿ ಬ್ಯಾಂಕ್‌ನಿಂದ ಬಾರ್, ಚಿನ್ನಾಭರಣ ಹಾಗೂ ಹೋಟೆಲ್‌ ಹಾಗೂ ಕೆಲವು ಐಟಿ ಕಂಪನಿ ಖಾತೆಗಳಿಗೆ‌ ಹಣವನ್ನು‌ ವರ್ಗಾವಣೆ‌ ಮಾಡಿಕೊಂಡು‌‌ ನಗದು ರೂಪದಲ್ಲಿ ‌ಡ್ರಾ ಮಾಡಲಾಗಿತ್ತು. 193 ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಪ್ರತಿ ಅಕೌಂಟ್‌ಗೆ ₹ 5 ಲಕ್ಷ, ₹8 ಲಕ್ಷ ಹಾಗೂ ₹ 10 ಲಕ್ಷದಂತೆ ಹಣ ವರ್ಗಾವಣೆ ಮಾಡಲಾಗಿತ್ತು.

ಪ್ರಕರಣದ ಮತ್ತೊಬ್ಬ ಆರೋಪಿ ‌ಕಾರ್ತಿ ಶ್ರೀನಿವಾಸ್ ಎಂಬಾತ‌ ತಲೆಮರೆಸಿಕೊಂಡಿದ್ದು, ಆತನಿಗೆ‌‌ ಶೋಧ ಮುಂದುವರಿಸಲಾಗಿದೆ. ಕಳೆದ ವಾರ ಬಂಧನಕ್ಕೆ ಒಳಗಾಗಿದ್ದ ಸಾಯಿತೇಜ ಹಾಗೂ ತೇಜ ತಿಮ್ಮಯ್ಯ ‌ಅವರು ಎಸ್‌ಐಟಿ ಕಸ್ಟಡಿಯಲ್ಲಿದ್ದು, ವಿಚಾರಣೆ ಮುಂದುವರಿದಿದೆ. ಇದುವರೆಗೂ 11 ಮಂದಿಯನ್ನು ಬಂಧಿಸಿದಂತೆ ಆಗಿದೆ.

RELATED ARTICLES
- Advertisment -
Google search engine

Most Popular