ಮಂಡ್ಯ: ಎಸ್.ಸಿ,-ಎಸ್.ಟಿ. ಜನರಿಗೆ ರಾಜ್ಯ ಸರ್ಕಾರದಿಂದ ದ್ರೋಹವಾಗಿದ್ದು, ಸಂವಿಧಾನ ಪುಸ್ತಕ ಹಿಡಿಯಲು ಕಾಂಗ್ರೆಸ್ ಗೆ ಯೋಗ್ಯತೆ ಇಲ್ಲ ಎಂದು ಮಂಡ್ಯದಲ್ಲಿ ಮಾಜಿ ಜೆಡಿಎಸ್ ಶಾಸಕ ಡಾ.ಕೆ.ಅನ್ನದಾನಿ ಕಿಡಿಕಾರಿದ್ದಾರೆ.
ವಾಲ್ಮೀಕಿ ನಿಗಮದ 187 ಕೋಟಿ ಹಣ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಗಿರಿ ಜನರಿಗೆ ಅನ್ಯಾಯ ಮಾಡಲಾಗಿದೆ. ರಾಜ್ಯ ಸರ್ಕಾರ, ರಾಹುಲ್ ಗಾಂಧಿ ಎಲ್ಲಿ ಹೋದರು ಸಂವಿಧಾನದ ಪುಸ್ತಕ ಹಿಡಿದುಕೊಳ್ತಾರೆ.ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು. ಕಾಂಗ್ರೆಸ್ ನಿಂದ ಅಥವಾ ನರೇಂದ್ರ ಮೋದಿ ಅವರಿಂದ ಸಂವಿಧಾನಕ್ಕೆ ಅಪಪ್ರಚಾರ ಆಗಿದ್ಯಾ? 98 ಬಾರಿ ಸಂವಿಧಾನ ತಿದ್ದುಪಡಿ, ಎಮರ್ಜೆನ್ಸಿ ಡಿಕ್ಲೆರ್ ಮಾಡಿ ಜೈಲಿಗೆ ಹಾಕಿದ್ರಿ. ಸಂವಿಧಾನವನ್ನ ಇಂದಿರಾಗಾಂಧಿ ಸೈಡಿಗೆ ಹಾಕಿದ್ರು. ಸಂವಿಧಾನ ಪುಸ್ತಕ ಹಿಡಿಯಲು ಕಾಂಗ್ರೆಸ್ ಗೆ ಯೋಗ್ಯತೆ ಇಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಗೌರವ ತೋರಿದ್ದಿರಿ. ಕಾಂಗ್ರೆಸ್ ಗೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಹರಿಹಾಯ್ದರು.
11 ಸಾವಿರ ಕೋಟಿ SCPTSP ಹಣ ವರ್ಗಾವಣೆ ಮಾಡಿ ಜನರಿಗೆ ಅನ್ಯಾಯ ಮಾಡಿದ್ದೀರಿ. ವಾಲ್ಮೀಕಿ ನಿಗಮದ 187 ಕೋಟಿ ಹಣ ದುರ್ಬಳಕೆಯಾಗಿದೆ. ಅರಣ್ಯ ಪ್ರದೇಶದಲ್ಲಿ ವಾಸ ಮಾಡುವ ಗಿರಿ ಜನರಿಗೆ ಮೀಸಲಿಟ್ಟ ಹಣ ದುರ್ಬಳಕೆಯಾಗಿದೆ. ಸರ್ಕಾರಕ್ಕೆ ಸ್ವಲ್ಪ ನಾದರು ಮಾನವೀಯತೆ ಇಲ್ಲ. ಎಸ್ಸಿ, ಎಸ್ಟಿ ಸದನ ಸಮಿತಿ ಏನು ಮಾಡ್ತಿದೆ? ಸಚಿವರ ರಾಜೀನಾಮೆ ಕೊಡಿಸಿದರೆ ಮುಗಿಯಲ್ಲ ಸಾವನ್ನಪ್ಪಿದವರಿಗೆ ನ್ಯಾಯ ಸಿಗಬೇಕು. ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಆಗಿದೆ. ಮುಖ್ಯಮಂತ್ರಿಗಳೆ ಹಣಕಾಸಿನ ಸಚಿವರು. ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಬೇರೆ ರಾಜ್ಯದ ಚುನಾವಣೆಗೂ ಬಳಕೆ ಮಾಡಿದ್ದಿರಿ. ಆಂದ್ರಪ್ರದೇಶದ, ತೆಲಂಗಾಣಕ್ಕೆ ಹಣ ಹೋಗಿದೆ. ಮುಖ್ಯಮಂತ್ರಿಗಳು ಹಿಂದುಳಿದ ವರ್ಗಕ್ಕೆ ಸೇರಿದವರು ಇದು ಸರಿನಾ? ಹಣ ದುರುಪಯೋಗ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.