ಮದ್ದೂರು: ತಾಲೂಕಿನ ಭಾರತೀ ನಗರದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಹೋಬಳಿ ಮಟ್ಟದ ಜನಸಂಪರ್ಕ ಸಭೆಯ ಅಧ್ಯಕ್ಷತೆಯನ್ನ ವಹಿಸಿ ಜಿಲ್ಲಾಧಿಕಾರಿ ಡಾ. ಕುಮಾರ್ ಮಾತನಾಡಿದರು.
ಸರ್ಕಾರವೇ ಗ್ರಾಮಕ್ಕೆ ಹಾಗೂ ಜನರ ಬಳಿಗೆ ಹೋಗಬೇಕು ಎಂಬ ಉದ್ದೇಶದಿಂದ ಜನ ಸಂಪರ್ಕ ಸಭೆ ನಡೆಸಲಾಗುತ್ತಿದೆ. ಕೆಲವರು ಶಾಸಕರು ಹಾಗೂ ರಾಜಕಾರಣಿಗಳಿಂದ ಕರೆ ಮಾಡಿಸಿ ಹೇಳಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಕಟ್ಟಕಡೆಯ ಜನರಿಗೆ ಅಧಿಕಾರಿಗಳು ಸಿಗುವುದೇ ಕಷ್ಟ ಸಾಧ್ಯವಾದ ಹಿನ್ನೆಲೆ ಇಂಥ ಜನ ಸಂಪರ್ಕ ಸಭೆಯಲ್ಲಿ ನೇರವಾಗಿ ಬಂದು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಇಂಥ ಸಭೆಗಳು ಸಹಕಾರಿಯಾಗಲಿವೆ ಎಂದರು.

ನಮ್ಮ ಕೆಲಗಿನ ಅಧಿಕಾರಿಗಳು ಗ್ರಾಮಮಠದಲ್ಲಿ ಸರಿಯಾದ ರೀತಿ ಸಾರ್ವಜನಿಕರಿಗೆ ಸ್ಪಂದಿಸಿದರೆ ಯಾರೂ ಕೂಡ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಬರುವುದಿಲ್ಲ ಸರಿಯಾದ ಮಾರ್ಗದರ್ಶನ ನೀಡಿ ರೈತರ ಅಲೆದಾಟವನ್ನು ಕೆಳಮಟ್ಟದಲ್ಲಿ ತಗ್ಗಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಶಾಸಕ ಕದಲೂರು ಉದಯ್ ಮಾತನಾಡಿ ಸಣ್ಣ ಸಣ್ಣ ವಿಷಯಗಳಿಗೆ ನಮ್ಮ ರೈತರು ಒಳದಾಡಿಕೊಂಡು ನ್ಯಾಯಾಲಯಗಳಿಗೆ ಹೋಗಿ ಕಾಲ ವಿಳಂಬ ಮಾಡಿಕೊಳ್ಳುತ್ತಿದ್ದಾರೆ ಅವುಗಳನ್ನು ಬಗೆಹರಿಸಿಕೊಂಡು ಬಗೆಹರಿಸಿಕೊಳ್ಳಲಾರದ ಸಮಸ್ಯೆಗಳಿಗೆ ಮಾತ್ರ ನ್ಯಾಯಾಲಯದ ಮರೆಯೋಗಿ, ಇಲ್ಲೇ ಸಣ್ಣಪುಟ್ಟ ರಾಜ ಏನ್ ಮಾಡಿಕೊಂಡು ನಿಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಸಹಬಾಳ್ವೆಯಿಂದ ಬಾಳಿ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಮಧು ಜಿ ಮಾದೇಗೌಡ, ಜಿಲ್ಲಾ ಪಂಚಾಯಿತಿ ಸಿಇಒ, ತಹಶೀಲ್ದಾರ್ ಸೋಮಶೇಖರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.