ಮೈಸೂರು: ನಗರಾಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿ ಎ.ಎನ್. ರಘುನಂದನ್ ಅವರನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಆಯುಕ್ತರನ್ನಾಗಿ ಸರ್ಕಾರ ವರ್ಗಾಯಿಸಿದ್ದು, ಮಂಗಳವಾರ ಸಂಜೆಯೇ ಅವರು ಮುಡಾ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಕರ್ನಾಟಕ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ನಿಗಮದ ಪ್ರಧಾನ ವ್ಯವಸ್ಥಾಪಕ ವಿ.ಕೆ. ಪ್ರಸನ್ನಕುಮಾರ್ ಅವರನ್ನು ಮುಡಾ ಕಾರ್ಯದರ್ಶಿಯಾಗಿ ಸರ್ಕಾರ ವರ್ಗಾಯಿಸಿದೆ.