Sunday, April 20, 2025
Google search engine

Homeರಾಜಕೀಯಸಿಎಂ ಬದಲಾವಣೆ ವಿಚಾರವಾಗಿ ಯಾರೂ ಕೂಡ ಚರ್ಚೆ ಮಾಡಿಲ್ಲ: ಶಾಸಕ ಕದಲೂರು ಉದಯ್

ಸಿಎಂ ಬದಲಾವಣೆ ವಿಚಾರವಾಗಿ ಯಾರೂ ಕೂಡ ಚರ್ಚೆ ಮಾಡಿಲ್ಲ: ಶಾಸಕ ಕದಲೂರು ಉದಯ್

ಮದ್ದೂರು: ಸಿಎಂ ಬದಲಾವಣೆ ವಿಚಾರವಾಗಿ ಯಾರೂ ಕೂಡ ಚರ್ಚೆ ಮಾಡಿಲ್ಲ. ಸಿಎಂ, ಡಿಸಿಎಂ ವಿಚಾರವನ್ನು ಯಾರು ಪ್ರಸ್ತಾಪಿಸುತ್ತಿಲ್ಲ ಎಂದು ಶಾಸಕ ಕದಲೂರು ಉದಯ್ ಹೇಳಿದ್ದಾರೆ.

ಮದ್ದೂರಿನ ಮಾರ್ಸಿಂಗನಹಳ್ಳಿ ಗ್ರಾಮದಲ್ಲಿ  ಮಾತನಾಡಿದ ಅವರು, ಏನಾದರೂ ಬದಲಾವಣೆ ಇದ್ದರೆ ಅದನ್ನ ಹೈಕಮಾಂಡ್ ನೋಡಿಕೊಳ್ಳುತ್ತಾರೆ. ಅದನ್ನು ಬಿಟ್ಟು ಯಾರೋ ಮಾತಾಡಿದನ್ನ ಎತ್ತು ತೋರಿಸುವ ಕೆಲಸ ಮಾಡಬಾರದು ಎಂದರು.

ಬೆಂಗಳೂರಿನ ಕೆಂಪೇಗೌಡ ಜಯಂತಿಯಲ್ಲಿ ಸ್ವಾಮೀಜಿ ರವರು ಅವರ ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದನ್ನು ತಪ್ಪು ಅಂತ ನಾವು ಹೇಳಲು ಸಾಧ್ಯವಿಲ್ಲ. ಅದನ್ನು ಅಂತಿಮವಾಗಿ ನಮ್ಮ ಪಕ್ಷ ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

ಚನ್ನಪಟ್ಟಣ ಬೈ ಎಲೆಕ್ಷನ್ ವಿಚಾರವಾಗಿ ಮಾತನಾಡಿ, ಚನ್ನಪಟ್ಟಣದಿಂದ ಯಾರು ಇರಬೇಕು ಎಂದು ಇನ್ನೂ ತೀರ್ಮಾನ ಆಗಿಲ್ಲ. ಡಿ ಕೆ ಶಿವಕುಮಾರ್ ಉಪಮುಖ್ಯಮಂತ್ರಿಗಳಾಗಿ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಅವರು ಬಂದು ಚುನಾವಣೆ ಎದುರಿಸಬೇಕಾದ ಅವಶ್ಯಕತೆ ಇಲ್ಲ. ಅದನ್ನು ಪಕ್ಷ ತೀರ್ಮಾನಿಸುತ್ತದೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular