ಬಾರ್ಬಡೋಸ್: ಭಾರತ ಎರಡನೇ ಬಾರಿಗೆ ಟಿ೨೦ ವಿಶ್ವಕಪ್ ಪ್ರಶಸ್ತಿ ಗೆದ್ದಿದ್ದು, ಇಡೀ ದೇಶಾದ್ಯಂತ ಕ್ರಿಕೆಟ್ ಪ್ರೇಮಿಗಳಲ್ಲಿ ಸಂಭ್ರಮ ಮೂಡಿಸಿದೆ. ೧೭ ವರ್ಷಗಳ ಬಳಿಕ ಟಿ೨೦ ವಿಶ್ವಕಪ್ ಭಾರತ ಗೆದ್ದದ್ದಲ್ಲದೆ ೧೧ ವರ್ಷಗಳ ಐಸಿಸಿ ಟ್ರೋಫಿಯ ಬರವನ್ನು ಕೊನೆಗೊಳಿಸಿದೆ. ಭಾರತ ಈ ಹಿಂದೆ ೨೦೧೩ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು.ಪ್ರಧಾನಿ ಮೋದಿ ತಂಡವನ್ನು ಅಭಿನಂದಿದ್ದಾರೆ.ಆದರೆ ಗೆಲುವಿನ ಖುಷಿಯಲ್ಲಿಲ್ಲಿರುವಾಗಲೇ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಕಹಿ ಸುದ್ದಿಯನ್ನು ವಿರಾಟ್ ಕೊಹ್ಲಿ ನೀಡಿದ್ದಾರೆ.
ಭಾರತ ತಂಡ ಖಿ೨೦ ವಿಶ್ವಕಪ್ ೨೦೨೪ ಗೆದ್ದ ಸಂಭ್ರಮದಲ್ಲಿರುವಾಗಲೇ, ಮಾಜಿ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ೨೦ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಕೊಹ್ಲಿ ತಮ್ಮ ನಿವೃತ್ತಿಯ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ.ಸರಣಿಯುದ್ದಕ್ಕೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಕೊಹ್ಲಿ ಫೈನಲ್ ಪಂದ್ಯದಲ್ಲಿ ಅಮೋಘ ಆಟವಾಡಿ ೭೬(೫೯ ಎಸೆತ) ರನ್ ಗಳಿಸಿದ್ದರು.