Sunday, April 20, 2025
Google search engine

Homeಸ್ಥಳೀಯಹನೂರು ತಹಸಿಲ್ದಾರ್ ಆನಂದಯ್ಯ ರವರಿಗೆ ಆತ್ಮೀಯ ಬಿಳ್ಕೋಡೆಗೆ

ಹನೂರು ತಹಸಿಲ್ದಾರ್ ಆನಂದಯ್ಯ ರವರಿಗೆ ಆತ್ಮೀಯ ಬಿಳ್ಕೋಡೆಗೆ


ಹನೂರು : ಯಾವುದೆ ವ್ಯಕ್ತಿ ತನ್ನ ಸರ್ಕಾರಿ ಸೆವೆಯಲ್ಲಿ ಸಕಾರತ್ಮಕವಾಗಿ ಸ್ಪಂದಿಸುವ ವ್ಯಕ್ತಿಯೆ ಉತ್ತಮ ಕೆಲಸಗಾರರಾಗಿರುತ್ತಾರೆ ಇವರಿಗೆ ಅಪಾರ ಅನುಭವವಾಗಿದೆ ಇವರು ಸೇವೆಯನ್ನು ಪಡೆದ ಹನೂರು ತಾಲ್ಲೋಕು ಜನತೆ ಹಾಗೂ ಅಧಿಕಾರಿಗಳೆ ಧನ್ಯರಾಗಿದ್ದಾರೆ ಎಂದು ಗ್ರೇಡ್ ಟು ತಹಸಿಲ್ದಾರರಾದ ಧನಂಜಯ್ ತಿಳಿಸಿದರು . ಹನೂರು ಪಟ್ಟಣದ ಲೋಕೊಪಯೋಗಿ ಇಲಾಕೆಯಲ್ಲಿ ಬಿಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ತಹಸಿಲ್ದಾರ್ ಆನಂದಯ್ಯ ಅವರು ನಾನು ಪ್ರಥಮ ಭಾರಿಗೆ ದ್ವಿತಿಯ ದರ್ಜೆಯ ಸಹಾಯಕರಾಗಿ ಸೇವೆಗೆ ಸೇರಿ ತಹಸಿಲ್ದಾರ್ ಆಗಿ ನಿವೃತಿಯಾಗಿರುವುದು ಸಂತೊಷದ ವಿಷಯ ಹಾಗೂ ನನ್ನ ಗುರುಗಳಾದ ಸಹಕಾರದಿಂದ ಮಾತ್ರವಲ್ಲದೆ ಸಹ ಅಧಿಕಾರಿಗಳ ಜೊತೆಯಲ್ಲಿದ್ದಾಗ ಎಲ್ಲಾರು ಸಹ ಸಹೋದರರಂತೆ ಕಂಡರು,ಅಲ್ಲದೆ ನಾನು ಎಲ್ಲೆ ಕರ್ತವ್ಯ ನಿರ್ವಹಿಸಿದರು ಶ್ರದ್ದೆ ಮುಖ್ಯವಾಗಿರುತ್ತದೆ ಎಲ್ಲಾರಲ್ಲು ಒಗ್ಗಟ್ಟು ಮತ್ತು ಪ್ರಾಮಣಿಕತೆ ಮುಖ್ಯ ನನಗೆ ನೀವು ನಿಡಿದ ಸಹಕಾರ ಉತ್ತಮವಾಗಿತ್ತು ,ಎಂದು ತಿಳಿಸಿದರು . ಇದೇ ಸಂದರ್ಭದಲ್ಲಿ ಆರ್ ಐ ನಾಗೇಂದ್ರ ಮಾತನಾಡಿ ಅವರ ಬೀಳ್ಕೋಡೆಗೆ ಸಮಯದಲ್ಲಿ ನುಡಿದಂತೆ ಇದೇ ತಾಲ್ಲೋಕಿನಲ್ಲಿ ನಿವೃತಿಯಾಗಿದ್ದಾರೆ ಅವರು ಎಂಟರಿಂದ ಒಂಬತ್ತು ತಾಲ್ಲೋಕಿನಲ್ಲಿ ಕರ್ತವ್ಯ ನಿರ್ವಹಿಸಿ ಯಾವುದೆ ಕಪ್ಪುಚುಕ್ಕಿಯಿಲ್ಲದೆ ನಿವೃತಿಯಾಗುತ್ತಿರುವುದು ಸಂತೋಷದ ವಿಷಯ ಎಂದರು. ಗ್ರಾಮ ಆಡಳಿತ ಆಧಿಕಾರಿಯಾದ
ಶೇಷಣ್ಣ ಮಾತನಾಡಿ ನಮ್ಮ ಕೆಲಸಗಳಿಗೆ ಇವರು ಆದರ್ಶವಾಗಿದ್ದರು ನಮ್ಮ ಭಾಗದಲ್ಲಿ ಉಳಿಸಿದ್ದ ಹಲವಾರು ಕೆಲಸ ಮಾಡಿದ್ದರೆ ದೇವರು ಒಳ್ಳೆದುಮಾಡಲಿ ಎಂದರು,ಕಛೇರಿಯಲ್ಲಿ ಗ್ರೇಡ್ ೨ತಹಸಿಲ್ದಾರ್ ದನಂಜಯ್ ರಿಗೆ ಅಧಿಕಾರ ಹಸ್ತಾಂತರ ಮಾಡಿದರು,ಹನೂರು ಪಟ್ಟಣಕ್ಕೆ ಆಗಮಿಸಿದ ರಾಮನಗರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ರಮೇಶ್ ಮಾತನಾಡಿ ನಮ್ಮ ಜಿಲ್ಲೆಯಲ್ಲಿ ಅವರ ಜೊತೆಯಲ್ಲಿ ಹತ್ತು ವರ್ಷ ಕೆಲಸ ಮಾಡಿದ ಅನುಭವವನ್ನು ಮರೆಯಲು ಸಾದ್ಯವಿಲ್ಲ, ಕಂದಾಯ ಇಲಾಖೆಯಲ್ಲಿ ಹಾವು ಏಣಿಯಾಟವಿದ್ದಂತೆ ಇಂತಹ ಇಲಾಖೆಯಲ್ಲಿ ಕಪ್ಪುಚುಕ್ಕೆಯಿಲ್ಲದೆ ನಿವೃತಿಯಾಗಿರುವುದು ಬಹಳ ವಿರಳವಾಗಿದೆ ಅಂತಹವರಲ್ಲಿ ಇವರು ಸಹ ಒಬ್ಬರು ಇವರಿಗೆ ಶುಭವಾಗಲಿ ಎಂದರು
ಇದೇ ಸಂದರ್ಭದಲ್ಲಿ ಉಪ ತಹಸಿಲ್ದಾರ್ ಗಳಾದ ಸುರೇಖ ,ನಾಗೇಂದ್ರ, ಆಹಾರ ನಿರೀಕ್ಷಕರಾದ ಬಸವರಾಜು ,ರಾಜಶ್ವ ನಿರೀಕ್ಷಕರಾದ ಶಿವಕುಮಾರ್ ,ಮಹದೇವಸ್ವಾಮಿ ,ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಕಛೇರಿಯ ಸಿಬ್ಬಂದಿಗಳು ಸೇರಿದಂತೆ ಇತರರು ಹಾಜರಿದ್ದರು .

RELATED ARTICLES
- Advertisment -
Google search engine

Most Popular