Saturday, April 19, 2025
Google search engine

Homeರಾಜ್ಯಸುದ್ದಿಜಾಲಮಂಗಳೂರು:ಸಮವಸ್ತ್ರದಲ್ಲೇ ಹೊಂಡ ಮುಚ್ಚಿ ಸಾಮಾಜಿಕ ಕಳಕಳಿಯ ಪಾಠ ಕಲಿಸಿದ ಪೊಲೀಸ್ ಸಬ್ ಇನ್ಸ್ ಪೆಕ್ಟರ್

ಮಂಗಳೂರು:ಸಮವಸ್ತ್ರದಲ್ಲೇ ಹೊಂಡ ಮುಚ್ಚಿ ಸಾಮಾಜಿಕ ಕಳಕಳಿಯ ಪಾಠ ಕಲಿಸಿದ ಪೊಲೀಸ್ ಸಬ್ ಇನ್ಸ್ ಪೆಕ್ಟರ್

ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ಕೆಪಿಟಿ ಬಳಿ ರಸ್ತೆಯಲ್ಲಿ ಮಂಗಳೂರು ನಗರ ಪೂರ್ವ ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್ ಈಶ್ವರ ಸ್ವಾಮಿ ಎಂಬುವವರು ಸಮವಸ್ತ್ರ ಧರಿಸಿದ್ದರೂ ರಸ್ತೆಯಲ್ಲಿ ಉಂಟಾಗಿದ್ದ ಹೊಂಡ ಮುಚ್ಚಿ ಮಾದರಿಯಾಗಿದ್ದಾರೆ. ಈ ರಸ್ತೆಯಲ್ಲಿ ಹಲವು ದಿನಗಳಿಂದ ಡಾಂಬಾರು ಕಿತ್ತು ಬಂದಿತ್ತು.ವಾಹನ ಸವಾರರು, ಪಾದಚಾರಿಗಳು ಸಮಸ್ಯೆ ಅನುಭವಿಸುತ್ತಿದ್ದರು. ಸಹೋದ್ಯೋಗಿಯ ನೆರವಿನ ಜೊತೆಗೆ ತಾನೂ ದುಡ್ಡು ಒಟ್ಟುಗೂಡಿಸಿ ಗುಂಡಿ ಮುಚ್ಚಲು ಬೇಕಾದ ಸಾಮಾಗ್ರಿಗಳನ್ನು ಸಂಗ್ರಹಿಸಿದ್ದಲ್ಲದೇ ತಾವೇ ಸಲಾಕೆ ಹಿಡಿದು ಗುಂಡಿ ಮುಚ್ಚಿ ಗಮನ ಸೆಳೆದ್ರು.

RELATED ARTICLES
- Advertisment -
Google search engine

Most Popular