ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಹಕಾರಿ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ ವರ್ಗದವರು ರೈತರ ನೋವುಗಳಿಗೆ ಸ್ಪಂದಿಸುವ ಧ್ವನಿಯಾಗಬೇಕು ಆಗ ಮಾತ್ರ ಅಂತಹ ಅಧಿಕಾರಗಳ ಹೆಸರು ಜನಮಾಸದಲ್ಲಿ ಉಳಿಯಲಿದೆ ಎಂದು ಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಚ್.ಜೆ.ರಮೇಶ್ ಹೇಳಿದರು.
ಮೈಸೂರು ಜಿಲ್ಲಾ ಹಾಲು ಒಕ್ಕೂಟದಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ನಿರ್ವಹಿಸಿ ಸೇವೆಯಿಂದ ನಿವೃತ್ತಿ ಗೊಂಡ ಸಿ.ಎನ್.ವಿಜಯ್ ಕುಮಾರ್ ಅವರನ್ನು ಸಂಘದ ಪರವಾಗಿ ಸನ್ಮಾನಿಸಿ ಅವರು ಮಾತನಾಡಿದರು. ಸಹಕಾರ ಕ್ಷೇತ್ರದಲ್ಲಿ ನಾವು ಎಷ್ಟು ದಿನ ಸೇವೆ ಮಾಡುತ್ತೇವೆ ಎಂಬುದು ಮುಖ್ಯವಲ್ಲಾ ಈ ಕ್ಷೇತ್ರದಿಂದ ಸಿಗುವ ಸವಲತ್ತು ಮತ್ತು ಸೌಲಭ್ಯವನ್ನು ಪ್ರತಿಯೊಬ್ಬರಿಗೂ ತಲುಪಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ವೃತ್ತಿಯಲ್ಲಿನ ಅಧಿಕಾರಿಯ ದಕ್ಷತೆ ಹೆಚ್ಚಲು ಕಾರಣವಾಗುತ್ತದೆ ಎಂದರು.
ಜಿಲ್ಲಾ ಹಾಲು ಒಕ್ಕೂಟದಲ್ಲಿ ಸದಾ ತಮ್ಮ ಕೆಲಸದ ಸಾಕಷ್ಟು ಒತ್ತಡಗಳ ನಡುವೆಯು ರೈತರ ಆಶೋತ್ತರಿಗಳಿಗೆ ಸ್ಪಂದಿಸಿ ಕೆಲಸ ನಿರ್ಹಿಸುವ ಮೂಲಕ ರೈತರ ಬಗ್ಗೆ ಕಾಳಜಿ ಹೊಂದಿ ತಮ್ಮ ವೃತ್ತಿಯಲ್ಲಿ ಗೌರವ ಎತ್ತಿ ಹಿಡಿದು ನಿವೃತ್ತಿ ಅಗುತ್ತಿದ್ದು ಇವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ಸಿಇಓ ಶಿವಶಂಕರ್, ಸಂಘದ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕರುಗಳಾದ ಬುದ್ಧಿಸಾಗರ್, ಸ್ವಾಮಿ, ಪ್ರಸನ್ನ ಯಧ ಕುಮಾರ್, ಅನಿಲ್ ಕುಮಾರ್, ರೈತ ದರ್ಶನ್ ಸೇರಿದಂತೆಮತ್ತಿತರರು ಹಾಜರಿದ್ದರು