ವರದಿ ವಿನಯ್ ದೊಡ್ಡಕೊಪ್ಪಲು
ಕೆ ಆರ್.ನಗರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ಅಭಿವೃದ್ದಿಗಾಗಿ ವಿವಿಧ ಇಲಾಖೆಗಳಿಂದ ೨೦೦ ಕೋಟಿ ರೂ ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಗರುಡಗಂಭ ವೃತ್ತದಲ್ಲಿ ಜಾಮೀಯಾ ಮಸೀದಿ ರಸ್ತೆಗೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ರಾಜ್ಯ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ೫ ಕೋಟಿ ರೂಗಳನ್ನು ಮಂಜೂರು ಮಾಡಿಸಲಾಗಿದ್ದು ಅಲ್ಪ ಸಂಖ್ಯಾತರು ಹೆಚ್ಚು ಇರುವ ಐದು ವಾರ್ಡ್ಗಳ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ೩ ಕೋಟಿ ರೂಗಳಲ್ಲಿ ಮಾಡಲಾಗುತ್ತದೆ ಎಂದರು.
ಡೋರ‍್ನಹಳ್ಳಿ ಚರ್ಚ್ ಸಮೀಪ ಕಾಂಕ್ರೀಟ್ ರಸ್ತೆ ನಿರ್ಮಾಣ, ಸಾಲಿಗ್ರಾಮ ಮತ್ತು ಭೇರ್ಯ ಹಾಗೂ ಎರೆಮನುಗನಹಳ್ಳಿ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಲು ೨ ಕೋಟಿ ನೀಡಲಾಗಿದೆ ಎಂದ ಶಾಸಕರು ಕಳೆದ ಸರ್ಕಾರದಲ್ಲಿ ಬಿಡುಗಡೆಯಾದ ಅನುದಾನಕ್ಕೆ ನಾನು ಭೂಮಿ ಪೂಜೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಶಾಸಕರು ವಿರೋಧ ಪಕ್ಷದವರು ಮಾಡುವ ಅಪಪ್ರಚಾರಕ್ಕೆ ಮನ್ನಣೆ ನೀಡುವುದಿಲ್ಲ ಎಂದು ಹೇಳಿದರು.

ಕಳೆದ ೨೦ ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ನನಗೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿಯಿದ್ದು ಜನಾಶೀರ್ವಾದ ಮಾಡಿದ ಸಂದರ್ಭದಲ್ಲಿ ಗ್ರಾಮಗಳಿಗೆ ಆಗಬೇಕಾಗಿರುವ ಅಭಿವೃದ್ದಿ ಕೆಲಸಗಳನ್ನು ಪಟ್ಟಿ ಮಾಡಲಾಗಿದೆ, ಆದ್ಯತೆ ಮೇರೆಗೆ ಅನುದಾನ ತಂದು ಕೆಲಸ ಮಾಡುತ್ತೇನೆ ಬೇರೆಯವರಿಂದ ಹೇಳಿಸಿಕೊಂಡು ಮಾಡುವ ಅವಶ್ಯಕತೆ ನನಗಿಲ್ಲ ಟೀಕೆ ಮಾಡುವವರಿಗೆ ಅಭಿವೃದ್ದಿ ಕೆಲಸ ಮಾಡುವ ಮೂಲಕ ಉತ್ತರ ನೀಡುತ್ತೇನೆಂದರು.
ವಿರೋಧ ಪಕ್ಷದವರು ನಾವು ತಂದಿದ್ದ ಅನುದಾನಕ್ಕೆ ಪೂಜೆ ಮಾಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ .ಇಂತಹಾ ಗೊಡ್ಡು ಬೆದರಿಕೆಗೆ ಎದುರುವ ಜಾಯಮಾನದವನ್ನಲ್ಲ ಎಂದರಲ್ಲದೆ ತಾವು ಹದಿನೈದು ವರ್ಷಗಳಲ್ಲಿ ಮಾಡಿರುವ ಅಭಿವೃದ್ದಿ ಕೆಲಸಗಳು ಮತ್ತು ನಾನು ಐದು ವರ್ಷಗಳ ಅಧಿಕಾರವಧಿಯಲ್ಲಿ ಮಾಡುವ ಅಭಿವೃದ್ದಿ ಕಾರ್ಯಗಳನ್ನು ಮುಂದಿಟ್ಟು ಮುಂದಿನ ಚುನಾವಣೆ ಸಮಯದಲ್ಲಿ ಜನರ ಬಳಿಗೆ ಹೋಗೋಣ ಎಂದು ಸವಾಲು ಹಾಕಿದರು.
ಶವ ಮುಂದಿಟ್ಟುಕೊAಡು ರಾಜಕೀಯ ಲಾಭ ಗಳಿಸುವಂತಹಾ ನೀಚಾ ರಾಜಕಾರಣವನ್ನು ನಾನು ಎಂದಿಗೂ ಮಾಡುವುದಿಲ್ಲ ನೊಂದವರ ಜತೆ ಇದ್ದು ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸಲಾಗಿದೆ ಇದರ ಜತೆಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದೇನೆ ಎಂದ ಶಾಸಕ ಡಿ.ರವಿಶಂಕರ್ ಇದರಲ್ಲಿ ರಾಜಕಾರಣ ಮಾಡುವ ಅವಶ್ಯಕತೆ ನನ್ನಗಿಲ್ಲ ಎಂದರಲ್ಲದೆ ಸರ್ಕಾರದಿಂದ ಅನುದಾನ ತಂದು ಕ್ಷೇತ್ರದ ಸಮಗ್ರ ಅಭಿವೃದ್ದಿ ಮಾಡುವುದೇ ನನ್ನ ಗುರಿ ಎಂದರು.

ಕಪ್ಪಡಿ ಕ್ಷೇತ್ರದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆಗೆ ೨೫ ಕೋಟಿ ರೂಗಳ ಅಂದಾಜು ಪಟ್ಟಿಯ ಪ್ರಸ್ತಾವನೆ ಸಲ್ಲಿಸಲಾಗಿದ್ದು ಹಣ ಮಂಜೂರಾದ ಕೂಡಲೇ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಈ ಸೇತುವೆ ನಿರ್ಮಾಣವಾದರೆ ಸಾಲಿಗ್ರಾಮ, ಮಿರ್ಲೆ, ಗಂಧನಹಳ್ಳಿ ಸೇರಿದಂತೆ ಹಲವು ಗ್ರಾಮಸ್ಥರು ಕೆ.ಆರ್.ನಗರಕ್ಕೆ ಬರಲು ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.
ಪುರಸಭೆ ಸದಸ್ಯರಾದ ಜಾವಿದ್‌ಪಾಷ, ಸೈಯದ್‌ಸಿದ್ದಿಕ್, ಜಾಮೀಯಾ ಮಸೀದಿ ಕಮಿಟಿ ಅಧ್ಯಕ್ಷ ಅಪ್ಸರ್‌ಬಾಬು ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯದ್‌ಜಾಬೀರ್, ಪುರಸಭೆ ಸದಸ್ಯರಾದ ಕೋಳಿಪ್ರಕಾಶ್, ಕೆ.ಎಸ್.ಶಂಕರ್, ಶಿವಕುಮಾರ್, ನಟರಾಜು, ಶಂಕರ್, ಮಾಜಿ ಅಧ್ಯಕ್ಷರಾದ ಗೀತಾಮಹೇಶ್, ನರಸಿಂಹರಾಜು, ಮಾಜಿ ಸದಸ್ಯ ಕೆ.ವಿನಯ್, ಮುಖಂಡರಾದ ಪುಟ್ಟರಾಜು, ಆದರ್ಶ, ನವೀದ್, ಧರ್ಮರಾಜು, ಮುಖ್ಯಾಧಿಕಾರಿ ಡಾ.ಜಯಣ್ಣ ಮತ್ತಿತರರು ಹಾಜರಿದ್ದರು.