Monday, April 21, 2025
Google search engine

Homeರಾಜ್ಯರಾಹುಲ್ ಗಾಂಧಿ ಮಾತಾಡುವಾಗ ಮೈಕ್ ಆಫ್ ಮಾಡಲಾಯಿತು ಎಂಬ ಆರೋಪ ಸುಳ್ಳು: ಕೇಂದ್ರ ಸಚಿವೆ ಶೋಭಾ...

ರಾಹುಲ್ ಗಾಂಧಿ ಮಾತಾಡುವಾಗ ಮೈಕ್ ಆಫ್ ಮಾಡಲಾಯಿತು ಎಂಬ ಆರೋಪ ಸುಳ್ಳು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬೆಂಗಳೂರು: ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾತಾಡುವಾಗ ಮೈಕ್ ಆಫ್ ಮಾಡಲಾಯಿತು ಎಂಬ ಆರೋಪ ಸುಳ್ಳು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದಲ್ಲಿ ಇಂದು ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶೋಭಾ ಕರಂದ್ಲಾಜೆ, ಸಂಸತ್ತಿನಲ್ಲಿ ಮಾತಾಡುವ ಅವಕಾಶ ಎಲ್ಲರಿಗೂ ಇದೆ, ರಾಷ್ಟ್ರಪತಿಯವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತಾಡಿದ ನಂತರ ಅಭಿನಂದನಾ ಪ್ರಸ್ತಾವದಲ್ಲಿ ಯಾವುದೇ ಪಕ್ಷದ ಸಂಸದ ಸಂಸತ್ತಿನಲ್ಲಿ ಯಾವುದೇ ವಿಷಯದ ಬಗ್ಗೆ ಮಾತಾಡಬಹುದು, ಇದು ಮೊದಲಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ ಎಂದು ಅವರು ಹೇಳಿದರು.

ಪರಿಸ್ಥಿತಿ ಹೀಗಿರುವಾಗ ರಾಷ್ಟ್ರಪತಿಯವರನ್ನು ಅಪಮಾನ ಮಾಡುವದಕ್ಕೋಸ್ಕರ ಕಾಂಗ್ರೆಸ್ ಪಕ್ಷದ ನಾಯಕರು ಉದ್ದೇಶಪೂರ್ವಕವಾಗಿ ಆರೋಪ ಮಾಡುತ್ತಿದ್ದಾರೆ ಎಂದು ಶೋಭಾ ಹೇಳಿದರು.

RELATED ARTICLES
- Advertisment -
Google search engine

Most Popular