Saturday, April 19, 2025
Google search engine

Homeರಾಜ್ಯಅರಣ್ಯ ನಾಶ ತಡೆದರೆ ಮಾತ್ರ ಭವಿಷ್ಯದಲ್ಲಿ ಉತ್ತಮ ಆರೋಗ್ಯ ಸಿಗಲು ಸಾಧ್ಯ: ಶಾಸಕ ಡಿ.ರವಿಶಂಕರ್

ಅರಣ್ಯ ನಾಶ ತಡೆದರೆ ಮಾತ್ರ ಭವಿಷ್ಯದಲ್ಲಿ ಉತ್ತಮ ಆರೋಗ್ಯ ಸಿಗಲು ಸಾಧ್ಯ: ಶಾಸಕ ಡಿ.ರವಿಶಂಕರ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆ‌ರ್.ನಗರ: ಪರಿಸರವನ್ನು ಬೆಳೆಸಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದ್ದು, ನಿರಂತರವಾಗಿ ನಾಶವಾಗುತ್ತಿರುವ ಅರಣ್ಯ ನಾಶ ತಡೆದರೆ ಮಾತ್ರ ನಮಗೆ ಭವಿಷ್ಯದಲ್ಲಿ ಉತ್ತಮ ಆರೋಗ್ಯ ಸಿಗಲು ಸಾಧ್ಯ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರಣ್ಯ ಇಲಾಖೆಯ ವತಿಯಿಂದ ನಡೆದ 74ನೇ ವನ ಮಹೋತ್ಸವ ಕಾರ್ಯಕ್ರಮಕ್ಕೆ ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಮನುಷ್ಯನ ದುರಾಸೆಯಿಂದ ನಿತ್ಯ ಸಾವಿರಾರು ಎಕರೆ ಅರಣ್ಯ ನಾಶವಾಗುತ್ತಿದ್ದು, ವಿದ್ಯಾರ್ಥಿಗಳು ಈ ವಿಚಾರವನ್ನು ಎಲ್ಲರಿಗೂ ತಿಳಿಸಬೇಕು. ಇದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮ ವನ್ನು ತಡೆಯಲು ಪರಸ್ಪರ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಜನ್ಮ ದಿನ ಆಚರಣೆ ಮಾಡಿಕೊಳ್ಳುವವರು ಒಂದು ಗಿಡನೆಡುವ ಅಭ್ಯಾಸಬೆಳೆಸಿಕೊಳ್ಳಬೇಕೆಂದು ಸಲಹೆನೀಡಿದಶಾಸಕರು, ಪ್ರಕೃತಿಯಸಮತೋಲನ ಕಾಪಾಡಬೇಕಾದರೆ ಶೇ.33ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ ಈಗ ಅದು ಶೇ.2ರಷ್ಟಿದ್ದು, ನಾವು ಅರಣ್ಯವನ್ನು ಬೆಳೆಸುವ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಬೇಕಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಪ್ರತಿ ವರ್ಷ 5 ಕೋಟಿ ಗಿಡಗಳನ್ನು ನೆಡುವ ಯೋಜನೆ ಹಮ್ಮಿಕೊಂಡಿದ್ದು, 5 ವರ್ಷಗಳಲ್ಲಿ 25 ಕೋಟಿ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ತಹಸೀಲ್ದಾರ್ ಪೂರ್ಣಿಮಾ, ಪುರಸಭಾಧಿಕಾರಿ ಡಾ.ಜಯಣ್ಣ, ಅರಣ್ಯಾಧಿಕಾರಿ ಎಂ.ಆರ್.ರಶ್ಮಿ, ಅರಣ್ಯಾಧಿಕಾರಿ ಸಾಮಾಜಿಕ ವಲಯ ಟಿ.ವಿ.ಹರಿಪ್ರಸಾದ್, ಉಪವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ್, ಹರೀಶ್, ಶೋಭಾ, ಪುರಸಭಾ ಸದಸ್ಯ ಪ್ರಕಾಶ್, ಕಾಲೇಜು ಸಿಡಿಸಿ ಸದಸ್ಯ ವೇಣುಗೋಪಾಲ್, ರಾಘವೇಂದ್ರ, ಉಪನ್ಯಾಸಕ ಹಾಜರಿದ್ದರು. ಗ್ರಂಥಪಾಲಕ ವರದರಾಜು ತಿಪ್ಪೇಸ್ವಾಮಿ, ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular