ಚಿಕ್ಕಬಳ್ಳಾಪುರ : ಆಂಧ್ರಪ್ರದೇಶದಲ್ಲಿ ಜಗನ್ಮೋಹನ ರೆಡ್ಡಿಗೆ ಬಂದಂತಹ ಪರಿಸ್ಥಿತಿ ಕೂಡ ರಾಜ್ಯ ಸರ್ಕಾರಕ್ಕೂ ಬರಲಿದೆ ಎಂದು ಬಿಜೆಪಿಯ ಸಂಸದ ಡಾಕ್ಟರ್ ಕೆ ಸುಧಾಕರ್ ಭವಿಷ್ಯ ನುಡಿದರು.
ಚಿಕ್ಕಬಳ್ಳಾಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಂಧ್ರದಲ್ಲಿ ಜಗನ್ ಗೆ ಬಂದ ಸ್ಥಿತಿ ರಾಜ್ಯ ಸರ್ಕಾರಕ್ಕೂ ಬರುತ್ತದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜಗನ್ ಸ್ಥಿತಿ ಬರುತ್ತದೆ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಚೆಕ್ಬಳ್ಳಾಪುರ ಜಿಲ್ಲೆ ಕಡೆಗಣಿಸಲಾಗಿದೆ ಎಂದರು.
೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸೋತಿದ್ದೇನೆ. ಸೋತಾಗ ತಂದೆ ತಾಯಿಯನ್ನು ಕಳೆದುಕೊಂಡಷ್ಟು ನೋವಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಜನ ಮತ್ತೆ ಪ್ರೀತಿ ತೋರಿದ್ದಾರೆ ಎಂದು ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಸಂಸದ ಕೆ ಸುಧಾಕರ್ ಹೇಳಿದರು.