Saturday, April 19, 2025
Google search engine

Homeರಾಜಕೀಯರಾಜ್ಯಕ್ಕೆ ಪಕ್ಷಕ್ಕೆ ನಿಮ್ಮ ಕೊಡುಗೆ ಏನು ?: ಸ್ವಪಕ್ಷದವರ ವಿರುದ್ಧ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ

ರಾಜ್ಯಕ್ಕೆ ಪಕ್ಷಕ್ಕೆ ನಿಮ್ಮ ಕೊಡುಗೆ ಏನು ?: ಸ್ವಪಕ್ಷದವರ ವಿರುದ್ಧ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ

ಬೆಂಗಳೂರು:   ಮತ ಪಡೆಯಲು ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮುಖ ತೋರಿಸುತ್ತೀರಿ. ಹಾಗಾದರೇ ರಾಜ್ಯಕ್ಕೆ ಪಕ್ಷಕ್ಕೆ ನಿಮ್ಮ ಕೊಡುಗೆ ಏನು ಎಂದು ಸ್ವಪಕ್ಷದವರ ವಿರುದ್ಧ ಮತ್ತೆ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

ಇಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರನ್ನ ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ನನ್ನ ಹೋರಾಟ, ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಿಮಗೆ ಅಪಮಾನ ಮಾಡಿದ್ರೆ ಸುಮ್ಮನಿರಲ್ಲ ಎಂದು ಬಿಎಸ್ ವೈಗೆ ಹೇಳಿದೆ. ಬಿಎಸ್ ವೈರಿಗೆ  ವಯಸ್ಸಾಗಿದೆ ಎಂದು ಹೇಳಿ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರಿ. ಹಾಗಾದರೇ ರಾಜ್ಯಪ್ರವಾಸ ಮಾಡಲು ಬಿಎಸ್ ವೈ ಬೇಕು ವೋಟ್ ಕೇಳಲು ಬಿಎಸ್ ವೈ ಬೇಕು.  ಹಾಗಾದರೆ ರಾಜ್ಯಕ್ಕೆ, ಪಕ್ಷಕ್ಕೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಬಿಎಸ್ ವೈ ಮಾತಿಗೆ ಗೌರವ ಕೊಡುತ್ತೇನೆ. ಇನ್ನು ಮುಂದೆ ನಾನು ಎಲ್ಲವನನ್ನೂ ಬಹಿರಂಗವಾಗಿ ಮಾತನಾಡಲ್ಲ. ನನಗೆ ಬಿಎಸ್ ವೈ, ಪ್ರಧಾನಿ ಮೋದಿ, ಪಕ್ಷದ ಆಶೀರ್ವಾದವಿದೆ ಯಾರಿಗೂ ಹೆದರಲ್ಲ ನನ್ನನ್ನ ತುಳಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಟಾಂಗ್ ನೀಡಿದರು.

RELATED ARTICLES
- Advertisment -
Google search engine

Most Popular