ಮದ್ದೂರು :ತಾಲ್ಲೂಕಿನ ಮಾರಸಿಂಗನಹಳ್ಳಿ ಗ್ರಾಮದಲ್ಲಿ ಸೋಮವಾರ 4.85 ಲಕ್ಷ ರೂ. ಗಳ ವೆಚ್ಚದ ಕೆರೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಉದಯ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು,ಮಾರಸಿಂಗನಹಳ್ಳಿಗೆ ನಾನು ಮೊಮ್ಮಗ ಹಾಗೂ ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳೀಗೌಡ ರವರು ಇದೇ ಗ್ರಾಮದ ಮಗ ಆಗಿದ್ದಾರೆ ಆದ್ದರಿಂದ ನಮ್ಮ ಗ್ರಾಮ ಎಂಬ ಪ್ರೀತಿಯಿಂದಾಗೆಯೇ ಇಂದು ಒಂದೇ ಗ್ರಾಮಕ್ಕೆ ಸುಮಾರು 5 ಕೋಟಿ ರೂಗಳ ಕೆರೆ ಹಾಗೂ ರಸ್ತೆಯ ಅಭಿವೃದ್ಧಿಗೆ ಚಾಲನೆಯನ್ನು ನೀಡಲಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳೀಗೌಡ ಮಾತನಾಡಿ, 1100 ಕೋಟಿ ರೂ ಹಣವನ್ನು ಶೂನ್ಯ ಬಡ್ಡಿ ದರದಲ್ಲಿ ನೀಡಲು ರಾಜ್ಯ ಸರ್ಕಾರವು ಮುಂದಾಗಿದ್ದು, ಇದರಿಂದಾಗಿ ಸುಮಾರು 1.5 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದ ಅವರು ಕ್ಷೇತ್ರದ ಶಾಸಕರಾದ ಕದಲೂರು ಉದಯ್ ರವರು ಪ್ರಯತ್ನದ ಫಲವಾಗಿ ಇದುವೆರೆಗೂ ಸುಮಾರು 500 ಕೋಟಿಗೂ ಹೆಚ್ಚು ಅನುದಾನವನ್ನು ತಂದಿದ್ದು ಅದರಲ್ಲಿ ಸುಮಾರು 250 ಕೋಟಿರೂಗಳನ್ನು ತಾಲ್ಲೂಕಿನ ನೀರಾವರಿ ಯೋಜನೆಗಳಿಗೆ ತಂದಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.
ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ,ಗ್ರಾ ಪಂ ಅಧ್ಯಕ್ಷರಾದ ಗೀತಾ, ಉಪಾಧ್ಯಕ್ಷ ರಾದ ಗೂಳೆಶ್ ಗೌಡ, ಮುಖಂಡರಾದ ಪುಟ್ಟಸ್ವಾಮಿ ಇತರರು ಇದ್ದರು.